ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಗಾಜಾ ಮುತ್ತಿಗೆಗೆ ಇಸ್ರೇಲ್ ಆದೇಶ: 2.3 ಮಿಲಿಯನ್ ಜನರಿಗೆ ವಿದ್ಯುತ್‌, ಆಹಾರ, ನೀರು ಪೂರೈಕೆ ಸ್ಥಗಿತ

ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ಮುತ್ತಿಗೆ ಹಾಕುವಂತೆ ಸೋಮವಾರ ಸೇನೆಗೆ ಆದೇಶಿಸಿದ ಇಸ್ರೇಲ್, ಗಾಜಾದ 2.3 ಮಿಲಿಯನ್ ಜನರಿಗೆ ವಿದ್ಯುತ್‌, ನೀರು, ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದೆ.

ಹಮಾಸ್ ಉಗ್ರರ ದಾಳಿ
Lingaraj Badiger
Updated On : 10 Oct 2023, 2:49 pm

ಜೆರುಸಲೇಂ: ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ಮುತ್ತಿಗೆ ಹಾಕುವಂತೆ ಸೋಮವಾರ ಸೇನೆಗೆ ಆದೇಶಿಸಿದ ಇಸ್ರೇಲ್, ಗಾಜಾದ 2.3 ಮಿಲಿಯನ್ ಜನರಿಗೆ ವಿದ್ಯುತ್‌, ನೀರು, ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದೆ.

ನಾವು ಗಾಜಾವನ್ನು ಸಂಪೂರ್ಣ ಸೀಜ್‌ ಮಾಡಿದ್ದೇವೆ. ಅಲ್ಲಿ ವಿದ್ಯುತ್, ಆಹಾರ, ನೀರು ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಗೃಹ ಅಥವಾ ವಾಣಿಜ್ಯ ಬಳಕೆ ಅನಿಲ ಪೂರೈಕೆ ಸಹ ಇರುವುದಿಲ್ಲ. ಎಲ್ಲವನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ಹಮಾಸ್ ಹಿಮ್ಮೆಟ್ಟಿಸಲು ಇಸ್ರೇಲ್ ನಿಂದ ಗಾಜಾ ಮೇಲೆ ಯುದ್ಧ ತೀವ್ರ: 1,100 ಕ್ಕೂ ಅಧಿಕ ಮಂದಿ ಬಲಿ​

Advertisement

Advertisement

ಹಮಾಸ್ ಉಗ್ರರು ನಡೆಸಿದ ಭಯಾನಕ ದಾಳಿಯಿಂದ ತತ್ತರಿಸಿರುವ ಇಸ್ರೇಲ್ ನಲ್ಲಿ 700ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇಸ್ರೇಲ್ ನಡೆಸಿದ ಪ್ರತಿದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿ 560ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

ಇದನ್ನು ಓದಿ: ಇಸ್ರೇಲ್ ಮೇಲಿನ ರಾಕೆಟ್ ದಾಳಿಯಲ್ಲಿ ಕೇರಳ ಮೂಲದ ಮಹಿಳೆಗೆ ಗಾಯ, ಆರೋಗ್ಯ ಸ್ಥಿರ!​

ಇಸ್ರೇಲ್ ಭೂ ಸೇನೆಗೆ ಕೈ ಜೋಡಿಸಲು 3 ಲಕ್ಷಕ್ಕೂ ಹೆಚ್ಚು ಮೀಸಲು ಪಡೆ ಯೋಧರಿಗೆ ಬುಲಾವ್ ನೀಡಲಾಗಿದೆ. ಗಾಜಾ ಪಟ್ಟಿಯಲ್ಲಿ ವಾಯು ಪಡೆ ಆರ್ಭಟಿಸುತ್ತಿದ್ದ ಬೆನ್ನಲ್ಲೇ ಭೂ ಸೇನೆ ಕೂಡಾ ಗಾಜಾ ಪಟ್ಟಿಗೆ ನುಗ್ಗಲಿದ್ದು, ಹಮಾಸ್ ಉಗ್ರರ ಹುಟ್ಟಡಗಿಸಲು ತೀರ್ಮಾನಿಸಿದೆ. ಈಗಾಗಲೇ ಇಸ್ರೇಲ್ ವಾಯು ಪಡೆ ನಡೆಸಿದ ನಿರಂತರ ಬಾಂಬ್ ದಾಳಿಯಿಂದ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ ತೀವ್ರವಾಗಿ ಏರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement