ವಿದೇಶ

ಅಫ್ಘಾನ್ ಸ್ವಾಧೀನಪಡಿಸಿಕೊಂಡ ನಂತರ ಎರಡನೇ ಸಾರ್ವಜನಿಕ ಮರಣದಂಡನೆ ವಿಧಿಸಿದ ತಾಲಿಬಾನ್!

Vishwanath S

ಅಫ್ಘಾನಿಸ್ತಾನದ ಮಸೀದಿಯೊಂದರ ಆವರಣದಲ್ಲಿ ಅಪರಾಧಿ ಕೊಲೆಗಾರನನ್ನು ಇಂದು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2021ರ ಆಗಸ್ಟ್ ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಎರಡನೇ ಸಾರ್ವಜನಿಕ ಮರಣದಂಡನೆ ಇದಾಗಿದೆ.

ನಂತರ ಲಗ್ಮನ್ ಪ್ರಾಂತ್ಯದ ಕೇಂದ್ರವಾದ ಸುಲ್ತಾನ್ ಗಾಜಿ ಬಾಬಾ ಪಟ್ಟಣದಲ್ಲಿ ಅಪರಾಧಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಇದು ಅಪರಾಧ ಮಾಡುವ ಇತರರಿಗೆ ಪಾಠವಾಗುತ್ತಾರೆ ಎಂದು ಪ್ರಾಂತೀಯ ಮಾಹಿತಿ ಅಧಿಕಾರಿಗಳ ಹೇಳಿಕೆ ತಿಳಿಸಿದೆ.

1996ರಿಂದ 2001ರವರೆಗಿನ ತಾಲಿಬಾನ್‌ನ ಮೊದಲ ಆಳ್ವಿಕೆಯಲ್ಲಿ ಸಾರ್ವಜನಿಕ ಮರಣದಂಡನೆಗಳು ಸಾಮಾನ್ಯವಾಗಿದ್ದರೂ, ಅಧಿಕಾರಕ್ಕೆ ಮರಳಿದ ನಂತರ ಅವರು ನಡೆಸಿದ ಏಕೈಕ ಮರಣದಂಡನೆಯು ಕಳೆದ ವರ್ಷ ಡಿಸೆಂಬರ್‌ನಲ್ಲಿ ಫರಾಹ್ ಪ್ರಾಂತ್ಯದಲ್ಲಿತ್ತು.

ಕಳ್ಳತನ, ವ್ಯಭಿಚಾರ ಮತ್ತು ಮದ್ಯಪಾನ ಸೇರಿದಂತೆ ಇತರ ಅಪರಾಧಗಳಿಗಾಗಿ ನಿಯಮಿತವಾದ ಸಾರ್ವಜನಿಕ ಥಳಿತಗಳು ನಡೆಯುತ್ತಿವೆ. ಅಧಿಕಾರಿಗಳು ಅಪರಾಧಿಯನ್ನು ಅಜ್ಮಲ್ ಎಂದು ಹೆಸರಿಸಿದ್ದಾರೆ. ಈತ ಐವರನ್ನು ಹತ್ಯೆ ಮಾಡಿದ್ದನು ಎಂದು ತಿಳಿಸಿದ್ದಾರೆ. 

ಪ್ರಾಂತೀಯ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು, ಈ ಸಾರ್ವಜನಿಕ ಮರಣದಂಡನೆಯನ್ನು ಮೃತನ ಸಂಬಂಧಿಕರು ಸೇರಿದಂತೆ 2,000 ಮಂದಿ ವೀಕ್ಷಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಶಿಕ್ಷೆ ಮತ್ತು ಮರಣದಂಡನೆಯನ್ನು ಷರಿಯಾ ಕಾನೂನಿನ ಪ್ರಕಾರ ನೀಡಲಾಗುತ್ತದೆ.

SCROLL FOR NEXT