ಅನುಪ್ ಜಲೋಟಾ 
ವಿದೇಶ

ಪಾಕಿಸ್ತಾನ ಕೂಡಾ ಮೋದಿಯನ್ನು ಪ್ರೀತಿಸುತ್ತದೆ, ಅವರಂತಹ ನಾಯಕನನ್ನು ಬಯಸುತ್ತದೆ: ಅನುಪ್ ಜಲೋಟಾ

ಪ್ರಧಾನಿ ಮೋದಿ ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದು, ಪಾಕಿಸ್ತಾನ ಕೂಡಾ ಅವರನ್ನು ಪ್ರೀತಿಸುತ್ತದೆ ಮತ್ತು ಅವರಂತಹ ನಾಯಕನನ್ನು ಬಯಸುತ್ತದೆ ಎಂದು ಖ್ಯಾತ ಗಾಯಕ ಅನುಪ್ ಜಲೋಟಾ ಮಂಗಳವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೇಳಿದರು.

ಸಿಡ್ನಿ: ಪ್ರಧಾನಿ ಮೋದಿ ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದು, ಪಾಕಿಸ್ತಾನ ಕೂಡಾ ಅವರನ್ನು ಪ್ರೀತಿಸುತ್ತದೆ ಮತ್ತು ಅವರಂತಹ ನಾಯಕನನ್ನು ಬಯಸುತ್ತದೆ ಎಂದು ಖ್ಯಾತ ಗಾಯಕ ಅನುಪ್ ಜಲೋಟಾ ಮಂಗಳವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೇಳಿದರು.

ಅನಿವಾಸಿ ಭಾರತೀಯರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅನುಪ್ ಜಲೋಟಾ, ಪ್ರಪಂಚದಾದ್ಯಂತ ಜನರು ಮೋದಿಜಿಯನ್ನು ತುಂಬಾ ಪ್ರೀತಿಸುತ್ತಾರೆ. ಈಗ ಪಾಕಿಸ್ತಾನ ಕೂಡ ಮೋದಿಯನ್ನು ಪ್ರೀತಿಸುತ್ತಿದೆ ಎಂದರು.

ಪಾಕಿಸ್ತಾನದಲ್ಲಿ ವಾಸಿಸುವ ಎಲ್ಲಾ ಜನರು ಮೋದಿಜಿಯಂತಹ ನಾಯಕ ಬೇಕು ಎಂದು ಹೇಳಿದ್ದಾರೆ. ಹಾಗಾಗಿ ಪಾಕಿಸ್ತಾನ ಸೇರಿದಂತೆ ಇಡೀ ವಿಶ್ವದಾದ್ಯಂತ ಮೋದಿ ಜಿ ಅಂತಹ ಸುಂದರವಾದ ಪ್ರೀತಿಯನ್ನು ಸೃಷ್ಟಿಸಿದ್ದಾರೆ. ಎಲ್ಲರಿಗೂ ಪ್ರೀತಿಯನ್ನು ಹರಡಿದ್ದಾರೆ ಎಂದು ಪದ್ಮಶ್ರೀ  ಪ್ರಶಸ್ತಿ ಪುರಸ್ಕೃತ ಜಲೋಟಾ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ಹೇಳಿದರು.

ಸಿಡ್ನಿಯಲ್ಲಿರುವ ಎಲ್ಲಾ ಜನರ ಹೃದಯದಲ್ಲಿ ಮೋದಿ ಅವರು ಶಾಶ್ವತವಾಗಿ ಪ್ರಧಾನಿಯಾಗಬೇಕೆಂದು ಬಯಸುತ್ತಾರೆ. ಅವರನ್ನು ಪ್ರೀತಿಸುತ್ತಾರೆ. ಮೋದಿ ಇದ್ದರೆ ಸಂಬಂಧಗಳು ವೃದ್ಧಿಯಾಗುತ್ತವೆ. ಇದನ್ನೇ ಅವರು ಮಾಡುತ್ತಾರೆ. ಅವರು ಏಲ್ಲಿಗೆ ಹೋದರು ಪ್ರೀತಿಯಿಂದ ತುಂಬಿದ ಬುಟ್ಟಿಯೊಂದಿಗೆ ಬರುತ್ತಾರೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT