ಸಾಂದರ್ಭಿಕ ಚಿತ್ರ 
ವಿದೇಶ

ಅಲಸ್ಕಾದಲ್ಲಿ 7.4 ತೀವ್ರತೆಯ ಭಾರಿ ಭೂಕಂಪನ; ಸುನಾಮಿ ಎಚ್ಚರಿಕೆ

ಅಮೆರಿಕದ ಅಲಾಸ್ಕ ಬಳಿ ಭೀಕರ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ.

ನವದೆಹಲಿ: ಅಮೆರಿಕದ ಅಲಾಸ್ಕ ಬಳಿ ಭೀಕರ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ.

ಅಲಸ್ಕಾದ ಪೆನಿನ್ಸುಲಾ ಪ್ರದೇಶದ ಬಳಿ ಇಂದು ಭೂಕಂಪ ಸಂಭವಿಸಿದೆ ಎಂದು ಯುಎಸ್‌ ಜಿಯಾಲಜಿಕಲ್ ಸರ್ವೇ ಸಂಸ್ಥೆ ಹೇಳಿದ್ದು ಸುನಾಮಿ ಎಚ್ಚರಿಕೆಯನ್ನು ಸಹ ನೀಡಲಾಗಿದೆ.

ಭೂಕಂಪ ಮಾಪನ ಕೇಂದ್ರ ಅಲಾಸ್ಕ, ಪೆನಿನ್ಸುಲಾ ದ್ವೀಪದದಲ್ಲಿ ಭೂಮಿಯಿಂದ 9.3 ಕಿ. ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದ್ದು, 7.4 ತೀವ್ರತೆಯ ಭೂಕಂಪ ಸಂಭವಿಸಿರುವುದರಿಂದ ಸುನಾಮಿ ಸಾಧ್ಯತೆ ಇದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಖಚಿತಪಡಿಸಿದೆ. 

ಅಮೆರಿಕದ ಅಲಸ್ಕಾ ದ್ವೀಪದಲ್ಲಿ ಭೂಕಂಪ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ಹಲವಾರು ವರ್ಷಗಳಿಂದ ಅಲಸ್ಕಾ, ಪೆನಿನ್ಸುಲಾ ದ್ವೀಪದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಬಾರಿ ಭೂಕಂಪ ಸಂಭವಿಸಿದೆ. ಆಗ ಸುನಾಮಿಯ ಎಚ್ಚರಿಕೆಯನ್ನು ಸಹ ನೀಡಲಾಗಿತ್ತು. ಎರಡು ವಾರಗಳ ಹಿಂದೆ ಅಲಾಸ್ಕಾದ ಆಂಕಾರೇಜ್‌ನಲ್ಲಿ ಲಘು ಭೂಕಂಪ ಸಂಭವಿಸಿತ್ತು.

2020ರ ಜುಲೈನಲ್ಲಿ 7.8ರಷ್ಟು ತೀವ್ರತೆಯ ಭೂಕಂಪ ಈ ಭಾಗದಲ್ಲಿ ಸಂಭವಿಸಿತ್ತು. ಆಗಲೂ ಭೂಕಂಪ ಪ್ರಬಲವಾಗಿದ್ದ ಕಾರಣ ದಕ್ಷಿಣ ಅಲಸ್ಕಾ, ಅಲಸ್ಕಾ ಪೆನಿನ್ಸುಲಾ ಮತ್ತು ಅಲ್ಯೂಶಿಯನ್ ದ್ವೀಪಗಳ ಸುತ್ತಲಿನ 300 ಕಿ. ಮೀ. ವಿಸ್ತೀರ್ಣಕ್ಕೆ ಸುನಾಮಿ ಎಚ್ಚರಿಕೆಯನ್ನು ಕೊಡಲಾಗಿತ್ತು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್