ಸರಬ್ಜಿತ್ ಸಿಂಗ್-ಅಮೀರ್ ಸರ್ಫರಾಜ್ 
ವಿದೇಶ

ಪಾಕ್ ಜೈಲಿನಲ್ಲಿ ಸರಬ್ಜಿತ್ ಸಿಂಗ್ ಹತ್ಯೆ ಮಾಡಿದ್ದ ಹಂತಕನಿಗೆ ಗುಂಡು; 'ಅಪರಿಚಿತ' ವ್ಯಕ್ತಿಗಳಿಂದ ಹತ್ಯೆ!

ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ರನ್ನು ಹತ್ಯೆ ಮಾಡಿದ್ದ ಭೂಗತ ಪಾತಕಿ ಅಮೀರ್ ಸರ್ಫರಾಜ್ ನನ್ನು ಎಂಬಾತನಿಂದ ಅಪರಿಚಿತ ದಾಳಿಕೋರರು ಹತ್ಯೆ ಮಾಡಿದ್ದಾರೆ.

ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ರನ್ನು ಹತ್ಯೆ ಮಾಡಿದ್ದ ಭೂಗತ ಪಾತಕಿ ಅಮೀರ್ ಸರ್ಫರಾಜ್ ನನ್ನು ಎಂಬಾತನಿಂದ ಅಪರಿಚಿತ ದಾಳಿಕೋರರು ಹತ್ಯೆ ಮಾಡಿದ್ದಾರೆ.

ಗುಪ್ತಚರ ಸಂಸ್ಥೆ ISI ಸೂಚನೆ ಮೇರೆಗೆ 2013ರಲ್ಲಿ ಪಾಕಿಸ್ತಾನದ ಕೋಟ್‌ ಲಖ್‌ಪತ್‌ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್‌ಜಿತ್‌ ಸಿಂಗ್‌ನನ್ನು ಸರ್ಫರಾಜ್‌ ಹತ್ಯೆ ಮಾಡಿದ್ದ. ಪಾಕಿಸ್ತಾನದಲ್ಲಿ ಸರಬ್ಜಿತ್ ಸಿಂಗ್ ಮೇಲೆ ದಾಳಿ ಮಾಡಿದ್ದಕ್ಕಾಗಿ ಸರ್ಫರಾಜ್ ಮತ್ತು ಇತರರ ವಿರುದ್ಧ ಪ್ರಕರಣವನ್ನು ದಾಖಲಿಸಲಾಯಿತು. ಆದರೆ ಸಾಕ್ಷ್ಯಾಧಾರಗಳ ಕೊರತೆಯ ಆಧಾರದ ಮೇಲೆ 2018ರಲ್ಲಿ ಅವರನ್ನು ಖುಲಾಸೆಗೊಳಿಸಲಾಗಿತ್ತು.

ಪಂಜಾಬ್‌ನ ತರ್ನ್ ತರನ್ ಜಿಲ್ಲೆಯ ಭಿಖಿವಿಂಡ್ ಗ್ರಾಮದ ರೈತ ಸರಬ್ಜಿತ್ ಸಿಂಗ್ ಅವರು 1990 ಆಗಸ್ಟ್ 30ರಂದು ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ಹೋಗಿದ್ದರು. ಅಲ್ಲಿ ಪಾಕಿಸ್ತಾನಿ ಸೇನೆ ಆತನನ್ನು ಬಂಧಿಸಿ ಜೈಲಿಗೆ ಹಾಕಿತು. ಪಾಕಿಸ್ತಾನವು ಸರಬ್ಜಿತ್ ಮೇಲೆ ಸುಳ್ಳು ಪ್ರಕರಣಗಳನ್ನು ಹಾಕಿತ್ತು. ಲಾಹೋರ್ ಮತ್ತು ಫೈಸಲಾಬಾದ್ ಬಾಂಬ್ ಸ್ಫೋಟಗಳಲ್ಲಿ ಸರಬ್ಜಿತ್ ಸಿಂಗ್ ಕೈವಾಡವಿದೆ ಎಂದು ಆರೋಪಿಸಿತು. ಬಾಂಬ್ ಸ್ಫೋಟದಲ್ಲಿ ಒಟ್ಟು 14 ಜನರು ಸಾವನ್ನಪ್ಪಿದ್ದರು. ಹೀಗಾಗಿ ಸರಬ್ಜಿತ್ಗೆ ಮರಣದಂಡನೆ ವಿಧಿಸಲಾಗಿತ್ತು.

ಸರಬ್ಜಿತ್ ಅವರ ಸಹೋದರಿ ದಲ್ಬೀರ್ ಮತ್ತು ಪತ್ನಿ ಸುಖಪ್ರೀತ್ ಅವರನ್ನು ಹೊರತುಪಡಿಸಿ, ಭಾರತ ಸರ್ಕಾರವು ಸರಬ್ಜಿತ್ ಅವರನ್ನು ಭಾರತಕ್ಕೆ ಮರಳಿ ಕರೆತರಲು ಹಲವು ಪ್ರಯತ್ನಗಳನ್ನು ಮಾಡಿತ್ತು. ಆದರೆ ಈ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಈ ಸಮಯದಲ್ಲಿ, ಪಾಕಿಸ್ತಾನದ ಲಾಹೋರ್‌ನ ಜೈಲಿನಲ್ಲಿ ಸರಬ್ಜಿತ್ ಮೇಲೆ ದಾಳಿ ಮಾಡಲಾಯಿತು. ಅದರಲ್ಲಿ ಅವರು ಪ್ರಾಣ ಕಳೆದುಕೊಂಡರು. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವಾಗ ಸರಬ್ಜಿತ್ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದರು. ಇದಾದ ನಂತರ ಅವರನ್ನು ಲಾಹೋರ್‌ನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರ ಜೀವ ಉಳಿಸಲಾಗಲಿಲ್ಲ.

ಕಳೆದ ಕೆಲವು ವರ್ಷಗಳಲ್ಲಿ, ಪಾಕಿಸ್ತಾನದಲ್ಲಿ ಭಾರತದ ಅನೇಕ ಶತ್ರು ಭಯೋತ್ಪಾದಕರು ಒಬ್ಬೊಬ್ಬರಾಗಿ ಹತ್ಯೆಯಾಗುತ್ತಿದ್ದಾರೆ. 'ಅಜ್ಞಾತ ದಾಳಿಕೋರರು' ಇದುವರೆಗೆ ಅನೇಕ ಭಯೋತ್ಪಾದಕರನ್ನು ಕೊಂದಿದ್ದಾರೆ. ಇತ್ತೀಚೆಗೆ, ಬ್ರಿಟಿಷ್ ಪತ್ರಿಕೆ ದಿ ಗಾರ್ಡಿಯನ್ ತನ್ನ ವರದಿಯಲ್ಲಿ 2019ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ, ಭಾರತೀಯ ಗುಪ್ತಚರ ಸಂಸ್ಥೆ RAW ವಿದೇಶಿ ನೆಲದಲ್ಲಿ 20 ಜನರನ್ನು ಹತ್ಯೆ ಮಾಡಿಸಿದೆ ಎಂದು ಹೇಳಿಕೊಂಡಿದೆ. ನವದೆಹಲಿಯು ಭಾರತದ ಶತ್ರುಗಳೆಂದು ಪರಿಗಣಿಸುವವರನ್ನು ಗುರಿಯಾಗಿಸುವ ನೀತಿಯನ್ನು ಜಾರಿಗೆ ತಂದಿದೆ. ಪಾಕಿಸ್ತಾನಿ ಅಧಿಕಾರಿಗಳ ಪ್ರಕಾರ, ಈ ಸಾವುಗಳು ಹೆಚ್ಚಾಗಿ ಯುಎಇಯಿಂದ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಗುಪ್ತಚರ ಸ್ಲೀಪರ್-ಸೆಲ್‌ಗಳಿಂದ ನಡೆಸಲ್ಪಟ್ಟಿವೆ. ಆದರೆ, ಆರೋಪಗಳನ್ನು ಭಾರತ ಸರ್ಕಾರ ತಿರಸ್ಕರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT