ಶೇಕ್ ಹಸೀನಾ ಮನೆಗೆ ನುಗ್ಗಿದ ಪ್ರತಿಭಟನಾಕಾರರು 
ವಿದೇಶ

ಶೇಕ್ ಹಸೀನಾ ಬಂಗಲೆಗೆ ನುಗ್ಗಿ ಸೀರೆ, ಒಳ ಉಡುಪು ದೋಚಿದ ಪ್ರತಿಭಟನಾಕಾರರು: ಬೆಡ್ ರೂಮ್ ನಲ್ಲಿ ದಾಂಧಲೆ

ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶ ಬಿಟ್ಟು ಪರಾರಿಯಾಗುತ್ತಿದ್ದಂತೆ ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ಅವರ ಗಾನಾಭವನ ನಿವಾಸಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ಸಿಕ್ಕಿದ್ದನ್ನೂ ದೋಚಿದ್ದಾರೆ.

ಢಾಕಾ: ಬಾಂಗ್ಲಾದೇಶದಲ್ಲಿ ಉಂಟಾಗಿರುವ ಅರಾಜಕತೆ ವೇಳೆ ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ಅವರ ಗಾನಾಭವನ ನಿವಾಸಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ಸಿಕ್ಕಿದ್ದನ್ನೂ ದೋಚಿದ್ದಲ್ಲದೇ ಸೀರೆ, ಒಳಉಡುಪುಗಳನ್ನೂ ಹೊತ್ತೊಕೊಂಡು ಹೋಗಿದ್ದಾರೆ. ಈ ಕುರಿತ ಫೋಟೊ, ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶ ಬಿಟ್ಟು ಪರಾರಿಯಾಗುತ್ತಿದ್ದಂತೆ ನಿರ್ಗಮಿತ ಪ್ರಧಾನಿ ಶೇಕ್ ಹಸೀನಾ ಅವರ ಗಾನಾಭವನ ನಿವಾಸಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ಸಿಕ್ಕಿದ್ದನ್ನೂ ದೋಚಿದ್ದಲ್ಲದೇ ಸೀರೆ, ಒಳಉಡುಪುಗಳನ್ನೂ ಹೊತ್ತುಕೊಂಡು ಹೋಗಿದ್ದಾರೆ. ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಸೀರೆ, ಒಳಉಡುಪನ್ನೂ ಕದ್ದು, ಅದರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಸೋಫಾ, ಅಡುಗೆಮನೆಯಿಂದ ಹಸಿ ಮೀನು, ಕೋಳಿ, ಬಾತುಕೋಳಿ ಕದ್ದು, ಅಲ್ಲಿದ್ದ ಊಟ ಮಾಡಿ, ಶೇಖ್ ಹಸೀನಾ ಅವರ ಬೆಡ್ ರೂಂ ನಲ್ಲಿ ಮಲಗಿ ಮಜಾ ಮಾಡಿದ್ದಾರೆ.

ಶೇಖ್ ಹಸೀನಾ ರಾಜೀನಾಮೆ ನೀಡುವ ಮುನ್ನ ಬಾಂಗ್ಲಾದೇಶದ ಬಂಗಬಂಧು ಸ್ಮಾರಕ ವಸ್ತುಸಂಗ್ರಹಾಲಯ ಎಂದೂ ಕರೆಯಲ್ಪಡುವ ಬಂಗಬಂಧು ಭವನ್ ಸೇರಿದಂತೆ ಢಾಕಾದ ಹಲವಾರು ಪ್ರಮುಖ ಸ್ಥಳಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

ಜನರು ಶೇಖ್ ಹಸೀನಾ ಅವರ ಕುಟುಂಬದ ಪೂರ್ವಜರ ಮನೆಯಾಗಿ ಪರಿವರ್ತನೆಗೊಂಡ ವಸ್ತುಸಂಗ್ರಹಾಲಯವನ್ನು ಧ್ವಂಸಗೊಳಿಸಿದೆ. ಅಲ್ಲಿ ಆಕೆಯ ತಂದೆಯ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಹಾಗೆಯೇ ದೇಶದ ಮುಖ್ಯ ನ್ಯಾಯಾಧೀಶರ ಮನೆ ಮತ್ತು ರಾಜಧಾನಿಯಾದ ಢಾಕಾದಲ್ಲಿರುವ ಶೇಖ್ ಹಸೀನಾ ಅವರ ಬಂಗಲೆಯ ಮೇಲೂ ದಾಳಿ ನಡೆಸಿ, ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.

ಕೆಲವರು ಸೀರೆಯನ್ನು ದೋಚಿ ಅವುಗಳನ್ನು ಉಟ್ಟುಕೊಂಡು ಸಂಭ್ರಮಿಸುತ್ತಾ ಸಾಗಿದ್ದಾರೆ.ಇನ್ನೂ ಕೆಲವರು ಶೇಕ್ ಹಸೀನಾ ಅವರ ಒಳಉಡುಪುಗಳನ್ನೂ ದೋಚಿ ಅವುಗಳನ್ನು ಪ್ರದರ್ಶಿಸುತ್ತಾ ವಿಜೃಂಭಿಸಿದ್ದಾರೆ. ಗಾನಾಭವನದ ಕೊಳದಲ್ಲಿ ಈಜಾಡಿ, ನಿವಾಸದಿಂದ ಸೋಫಾ, ಕುರ್ಚಿ, ಹೂಕುಂಡಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಶೇಖ್ ಹಸೀನಾ ರಾಜೀನಾಮೆಯನ್ನು ಸೋಮವಾರ ಢಾಕಾದಲ್ಲಿ ಸಾವಿರಾರು ಜನರು ಬೀದಿಗಿಳಿದು ಸಂಭ್ರಮಿಸಿದರು. ಬಾಂಗ್ಲಾ ರಾಜಧಾನಿ ಢಾಕಾದಲ್ಲಿರುವ ಶೇಖ್ ಹಸೀನಾ ಅವರ ನಿವಾಸ ‘ಗಾನಭಬನ್’ಗೆ ಬೀದಿಗಳಲ್ಲಿ ಹರ್ಷೋದ್ಗಾರದ ದೃಶ್ಯಗಳ ನಡುವೆ ಸಾವಿರಾರು ಜನರು ಮುತ್ತಿಗೆ ಹಾಕಿದರು. ಶೇಖ್ ಹಸೀನಾ ಅವರ ನಿವಾಸವಾದ ಗಣಭವನ್‌ನಿಂದ ಕೋಳಿ, ಮೀನು, ತರಕಾರಿಗಳು ಮತ್ತು ಪೀಠೋಪಕರಣಗಳನ್ನು ಜನರು ತೆಗೆದುಕೊಂಡು ಹೋಗುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT