ಇರಿತ (ಸಾಂದರ್ಭಿಕ ಚಿತ್ರ) online desk
ವಿದೇಶ

ಮಾದಕ ವಸ್ತು ಹಿಂಸಾಚಾರ: 15 ವರ್ಷದ ಯುವಕನಿಗೆ 50 ಬಾರಿ ಇರಿತ; ಜೀವಂತ ದಹನ!

ನಗರ ಇತ್ತೀಚಿನ ವರ್ಷಗಳಲ್ಲಿ DZ ಮಾಫಿಯಾ ಸೇರಿದಂತೆ ವಿವಿಧ ಲಾಭದಾಯಕ ಡ್ರಗ್ಸ್ ಮಾರುಕಟ್ಟೆಯ ನಿಯಂತ್ರಣಕ್ಕಾಗಿ ಯುದ್ಧಕ್ಕೆ ಸಾಕ್ಷಿಯಾಗಿದೆ.

ಫ್ರಾನ್ಸ್: ಮಾದಕ ವಸ್ತು ಹಿಂಸಾಚಾರ ಪ್ರಕರಣದಲ್ಲಿ 15 ವರ್ಷದ ಬಾಲಕನಿಗೆ 50 ಬಾರಿ ಇರಿಯಲಾಗಿದ್ದು, ಆತನನ್ನು ಜೀವಂತವಾಗಿ ಸುಡಲಾಗಿದೆ.

ಫ್ರಾನ್ಸ್ ನ ದಕ್ಷಿಣ ಪ್ರದೇಶದಲ್ಲಿರುವ ಮಾರ್ಸಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಮಾರ್ಸಿಲ್ಲೆ ಪ್ರಾಸಿಕ್ಯೂಟರ್ ನಿಕೋಲಸ್ ಬೆಸ್ಸೋನ್, 15 ವರ್ಷದ ಬಾಲಕನನ್ನು ಬುಧವಾರ ಹತ್ಯೆ ಮಾಡಲಾಗಿದೆ. ಪ್ರಕರಣವನ್ನು "ಹಿಂದೆಂದೂ ಕಾಣದ ಅನಾಗರಿಕತೆ" ಎಂದು ಹೇಳಿದ್ದಾರೆ.

ಫ್ರಾನ್ಸ್‌ನ ಎರಡನೇ ಅತಿ ದೊಡ್ಡ ನಗರವಾದ ಮಾರ್ಸೆಲ್ಲೆ, ಅದರ ಅತ್ಯಂತ ಬಡ ನಗರಗಳಲ್ಲಿ ಒಂದಾಗಿದೆ, ಇದು ಮಾದಕ ದ್ರವ್ಯ-ಸಂಬಂಧಿತ ಹಿಂಸಾಚಾರದಿಂದ ಪೀಡಿತವಾಗಿದೆ. ಇಂತಹ ಹಿಂಸಾಚಾರದ ಬಲಿಪಶುಗಳು ಮತ್ತು ಅಪರಾಧಿಗಳ ಪೈಕಿ ಹೆಚ್ಚು ಮಂದಿ ಕಿರಿಯ ವಯಸ್ಸಿನವರಾಗಿದ್ದಾರೆ ಎಂದು ಬೆಸ್ಸೋನ್ ಹೇಳಿದ್ದಾರೆ.

ನಗರ ಇತ್ತೀಚಿನ ವರ್ಷಗಳಲ್ಲಿ DZ ಮಾಫಿಯಾ ಸೇರಿದಂತೆ ವಿವಿಧ ಲಾಭದಾಯಕ ಡ್ರಗ್ಸ್ ಮಾರುಕಟ್ಟೆಯ ನಿಯಂತ್ರಣಕ್ಕಾಗಿ ಯುದ್ಧಕ್ಕೆ ಸಾಕ್ಷಿಯಾಗಿದೆ. ಈ ಹದಿಹರೆಯದವರನ್ನು 23 ವರ್ಷದ ಖೈದಿಯೊಬ್ಬ ಸ್ಪರ್ಧಿಯನ್ನು ಬೆದರಿಸಲು ನೇಮಿಸಿಕೊಂಡಿದ್ದರು, ಪ್ರಾಸಿಕ್ಯೂಟರ್ ಪ್ರಕಾರ ಯುವಕನಿಗೆ 2,000 ಯೂರೋಗಳ ಆಮಿಷವೊಡ್ಡಿದ್ದರು ಎಂದು ತಿಳಿದುಬಂದಿದೆ.

ಅದೇ ಖೈದಿ ನಂತರ 14 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಸೇಡು ತೀರಿಸಿಕೊಳ್ಳಲು ಮತ್ತು ಬ್ಲ್ಯಾಕ್ಸ್ ಗ್ಯಾಂಗ್‌ನ ಸದಸ್ಯನನ್ನು ಕೊಲ್ಲಲು ನೇಮಿಸಿಕೊಂಡಿದ್ದ. ಆತನಿಗೆ 50,000 ಯುರೋಗಳನ್ನು ಪಾವತಿಸುವ ಭರವಸೆ ನೀಡಿದ್ದ ಎಂದು ತಿಳಿದುಬಂದಿದೆ.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ವರ್ಷದ ಆರಂಭದಿಂದ ಮಾರ್ಸೆಲ್ಲೆಯಲ್ಲಿ ಮಾದಕವಸ್ತು ಸಂಬಂಧಿತ ಹತ್ಯೆಗಳ ಸಂಖ್ಯೆ 17ಕ್ಕೆ ಏರಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT