ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯಿಯೋಲ್ 
ವಿದೇಶ

ದಕ್ಷಿಣ ಕೊರಿಯಾದಲ್ಲಿ ಹೇರಿದ್ದ 'ತುರ್ತು ಮಿಲಿಟರಿ ಆಡಳಿತ' ಆದೇಶ ಕೆಲವೇ ಗಂಟೆಗಳಲ್ಲಿ ವಾಪಸ್!

ದಕ್ಷಿಣ ಕೊರಿಯಾದ ಅಧ್ಯಕ್ಷ ಸುಕ್-ಯೋಲ್ ಮಂಗಳವಾರ ರಾತ್ರಿ ಆಘಾತಕಾರಿ ಘೋಷಣೆ ಮಾಡಿದ್ದರು. ದೇಶದಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಮತ್ತು ಮಿಲಿಟರಿ ಆಡಳಿತವನ್ನು ಘೋಷಿಸಲಾಗಿತ್ತು.

ಸಿಯಾಲ್: ದಕ್ಷಿಣ ಕೊರಿಯಾದಲ್ಲಿ ಜಾರಿಗೊಳಿಸಿದ್ದ ಸೇನಾಡಳಿತವನ್ನು ಮತ್ತೆ ವಾಪಸ್‌ ತೆಗೆದುಕೊಂಡಿದೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್ ಯೋಲ್ ಬುಧವಾರ ಮಾರ್ಷಲ್ ಕಾನೂನನ್ನು ಹೇರುವ ಅಲ್ಪಾವಧಿಯ ಕ್ರಮವನ್ನು ಕೈಬಿಟ್ಟಿದ್ದಾರೆ. ಶಾಸಕರು ಭದ್ರತಾ ಪಡೆಗಳನ್ನು ಧಿಕ್ಕರಿಸಿ ಅವರ ಘೋಷಣೆಗೆ ವಿರುದ್ಧವಾಗಿ ಮತ ಚಲಾಯಿಸಿದರು. ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು ಹೋರಾಟ ನಡೆಸಿದರು. ಇದರ ಬೆನ್ನಲ್ಲೇ ಸೇನಾಡಳಿತ ವಾಪಸ್‌ ತೆಗೆದುಕೊಳ್ಳಲಾಗಿದೆ.

ದಕ್ಷಿಣ ಕೊರಿಯಾದ ಅಧ್ಯಕ್ಷ ಸುಕ್-ಯೋಲ್ ಮಂಗಳವಾರ ರಾತ್ರಿ ಆಘಾತಕಾರಿ ಘೋಷಣೆ ಮಾಡಿದ್ದರು. ದೇಶದಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಮತ್ತು ಮಿಲಿಟರಿ ಆಡಳಿತವನ್ನು ಘೋಷಿಸಲಾಗಿತ್ತು. ಅಧ್ಯಕ್ಷ ಯುನ್ ಸುಕ್-ಯೋಲ್ ಅವರ ಘೋಷಣೆಯ ನಂತರ, ದಕ್ಷಿಣ ಕೊರಿಯಾದ ಶಾಸಕರು ಸಮರ ಕಾನೂನನ್ನು ಬಲವಾಗಿ ವಿರೋಧಿಸಿದರು. ಸೇನಾಡಳಿತ ಜಾರಿ ಆದೇಶದಿಂದ ಮತ್ತಷ್ಟು ರಾಜಕೀಯ ಬಿಕ್ಕಟ್ಟು ಎದುರಾಗಲಿದೆ. ತಕ್ಷಣ ಈ ಆದೇಶವನ್ನು ಹಿಂಪಡೆಯುವಂತೆ ಸಂಪುಟ ಸಚಿವರು ಯೂನ್‌ ಸುಕ್‌ ಯೋಲ್‌ ಮೇಲೆ ಒತ್ತಡ ಹೇರಿದ್ದರು. ಇದೀಗ ಸುಕ್ ಯೋಲ್‌ ಅವರು ಸಚಿವರ ಒತ್ತಡಕ್ಕೆ ಮಣಿದಿದ್ದಾರೆ ಎಂದು ತಿಳಿದುಬಂದಿದೆ.

ದೇಶದ ವಿರೋಧ ಪಕ್ಷಗಳು ಸಂಸತ್‌ ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿವೆ ಎಂದು ಆರೋಪಿಸಿರುವ ಸುಕ್‌ ಯೋಲ್‌ ಅವರು ದೇಶದಲ್ಲಿ ಮಂಗಳವಾರದಿಂದಲೇ ‘ತುರ್ತು ಸೇನಾ ಆಡಳಿತ’ವನ್ನು ಜಾರಿಗೊಳಿಸಿದ್ದರು. ದೇಶ ವಿರೋಧಿ ಕೃತ್ಯದ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಉತ್ತರ ಕೊರಿಯಾ ಯತ್ನಿಸುತ್ತಿದೆ ಎಂದು ಸುಕ್‌ ಯೋಲ್‌ ಆರೋಪಿಸಿದ್ದರು. ದೇಶದ ಪರಿಸ್ಥಿತಿ ಅತ್ಯಂತ ಕ್ಲಿಷ್ಟಕರ ಸ್ಥಿತಿ ತಲುಪಿರುವುದರಿಂದ ಸಾಂವಿಧಾನಿಕ ಆದೇಶವನ್ನು ಪ್ರಕಟಿಸಲಾಗಿದೆ ಎಂದು ದೇಶವನ್ನು ಉದ್ದೇಶಿಸಿ ಟೆಲಿವಿಷನ್‌ ಮೂಲಕ ಅವರು ತಿಳಿಸಿದ್ದರು. 1980ರ ದಶಕದ ಉತ್ತರಾರ್ಧದಲ್ಲಿ ದೇಶದಲ್ಲಿ ಮಿಲಿಟರಿ ಸರ್ವಾಧಿಕಾರವು ಕೊನೆಗೊಂಡ ನಂತರ ದಕ್ಷಿಣ ಕೊರಿಯಾದ ಅಧ್ಯಕ್ಷರು ಇದೇ ಮೊದಲ ಬಾರಿಗೆ ‘ಸೇನಾಡಳಿತ ಜಾರಿ’ ಆದೇಶ ಹೊರಡಿಸಿದ್ದರು. ಉತ್ತರ ಕೊರಿಯಾದ ಕಮ್ಯುನಿಸ್ಟ್ ಪಡೆಗಳ ಬೆದರಿಕೆಗಳಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ಜನರ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಲೂಟಿ ಮಾಡುವ ರಾಜ್ಯ ವಿರೋಧಿ ಅಂಶಗಳನ್ನು ನಿರ್ಮೂಲನೆ ಮಾಡಲು ಎಮರ್ಜೆನ್ಸಿ ಘೋಷಿಸುತ್ತಿದ್ದೇವೆ ಎಂದು ಯೂನ್ ಸುಕ್ ಯೆಲ್ ತಮ್ಮ ಭಾಷಣದಲ್ಲಿ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT