ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿ 
ವಿದೇಶ

ಇಮ್ರಾನ್ ಖಾನ್ ಪತ್ನಿ ಊಟದಲ್ಲಿ ಟಾಯ್ಲೆಟ್ ಕ್ಲಿನರ್ ಮಿಶ್ರಣ!

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಇಫ್ತಾರ್ ಊಟದಲ್ಲಿ ಕನಿಷ್ಠ ಎರಡರಿಂದ ಮೂರು ಹನಿ "ಟಾಯ್ಲೆಟ್ ಕ್ಲೀನರ್" ಬೆರೆಸಲಾಗಿದೆ ಎಂದು ಅವರ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಇಫ್ತಾರ್ ಊಟದಲ್ಲಿ ಕನಿಷ್ಠ ಎರಡರಿಂದ ಮೂರು ಹನಿ "ಟಾಯ್ಲೆಟ್ ಕ್ಲೀನರ್" ಬೆರೆಸಲಾಗಿದೆ ಎಂದು ಅವರ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಫೆಬ್ರವರಿ 24 ರಂದು ಶಾಬ್-ಎ-ಬರಾತ್‌ನಲ್ಲಿ ಕ್ಲೀನರ್ ಆಕೆಯ ಆಹಾರದೊಂದಿಗೆ ಬೆರೆಸಲಾಗಿದೆ ಎಂದು ಆರೋಪಿಸಲಾಗಿದೆ. "ಬುಶ್ರಾ ಬೀಬಿಯ ಇಫ್ತಾರ್ ಊಟಕ್ಕೆ ಎರಡು ಅಥವಾ ಮೂರು ಹನಿ ಟಾಯ್ಲೆಟ್ ಕ್ಲೀನರ್ ಹಾಕಲಾಗಿದೆ ಎಂಬುದು ಕಂಡುಬಂದಿದೆ ಎಂದು ಬುಶ್ರಾ ಬೀಬಿಯ ವಕ್ತಾರ ಮಶಾಲ್ ಯೂಸುಫ್‌ಜಾಯ್ ಉಲ್ಲೇಖಿಸಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.ಊಟ ತಿಂದ ನಂತರ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. 49 ವರ್ಷದ ಬುಶ್ರಾ ಬೀಬಿಗೆ ಟಾಯ್ಲೆಟ್ ಕ್ಲೀನರ್ ಮಿಶ್ರಿತ ಆಹಾರವನ್ನು ನೀಡಲಾಗಿದೆ ಎಂದು ಇಮ್ರಾನ್ ಖಾನ್ ಕೂಡಾ ಹಲವು ಬಾರಿ ಹೇಳಿಕೊಂಡಿದ್ದಾರೆ.

ಬಂಧನಕ್ಕೂ ಮುನ್ನ ಆಕೆಗೆ ರಕ್ತದೊತ್ತಡ, ಮಧುಮೇಹ ಸೇರಿದಂತೆ ಯಾವುದೇ ಸಮಸ್ಯೆ ಇರಲಿಲ್ಲ. ಬಂಧನದಿಂದ ಬುಶ್ರಾ ಬೀಬಿ ಅವರ ಆರೋಗ್ಯ ಹದಗೆಟ್ಟಿದೆ, ಏನಾದರೂ ಸಂಭವಿಸಿರಬೇಕು ಎಂದು ಅವರ ವಕ್ತಾರರು ಆತಂಕ ವ್ಯಕ್ತಪಡಿಸಿದ್ದಾರೆ. ಎರಡು ವಿಭಿನ್ನ ಪ್ರಕರಣಗಳಲ್ಲಿ ದೋಷಿಯಾಗಿರುವ ಬುಶ್ರಾ ಬೀಬಿಯನ್ನು ಫೆಬ್ರವರಿಯಲ್ಲಿ ಇಸ್ಲಾಮಿಕ್ ನಿಕಾಹ್ ಪ್ರಕರಣದಲ್ಲಿ ದಂಪತಿಗೆ ಶಿಕ್ಷೆ ಆದಾಗಿನಿಂದಲೂ ಬನಿ ಗಾಲಾ ಮನೆಯಲ್ಲಿ ಇರಿಸಲಾಗಿದೆ. ಬನಿ ಗಲಾ ನಿವಾಸವನ್ನು ಮಾಜಿ ಪ್ರಧಾನಿ ಪತ್ನಿಯ ಉಪ ಕಾರಾಗೃಹವಾಗಿ ಪರಿವರ್ತಿಸಲಾಗಿದೆ.

ನ್ಯಾಯಾಲಯ ಅಧಿಕಾರಿಗಳಿಗೆ ಮೂರು ವಾರಗಳ ಕಾಲ ಅವಕಾಶ ನೀಡಿದ್ದರೂ ಬುಶ್ರಾ ಅವರ ವೈದ್ಯಕೀಯ ಪರೀಕ್ಷೆಗಳನ್ನು ಏಕೆ ನಡೆಸಲಿಲ್ಲ ಎಂದು ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿಯ ಸಲಹೆಗಾರ ಯೂಸುಫ್ಜೈ ಪ್ರಶ್ನಿಸಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಸಹ ಅಲ್-ಶಿಫಾ ಆಸ್ಪತ್ರೆಯಿಂದ ರಕ್ತ ಪರೀಕ್ಷೆಯನ್ನು ಮಾಡಬೇಕೆಂದು ಕೇಳಿಕೊಂಡಿದೆ. ಆಕೆಯ ರಕ್ತದಲ್ಲಿ ವಿಷದ ಅಂಶವಿದೆಯೇ ಅಥವಾ ಇಲ್ಲವೇ ಎಂಬುದನ್ನು ರಕ್ತ ಪರೀಕ್ಷೆಯಿಂದ ಬಹಿರಂಗಪಡಿಸಬಹುದು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

Karnataka CM News LIVE Updates | ಸಿದ್ದರಾಮಯ್ಯ ರಾಜೀನಾಮೆ; ಸಿಎಲ್‌ಪಿ ಸಭೆ ಶನಿವಾರ; ಅಂದೇ ನೂತನ ಸಿಎಂ ಪ್ರಮಾಣ ವಚನ ಸಾಧ್ಯತೆ!

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

ನಿಮ್ಮ ಪ್ರೀತಿಗೆ ಧನ್ಯವಾದ: ರಾಜೀನಾಮೆ ನೀಡಿದ ಬಳಿಕ ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಭಾವುಕ ಪೋಸ್ಟ್!

ಬಕ್ರೀದ್: ಗೋವಿಗೆ ‘ರಾಷ್ಟ್ರೀಯ ಪ್ರಾಣಿ’ ಸ್ಥಾನಮಾನ ನೀಡಿ: ಈದ್ ಆಚರಣೆ ಸಂದರ್ಭದಲ್ಲೇ ಮುಸ್ಲಿಂ ಸಂಘಟನೆಗಳ ಆಗ್ರಹ

SCROLL FOR NEXT