ನ್ಯೂಯಾರ್ಕ್: ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ತಯಾರಿ ಚುರುಕುಗೊಳ್ಳುತ್ತಿದೆ. ಜೋ ಬೈಡನ್ ಸ್ಪರ್ಧೆಯಿಂದ ಹಿಂದೆ ಸರಿಯುವುದು ಬಹುತೇಕ ಖಚಿತವಾಗುತ್ತಿದ್ದಂತೆಯೇ ಹಾಲಿ ಉಪಾಧ್ಯಕ್ಷ್ಯೆ ಕಮಲಾ ಹ್ಯಾರೀಸ್ ಅವರನ್ನು ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಡೆಮಾಕ್ರೆಟಿಕ್ ನಾಯಕರು ಬೆಂಬಲಿಸುತ್ತಿದ್ದಾರೆ.
ಆದರೆ ಈ ವರೆಗೂ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಮಲಾ ಹ್ಯಾರೀಸ್ ಗೆ ಬೆಂಬಲವನ್ನು ಇನ್ನೂ ಘೋಷಿಸಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ನ್ಯೂ ಯಾರ್ಕ್ ಪೋಸ್ಟ್ ಪ್ರಕಾರ, ಒಬಾಮ ಪ್ರಕಾರ ಕಮಲಾ ಹ್ಯಾರೀಸ್ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನ್ನು ಚುನಾವಣೆಯಲ್ಲಿ ಮಣಿಸುವುದು ಸಾಧ್ಯವಿಲ್ಲ ಆದ ಕಾರಣ ಒಬಾಮ ಇನ್ನೂ ಕಮಲಾ ಹ್ಯಾರೀಸ್ ಗೆ ಬೆಂಬಲ ಸೂಚಿಸಿಲ್ಲ ಎಂದು ವಿಶ್ಲೇಷಿಸಲಾಗಿದೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರೀಸ್ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂಬುದು ಒಬಾಮಗೆ ತಿಳಿದಿದೆ ಆದ್ದರಿಂದ ಅವರು ಅಸಮಾಧಾನಗೊಂಡಿದ್ದಾರೆ ಎಂದು ಬೈಡನ್ ಕುಟುಂಬದ ಮೂಲಗಳು ತಿಳಿಸಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ಹೇಳಿದೆ.
"ಕಮಲಾ ಹ್ಯಾರೀಸ್ ಅಸಮರ್ಥ ಅಭ್ಯರ್ಥಿ ಎಂದು ಒಬಾಮಾಗೆ ತಿಳಿದಿದೆ- ಆಕೆಗೆ ತನ್ನ ಎದುರಿರುವ ಸವಾಲುಗಳನ್ನು ದಾಟಲು ಸಾಧ್ಯವಿಲ್ಲ ಎಂಬುದು ಒಬಾಮ ಅಭಿಪ್ರಾಯವಾಗಿದೆ ಎಂದು ಮೂಲಗಳು ತಿಳಿಸಿವೆ. "ನೀವು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವಾಗ ನೀವು ಹೇಳಬಹುದಾದ ಮತ್ತು ಹೇಳಲಾಗದ ವಿಷಯಗಳಿರುತ್ತವೆ." ಎಂದು ಬೈಡನ್ ಕುಟುಂಬದ ಮೂಲಗಳು ಹೇಳಿವೆ.
ಬಿಡೆನ್ ಅವರನ್ನು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದರಿಂದ ತಪ್ಪಿಸುವುದು ಒಬಾಮಾ ಅವರ ಆಶಯವಾಗಿತ್ತು ಮತ್ತು ನಟ ಜಾರ್ಜ್ ಕ್ಲೂನಿ ಅವರು ಬರೆದ ಲೇಖನವು ಆ ಯೋಜನೆಯ ಒಂದು ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ತಿಂಗಳು ಡೆಮಾಕ್ರಟಿಕ್ ನ್ಯಾಶನಲ್ ಕನ್ವೆನ್ಷನ್ ನಡೆಯುವಾಗ ಒಬಾಮಾ ಅರಿಜೋನಾ ಸೆನೆಟರ್ ಮಾರ್ಕ್ ಕೆಲ್ಲಿಯನ್ನು "ಟಿಕೆಟ್ ಪಡೆಯುವ ಸಾಧ್ಯತೆಯ ಮುಂಚೂಣಿಯಲ್ಲಿ" ಬಯಸಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ತಿಳಿಸಿದೆ.
ಡೆಮಾಕ್ರೆಟಿಕ್ ಪಕ್ಷದಲ್ಲಿ ತಮ್ಮ ಇಚ್ಛೆಯಂತೆ ಬೆಳವಣಿಗೆಗಳು ನಡೆದಿಲ್ಲ ಎಂಬುದಕ್ಕಾಗಿ "ಒಬಾಮಾ ಅಸಮಾಧಾನಗೊಂಡಿದ್ದಾರೆ. ಅದಕ್ಕಾಗಿಯೇ ಅವರು ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಬೆಂಬಲ ಸಭೆಗಳಲ್ಲಿ ಸೇರುತ್ತಿಲ್ಲ" ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ.
ಆದಾಗ್ಯೂ, ಬರಾಕ್ ಒಬಾಮಾ ಶೀಘ್ರದಲ್ಲೇ ಕಮಲಾ ಹ್ಯಾರಿಸ್ ಅವರನ್ನು ಅನುಮೋದಿಸಲು ಯೋಜಿಸಿದ್ದಾರೆ ಎಂದು ಎನ್ಬಿಸಿ ನ್ಯೂಸ್ ವರದಿ ಮಾಡಿದೆ.
ಕಳೆದ ತಿಂಗಳ ಆರಂಭದಲ್ಲಿ, ಜೋ ಬಿಡೆನ್ ಚುನಾವಣೆ ಸ್ಪರ್ಧೆಯಿಂದ ನಿವೃತ್ತರಾಗುವ ಮೊದಲು, ಯುಎಸ್ ಸೆನೆಟರ್ ಟೆಡ್ ಕ್ರೂಜ್ ಅವರು ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದರು.
ಮಿಚೆಲ್ ಒಬಾಮಾ ಇಲ್ಲಿಯವರೆಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಯಾವುದೇ ಆಸಕ್ತಿಯನ್ನು ವ್ಯಕ್ತಪಡಿಸಿಲ್ಲ.