ವಿದೇಶ

ಅಮೇರಿಕಾ ಕಾಂಗ್ರೆಸ್ ಜಂಟಿ ಸೆಷನ್ ಗೆ ಪ್ರಧಾನಿ ಮೋದಿ ಗೆ ಆಹ್ವಾನ ನೀಡಲು ಒತ್ತಾಯ

Srinivas Rao BV

ವಾಷಿಂಗ್ ಟನ್: ಅಮೇರಿಕಾದ ಜಂಟಿ ಕಾಂಗ್ರೆಸ್ ಅಧಿವೇಶಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲು ಪ್ರಭಾವಿ ಕಾಂಗ್ರೆಸ್ ನ ಭಾರತೀಯ ಸಮಿತಿಯ ಸಹ-ಅಧ್ಯಕ್ಷರು ಒತ್ತಾಯಿಸಿದ್ದಾರೆ.
 
ಪ್ರಧಾನಿ ಮೋದಿ ಅವರ ಮುಂಬರುವ ಅಮೇರಿಕಾ ಭೇಟಿ ವೇಳೆ ಜಂಟಿ ಅಧಿವೇಶನಕ್ಕೆ ಆಹ್ವಾನಿಸಬೇಕು ಎಂದು ಸಭಾಧ್ಯಕ್ಷ ಕೆವಿನ್ ಮೆಕ್-ಕಾರ್ತಿ ಅವರನ್ನು ಒತ್ತಾಯಿಸಲಾಗಿದೆ.

ಜೂ.22 ರಂದು ಪ್ರಧಾನಿ ಮೋದಿಗೆ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರು ಆತಿಥ್ಯ ನೀಡಲಿದ್ದು, ಸರ್ಕಾರದ ವತಿಯಿಂದ ಔತಣಕೂಟ ಆಯೋಜಿಸಲಿದ್ದಾರೆ.

"ಕಾಂಗ್ರೆಸ್‌ ನ ಜಂಟಿ ಭಾಷಣಕ್ಕಾಗಿ ಪ್ರಧಾನಿ ಮೋದಿಯನ್ನು ಆಹ್ವಾನಿಸುವುದನ್ನು ಪರಿಗಣಿಸಲು ಗೌರವಪೂರ್ವಕವಾಗಿ ವಿನಂತಿಸುತ್ತೇವೆ. ಇದು ಯುಎಸ್-ಭಾರತದ ಕಾರ್ಯತಂತ್ರದ ಪಾಲುದಾರಿಕೆಯ ಮಹತ್ವ, ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ" ಎಂದು ಡೆಮಾಕ್ರಟಿಕ್ ಪಕ್ಷದ ಭಾರತೀಯ-ಅಮೆರಿಕನ್ ಕಾಂಗ್ರೆಸ್‌ನ ರೋ ಖನ್ನಾ ಮತ್ತು ರಿಪಬ್ಲಿಕನ್ ಪಾರ್ಟಿಯ ಕಾಂಗ್ರೆಸ್ಸಿಗ ಮೈಕೆಲ್ ವಾಲ್ಟ್ಜ್ ಮೆಕಾರ್ಥಿಗೆ ಪತ್ರ ಬರೆದಿದ್ದಾರೆ.

ಇಬ್ಬರು ಶಾಸಕರು ಅಮೇರಿಕಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ಮತ್ತು ಕಾಂಗ್ರೆಸ್‌ ನ ಜಂಟಿ ಸದನವನ್ನುದ್ದೇಶಿಸಿ ಮಾತನಾಡಲು ಅವಕಾಶ ನೀಡುವ ಮೂಲಕ ಪಾಲುದಾರಿಕೆಯನ್ನು ಮತ್ತಷ್ಟು ಉತ್ತೇಜಿಸಲು ಪ್ರಾಮುಖ್ಯತೆ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ವತಿಯಿಂದ ಔತಣ ಕೂಟ ಆಯೋಜಿಸುವುದು ಭೇಟಿ ನೀಡುವ ರಾಷ್ಟ್ರದ ಮುಖ್ಯಸ್ಥರಿಗೆ ಅಧ್ಯಕ್ಷರು ಸೂಚಿಸುವ ಅತ್ಯಂತ ಉನ್ನತ ಗೌರವವಾಗಿದೆ. ಇನ್ನು ಕಾಂಗ್ರೆಸ್ ನಲ್ಲಿ ಜಂಟಿ ಸದನವನ್ನುದ್ದೇಶಿಸಿ ಭಾಷಣ ಮಾಡಲು ಅವಕಾಶ ನೀಡುವುದರಿಂದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕನಿಗೆ ಮತ್ತು ಬಹುಶಃ 21 ನೇ ಶತಮಾನದಲ್ಲಿ ಚೀನಾವನ್ನು ಎದುರಿಸಲು ಅತ್ಯಂತ ನಿರ್ಣಾಯಕ ಪಾಲುದಾರನಿಗೆ ನೀಡುವ ಗೌರವವಾಗಿದೆ," ಎಂದು ಇಬ್ಬರು ಶಾಸಕರು ಪತ್ರದಲ್ಲಿ ಹೇಳಿದ್ದಾರೆ.

SCROLL FOR NEXT