ನವದೆಹಲಿ: ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಬುಚ್ವಿಲ್ಮೋರ್ ಬಾಹ್ಯಾಕಾಶದಲ್ಲಿ ಜೂ.06 ರಿಂದಲೂ ಸಿಲುಕಿದ್ದು, ಶೀಘ್ರವೇ ಭೂಮಿಗೆ ವಾಪಸ್ಸಾಗುವ ನಿರೀಕ್ಷೆ ಇದೆ.
ಈ ಇಬ್ಬರೂ ಗಗನಯಾತ್ರಿಗಳು ಯಾವಾಗ ಭಾರತಕ್ಕೆ ಆಗಮಿಸುತ್ತಾರೆ? ಎಂಬ ಬಗ್ಗೆ ನಾಸಾ ಅಪ್ಡೇಟ್ ನೀಡಿದ್ದು, ಇನ್ನೂ ಕೆಲವು ದಿನಗಳ ಕಾಲ ಅನಿಶ್ಚಿತತೆಯಲ್ಲಿಯೇ ಈ ಗಗನ ಯಾತ್ರಿಗಳು ಕಾಲಕಳೆಯಬೇಕಾಗುತ್ತದೆ ಎಂದು ಹೇಳಿದೆ.
ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಅಥವಾ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಸುನಿತಾ ವಿಲಿಯಮ್ಸ್ ಅವರನ್ನು ಭೂಮಿಗೆ ಕರೆತರಲು ನಾಸಾ ಶನಿವಾರ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಯುಎಸ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
"ಸ್ಟಾರ್ಲೈನರ್ ನ್ನು ಗಗನಯಾತ್ರಿಗಳೊಂದಿಗೆ ಭೂಮಿಗೆ ಹಿಂದಿರುಗಿಸಬೇಕೆ ಎಂಬ ಬಗ್ಗೆ ನಾಸಾದ ನಿರ್ಧಾರವನ್ನು ಏಜೆನ್ಸಿ ಮಟ್ಟದ ಪರಿಶೀಲನೆಯ ಕೊನೆಯಲ್ಲಿ ಆಗಸ್ಟ್ 24 (ಶನಿವಾರ) ಕ್ಕಿಂತ ಮುಂಚಿತವಾಗಿ ನಿರೀಕ್ಷಿಸಲಾಗುವುದಿಲ್ಲ" ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಎಂಟು ದಿನಗಳ ವಾಸ್ತವ್ಯದಿಂದ ಪ್ರಾರಂಭವಾದದ್ದು ವಿಲಿಯಮ್ಸ್ ಮತ್ತು ವಿಲ್ಮೋರ್‌ಗಾಗಿ ಎರಡು ತಿಂಗಳಿಗಿಂತ ಹೆಚ್ಚು ಕಾಲ ವಿಸ್ತರಿಸಿದೆ. ಹೆಚ್ಚು ವಿಳಂಬವಾದ ಸ್ಟಾರ್‌ಲೈನರ್ ಅನ್ನು ಸವಾರಿ ಮಾಡಿದ ಜೋಡಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.