ವಿದೇಶ

ಮಿತ್ರರಾಷ್ಟ್ರ ಪಾಕಿಸ್ತಾನಕ್ಕೆ ಸುಮಾರು 2.4 ಶತಕೋಟಿ ಡಾಲರ್ ಸಾಲ ನೀಡಿದ ಚೀನಾ!

Nagaraja AB

ಇಸ್ಲಾಮಾಬಾದ್: ವಿದೇಶಿ ವಿನಿಮಯ ಮೀಸಲಿನಲ್ಲಿ ನಗದು ಕೊರತೆಯಿಂದ ಬಳಲುತ್ತಿರುವ ಮಿತ್ರ ರಾಷ್ಟ್ರ ಪಾಕಿಸ್ತಾನಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಚೀನಾ ಸುಮಾರು 2.4 ಶತಕೋಟಿ ಡಾಲರ್  ಸಾಲವನ್ನು ನೀಡಿರುವುದಾಗಿ ಹಣಕಾಸು ಸಚಿವ ಇಶಾಕ್ ದಾರ್ ಗುರುವಾರ ಹೇಳಿದ್ದಾರೆ.

ಮುಂದಿನ ಎರಡು ಆರ್ಥಿಕ ವರ್ಷಗಳಲ್ಲಿ ಪಾಕಿಸ್ತಾನ ಸಾಲವನ್ನು ಪಾವತಿಸಲಿದೆ ಎಂದು ದಾರ್ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಮುಂದಿನ ಎರಡು ಆರ್ಥಿಕ ವರ್ಷಗಳಾಗಿ ಚೀನಿ ಎಕ್ಸೀಂ ಬ್ಯಾಂಕ್ 2.4 ಶತಕೋಟಿ ಡಾಲರ್ ಸಾಲವನ್ನು ನೀಡಿದ್ದು, ಪಾಕಿಸ್ತಾನ ಎರಡು ವರ್ಷಗಳ ಕಾಲ ಬಡ್ಡಿ ಮಾತ್ರ ಪಾವತಿಸುತ್ತದೆ ಎಂದು ಅವರು ಹೇಳಿದ್ದಾರೆ. 

ರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ಮಿತ್ರ ರಾಷ್ಟ್ರ ಚೀನಾ 600 ಮಿಲಿಯನ್ ಡಾಲರ್ ಸಾಲವನ್ನು ನೀಡಲಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಕಳೆದ ವಾರವಷ್ಟೇ ಹೇಳಿಕೊಂಡಿದ್ದರು. ಚೀನಾ ಕಳೆದ ಮೂರು ತಿಂಗಳಲ್ಲಿ ಪಾಕಿಸ್ತಾನಕ್ಕೆ 5 ಶತಕೋಟಿ ಡಾಲರ್  ಗಿಂತ ಹೆಚ್ಚಿನ ಸಾಲವನ್ನು ನೀಡಿತ್ತು. ಇದೀಗ ಮತ್ತೆ 2.4 ಶತಕೋಟಿ ಡಾಲರ್ ನೀಡುವ ಮೂಲಕ ಪಾಕಿಸ್ತಾನ ಆರ್ಥಿಕ ಸಂಕಷ್ಟದಿಂದ ಹೊರಬರಲು ಚೀನಾ ಪ್ರಯತ್ನಿಸುತ್ತಿದೆ. 

SCROLL FOR NEXT