ಕ್ಲೋಯ್ ಲೋಪೆಜ್ 
ವಿದೇಶ

ವಿಕೃತ ಮನಸ್ಥಿತಿ: ಸೂಪರ್ ಮಾರ್ಕೆಟ್ ನಲ್ಲಿ ಒಳ ಉಡುಪು ಬಿಚ್ಚಿ ಬ್ರೆಡ್ ಟ್ರೇನಲ್ಲಿಟ್ಟ ಮಹಿಳೆ, ವಿಡಿಯೋ ವೈರಲ್

ಬ್ರಿಟಿಷ್ ಪ್ರಭಾವಿ ಕ್ಲೋಯ್ ಲೋಪೆಜ್ ಎಂದು ಗುರುತಿಸಲಾಗಿದೆ. ಕ್ಯಾಮೆರಾಗಳಲ್ಲಿ ಕಾಣಲೆಂದೆ ಈ ವಿಚಿತ್ರ ಕೃತ್ಯವನ್ನು ಮಾಡಿದ್ದಾರೆ. ಆದರೆ, ಮಹಿಳೆಯ ಈ ಕೃತ್ಯದ ವಿರುದ್ಧ ಜನರು ಆಕ್ರೋಶಗೊಂಡಿದ್ದು ಪೊಲೀಸರ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದರಲ್ಲಿ ಮಹಿಳೆ ತನ್ನ ಒಳಉಡುಪನ್ನು ಸೂಪರ್ ಮಾರ್ಕೆಟ್ ನಲ್ಲಿ ತೆಗೆದು ಬ್ರೆಡ್ ಡಿಸ್ ಪ್ಲೇ ಟ್ರೇನಲ್ಲಿಡುತ್ತಿರುವುದು ಕಾಣಬಹುದು.

ವರದಿಯ ಪ್ರಕಾರ, ವೀಡಿಯೊದಲ್ಲಿ ಕಂಡುಬರುವ ಮಹಿಳೆಯನ್ನು ಇಂಗ್ಲಿಷ್ ಪ್ರಭಾವಿ ಕ್ಲೋಯ್ ಲೋಪೆಜ್ ಎಂದು ಗುರುತಿಸಲಾಗಿದೆ. ಕ್ಯಾಮೆರಾಗಳಲ್ಲಿ ಕಾಣಲೆಂದೆ ಈ ವಿಚಿತ್ರ ಕೃತ್ಯವನ್ನು ಮಾಡಿದ್ದಾರೆ. ಆದರೆ, ಮಹಿಳೆಯ ಈ ಕೃತ್ಯದ ವಿರುದ್ಧ ಜನರು ಆಕ್ರೋಶಗೊಂಡಿದ್ದು ಪೊಲೀಸರ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಘಟನೆ ಸ್ಪೇನ್‌ನ ಮರ್ಕಡೋನಾ ಸೂಪರ್ ಮಾರ್ಕೆಟ್‌ನಲ್ಲಿ ನಡೆದಿದೆ. ವೀಡಿಯೊದಲ್ಲಿ, ಮಹಿಳೆ ಬ್ರೆಡ್ ರ್ಯಾಕ್ ಮುಂದೆ ನಿಂತಿರುವುದನ್ನು ಕಾಣಬಹುದು. ನಂತರ ತನ್ನ ಒಳಉಡುಪುನ್ನು ತೆಗೆದು ಬ್ರೆಡ್ ಟ್ರೇನಲ್ಲಿ ಇಡುತ್ತಾಳೆ. ಆ ಬಳಿಕ ಸಾಮಾಜಿಕ ಜಾಲತಾಣ ಪ್ರಭಾವಿ ಕ್ಯಾಮೆರಾವನ್ನು ನೋಡಿ ನಗುತ್ತಾ, ಟ್ರಾಲಿಯೊಂದಿಗೆ ಹೊರ ಹೋಗುತ್ತಾಳೆ.

ಪ್ರಭಾವಿ ಕ್ಲೋಯ್ ಈ ಹಿಂದೆಯೂ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಇದೇ ರೀತಿಯ ಕೃತ್ಯದ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಮತ್ತೊಂದು ವೀಡಿಯೊದಲ್ಲಿ ಬೀಚ್ ಬಳಿಯ ಬಾರ್‌ನಲ್ಲಿ ಕಾಣಿಸಿಕೊಂಡಿದ್ದು ಪಾನೀಯ ಸೇವಿಸಿದ ನಂತರ ಆಕೆ ತನ್ನ ಒಳ ಉಡುಪುನ್ನು ತೆಗೆದು ಸಿಬ್ಬಂದಿಗೆ 'ಟಿಪ್' ಆಗಿ ಬಿಟ್ಟಿದ್ದಾಳೆ. ಆದರೆ, ಅವರ ಈ ವಿಚಿತ್ರ ಕೃತ್ಯಗಳ ವೀಡಿಯೋಗಳ ಮೇಲೆ ಜನರ ಕೋಪ ಹೆಚ್ಚುತ್ತಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಅನುಚಿತ ವರ್ತನೆಗಾಗಿ ಕ್ಲೋಯ್ ಅವರನ್ನು ಟೀಕಿಸಿದ್ದು ಮಾತ್ರವಲ್ಲದೆ, ಅನೇಕ ಜನರ ಆರೋಗ್ಯವನ್ನು ಅಪಾಯಕ್ಕೆ ಒಳಪಡಿಸಿದ್ದಕ್ಕಾಗಿ ಅವಳನ್ನು ದೂಷಿಸಿದ್ದಾರೆ. ಇಂತಹ ಅಸಹ್ಯಕರ ಕೃತ್ಯ ಎಸಗಿದ್ದಕ್ಕೆ ಆಕೆಗೆ ಶಿಕ್ಷೆಯಾಗಬೇಕು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಟಿಕ್‌ಟಾಕ್‌ನಲ್ಲಿ ಬೋಲ್ಡ್ ಕಂಟೆಂಟ್ ರಚಿಸಲು ಕ್ಲೋಯ್ ಹೆಸರುವಾಸಿಯಾಗಿದ್ದಾರೆ. ಆದರೆ ಈ ಕೃತ್ಯ ಅನೇಕ ವೀಕ್ಷಕರಿಗೆ ಒಂದು ಮಿತಿಯನ್ನು ದಾಟಿದಂತೆ ತೋರುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT