ಡೊನಾಲ್ಡ್ ಟ್ರಂಪ್ ಭಾಷಣ  
ವಿದೇಶ

US Elections 2024: 2ನೇ ಬಾರಿ ಅಮೆರಿಕ ಅಧ್ಯಕ್ಷ ಪಟ್ಟ, ಇದು ನಮ್ಮ ಅದ್ಭುತ ಜಯ ಎಂದ ಡೊನಾಲ್ಡ್ ಟ್ರಂಪ್

ಶ್ವೇತಭವನವನ್ನು ಗೆಲ್ಲಲು ಅಗತ್ಯವಿರುವ 270 ಚುನಾವಣಾ ಮತಗಳಲ್ಲಿ ಟ್ರಂಪ್ 267 ಎಲೆಕ್ಟೊರಲ್ ಮತಗಳನ್ನು ಈಗಾಗಲೇ ಗೆದ್ದಿದ್ದಾರೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ನಿರ್ಣಾಯಕ ಹಂತ ತಲುಪಿದೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಇನ್ನೂ ಅಧಿಕೃತವಾಗಿ ಗೆದ್ದವರು ಯಾರು ಎಂದು ಘೋಷಿಸಿಲ್ಲ, ಬಹುತೇಕ ಫಲಿತಾಂಶ ನಿರ್ಧಾರವಾಗಿರುವುದರಿಂದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಿದ್ದಾರೆ.

ಇದು ಹಿಂದೆಂದೂ ಯಾರೂ ನೋಡದ ಚಳವಳಿ. ಸಾರ್ವಕಾಲಿಕ ಶ್ರೇಷ್ಠ ರಾಜಕೀಯ ಚಳವಳಿ ಎಂದು ನಾನು ನಂಬುತ್ತೇನೆ. ಈ ದೇಶದ ಜನತೆ ಜೊತೆಗೆ ನಾನು ಯಾವತ್ತಿಗೂ ಇರುತ್ತೇನೆ. ನಾವು ನಮ್ಮ ಗಡಿಭಾಗವನ್ನು, ದೇಶದ ವಿಚಾರಗಳನ್ನು ಸರಿಪಡಿಸಬೇಕಿದೆ. ನಾವು ಇಂದು ಇತಿಹಾಸವನ್ನು ನಿರ್ಮಿಸಿದ್ದೇವೆ, ಯಾರೂ ಯೋಚಿಸದ ಅಡೆತಡೆಗಳನ್ನು ಜಯಿಸಿದ್ದೇವೆ. ಇದು ನಮ್ಮ ರಾಜಕೀಯ ಗೆಲುವಾಗಿದೆ ಎಂದರು.

ಶ್ವೇತಭವನವನ್ನು ಗೆಲ್ಲಲು ಅಗತ್ಯವಿರುವ 270 ಚುನಾವಣಾ ಮತಗಳಲ್ಲಿ ಟ್ರಂಪ್ 267 ಎಲೆಕ್ಟೊರಲ್ ಮತಗಳನ್ನು ಈಗಾಗಲೇ ಗೆದ್ದಿದ್ದಾರೆ. ಇದೊಂದು ದೊಡ್ಡ ಕೆಲಸ. ಇದು ಪ್ರಪಂಚದ ಅತ್ಯಂತ ಪ್ರಮುಖ ಕೆಲಸ.. ನಾನು ನಿಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಭರವಸೆಯಿಂದ ಟ್ರಂಪ್ ನುಡಿದರು.

ಚುನಾವಣಾ ಪ್ರಚಾರ ವೇಳೆ ಡೊನಾಲ್ಡ್ ಟ್ರಂಪ್ ಮೇಲೆ ಸಾಕಷ್ಟು ಬಾರಿ ಹತ್ಯೆ ಯತ್ನ ನಡೆದಿತ್ತು, ಕೂದಲೆಳೆ ಅಂತರದಲ್ಲಿ ಅವರು ಬಚಾವಾಗಿದ್ದರು. ಅದನ್ನು ಸಹ ಇಂದಿನ ಭಾಷಣದಲ್ಲಿ ಟ್ರಂಪ್ ಪ್ರಸ್ತಾಪಿಸಿದರು. ದೇವರು ಒಂದು ಕಾರಣಕ್ಕಾಗಿ ನನ್ನ ಜೀವವನ್ನು ಉಳಿಸಿದನು. ಆ ಕಾರಣವು ನಮ್ಮ ದೇಶವನ್ನು ಉಳಿಸಲು ಮತ್ತು ಅಮೇರಿಕಾವನ್ನು ಶ್ರೇಷ್ಠತೆಗೆ ಮರುಸ್ಥಾಪಿಸಲು ಆಗಿತ್ತು. ಈಗ ನಾವು ಒಟ್ಟಾಗಿ ಆ ಮಿಷನ್ ನ್ನು ಪೂರೈಸಲಿದ್ದೇವೆ ಎಂದರು.

ನಮ್ಮ ಮುಂದಿರುವ ಕೆಲಸವು ಸುಲಭವಲ್ಲ, ಆದರೆ ನೀವು ನನಗೆ ಒಪ್ಪಿಸಿದ ಕೆಲಸಕ್ಕೆ ನನ್ನ ಆತ್ಮದಲ್ಲಿರುವ ಶಕ್ತಿ, ಉತ್ಸಾಹ ಮತ್ತು ಹೋರಾಟವನ್ನು ತರುತ್ತೇನೆ ಎಂದರು.

ಬೆಂಬಲಿಗರನ್ನು ಉದ್ದೇಶಿಸಿ ಟ್ರಂಪ್ ಮಾತನಾಡುವ ವೇಳೆ ಅವರ ಪತ್ನಿ ಮೆಲಾನಿಯಾ ಟ್ರಂಪ್, ಕಿರಿಯ ಮಗ ಬ್ಯಾರನ್ ಸೇರಿಕೊಂಡರು. ಟ್ರಂಪ್ ಅವರ ಹಿರಿಯ ಮಕ್ಕಳಾದ ಡಾನ್ ಜೂನಿಯರ್, ಎರಿಕ್, ಇವಾಂಕಾ ಮತ್ತು ಟಿಫಾನಿ ಅವರೆಲ್ಲರೂ ವೇದಿಕೆಯಲ್ಲಿ ತಂದೆಯ ಜೊತೆ ಸೇರಿಕೊಂಡರು.

ಉನ್ನತ ಪ್ರಚಾರ ಸಲಹೆಗಾರರಾದ ಸೂಸಿ ವೈಲ್ಸ್ ಮತ್ತು ಕ್ರಿಸ್ ಲಾಸಿವಿಟಾ ಸೇರಿದಂತೆ ಟ್ರಂಪ್ ಅವರ ಉನ್ನತ ರಾಜಕೀಯ ಮನಸ್ಸುಗಳು ವೇದಿಕೆಯಲ್ಲಿ ಟ್ರಂಪ್ ಜೊತೆಗೂಡಿದರು. ಹೌಸ್ ಸ್ಪೀಕರ್ ಮೈಕ್ ಜಾನ್ಸನ್ ಸೇರಿದಂತೆ ಅವರ ರಾಜಕೀಯ ಮಿತ್ರರೂ ವೇದಿಕೆಯಲ್ಲಿದ್ದರು.

ಅತಿ ಹಿರಿಯ ಅಮೆರಿಕ ಅಧ್ಯಕ್ಷ

78 ವರ್ಷ ವಯಸ್ಸಿನ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಚುನಾಯಿತರಾದ ಅತ್ಯಂತ ಹಿರಿಯ ಅಧ್ಯಕ್ಷರಾಗಲಿದ್ದಾರೆ. ಅಧ್ಯಕ್ಷ ಜೋ ಬಿಡೆನ್ ಅವರು ಈ ಹಿಂದೆ 77 ನೇ ವಯಸ್ಸಿನಲ್ಲಿ ಚುನಾಯಿತರಾದ ಅತ್ಯಂತ ಹಳೆಯ ಅಧ್ಯಕ್ಷರಾಗಿದ್ದರು. ಟ್ರಂಪ್ ಅವರು ಅನೇಕ ಫೆಡರಲ್ ಅಪರಾಧಗಳು ಮತ್ತು ಹಗರಣಗಳನ್ನು ಎದುರಿಸುತ್ತಿದ್ದಾರೆ. ಇದು ಅವರು ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT