ಶ್ರೀಲಂಕಾದಲ್ಲಿ ಏಪ್ರಿಲ್ 25 ಕ್ಕೆ ಸ್ಥಳೀಯ ಚುನಾವಣೆ: ಚುನಾವಣಾ ಆಯೋಗ
ಶ್ರೀಲಂಕಾದ ಸ್ಥಳೀಯ ಚುನಾವಣೆ ಏ.25 ಕ್ಕೆ ನಡೆಯಲಿದೆ ಎಂದು ಅಲ್ಲಿನ ಚುನಾವಣಾ ಆಯೋಗ ಹೇಳಿದೆ.
ಕೊಲಂಬೋ: ಶ್ರೀಲಂಕಾದ ಸ್ಥಳೀಯ ಚುನಾವಣೆ ಏ.25 ಕ್ಕೆ ನಡೆಯಲಿದೆ ಎಂದು ಅಲ್ಲಿನ ಚುನಾವಣಾ ಆಯೋಗ ಹೇಳಿದೆ.
ಮಾರ್ಚ್ 9 ಕ್ಕೆ ಈ ಸ್ಥಳೀಯ ಚುನಾವಣೆಗಳು ನಿಗದಿಯಾಗಿತ್ತು. ಆದರೆ ದೇಶದ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ ಸಮಸ್ಯೆಗಳ ಕಾರಣದಿಂದ ಚುನಾವಣೆಯನ್ನು ಮುಂದೂಡಲ್ಪಟ್ಟಿತ್ತು.
ಜಿಲ್ಲೆಗಳ ಚುನಾವಣಾ ಅಧಿಕಾರಿಗಳು ಶೀಘ್ರವೇ ಹೊಸ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿತ್ತು. ಚುನಾವಣೆ ನಡೆಸುವುದಕ್ಕೆ ವ್ಯವಸ್ಥೆ ಮಾಡಲು ಸುಪ್ರೀಂ ಕೋರ್ಟ್ ನಿಂದ ನಿರ್ದೇಶನ ಪಡೆದಿದ್ದ ಅಧಿಕಾರಿಗಳೊಂದಿಗೆ ಆಯೋಗ ಸಭೆ ನಡೆಸಿದ ಬಳಿಕ ಹೊಸ ದಿನಾಂಕ ಘೋಷಣೆಯಾಗಿದೆ.
2023 ರ ಬಜೆಟ್ ನಲ್ಲಿ 340 ಸ್ಥಳೀಯ ಪರಿಷತ್ ಗಳಿಗೆ ಚುನಾವಣೆ ನಡೆಸುವುದಕ್ಕೆ ಘೋಷಿಸಿದ್ದ ಹಣವನ್ನು ಬಿಡುಗಡೆ ಮಾಡುವುದಕ್ಕೆ ಕಳೆದ ವಾರ ಲಂಕಾ ಸುಪ್ರೀಂ ಕೋರ್ಟ್ ಖಜಾನೆಯ ಕಾರ್ಯದರ್ಶಿಗೆ ಆದೇಶ ನೀಡಿದ್ದರು.
ಚುನಾವಣೆ ನಡೆಸಲು ಹಣ ಬಿಡುಗಡೆ ಮಾಡದ ಅಧಿಕಾರಿಗಳ ವಿರುದ್ಧ ಮುಖ್ಯ ವಿಪಕ್ಷ ಸಮಾಗಿ ಜನ ಬಲವೇಗಾಯ (ಎಸ್ ಜೆಬಿ) ಪಕ್ಷದ ಸಂಸದರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.