ವಿದೇಶ

ಬೈರುತ್ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾ ಉತ್ತರಾಧಿಕಾರಿ ಹಶೆಮ್ ಸಫಿದ್ದೀನ್ ಹತ್ಯೆ: ಇಸ್ರೇಲ್ ಘೋಷಣೆ

ಆದರೆ ಇಸ್ರೇಲ್ ಸೇನೆ ಹೇಳಿರುವ ಹಶೆಮ್ ಸಫಿದ್ದೀನ್‌ನನ್ನು ಕೊಂದಿರುವ ಬಗ್ಗೆ ಹೆಜ್ಬುಲ್ಲಾ ಇಲ್ಲಿಯವರೆಗೆ ಹೇಳಿಕೆ ನೀಡಿಲ್ಲ.

ಟೆಲ್ ಅವಿವ್: ಇರಾನ್ ಬೆಂಬಲಿತ ಉಗ್ರಗಾಮಿ ಗುಂಪಿನ ಕಮಾಂಡರ್‌ಗಳನ್ನು ಗುರಿಯಾಗಿಸಿಕೊಂಡು ಮೂರು ವಾರಗಳ ಹಿಂದೆ ಬೈರುತ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾದ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾv ಉತ್ತರಾಧಿಕಾರಿಯಾಗಿ ಸುಳಿವು ನೀಡಿದ ಧರ್ಮಗುರುವನ್ನು ಕೊಂದಿರುವುದಾಗಿ ಇಸ್ರೇಲ್ ಸೇನೆ ಘೋಷಿಸಿದೆ.

ಆದರೆ ಇಸ್ರೇಲ್ ಸೇನೆ ಹೇಳಿರುವ ಹಶೆಮ್ ಸಫಿದ್ದೀನ್‌ನನ್ನು ಕೊಂದಿರುವ ಬಗ್ಗೆ ಹೆಜ್ಬುಲ್ಲಾ ಇಲ್ಲಿಯವರೆಗೆ ಹೇಳಿಕೆ ನೀಡಿಲ್ಲ. ಸರಿಸುಮಾರು ಮೂರು ವಾರಗಳ ಹಿಂದೆ ನಡೆದ ದಾಳಿಯಲ್ಲಿ, ಹಿಜ್ಬುಲ್ಲಾದ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥ ಹಶೆಮ್ ಸಫೀದ್ದೀನ್ ಮತ್ತು ಹಿಜ್ಬುಲ್ಲಾದ ಗುಪ್ತಚರ ನಿರ್ದೇಶನಾಲಯದ ಮುಖ್ಯಸ್ಥ ಅಲಿ ಹುಸೇನ್ ಹಜಿಮಾ ಇತರ ಹೆಜ್ಬುಲ್ಲಾ ಕಮಾಂಡರ್ ಗಳೊಂದಿಗೆ ಕೊಲ್ಲಲ್ಪಟ್ಟಿದ್ದಾನೆ ಎಂದು ದೃಢಪಡಿಸುತ್ತೇವೆ ಎಂದು ಇಸ್ರೇಲಿ ಸೇನೆ ಹೇಳಿದೆ.

ಲೆಬನಾನಿನ ರಾಜಧಾನಿಯಲ್ಲಿ ಹಿಜ್ಬುಲ್ಲಾದ ಭದ್ರಕೋಟೆಯಾದ ದಕ್ಷಿಣ ಬೈರುತ್ ಉಪನಗರ ದಹಿಯೆಹ್‌ನಲ್ಲಿರುವ ಹಿಜ್ಬುಲ್ಲಾದ ಮುಖ್ಯ ಗುಪ್ತಚರ ಪ್ರಧಾನ ಕಚೇರಿಯನ್ನು ವಾಯುಪಡೆಯು ಹೊಡೆದಿದೆ. ಆ ಸಮಯದಲ್ಲಿ 25 ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರಗಾಮಿಗಳು ಅಲ್ಲಿದ್ದರು ಎಂದು ಸೇನೆ ಹೇಳಿದೆ.

ಬೈರುತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ದೀರ್ಘಾವಧಿಯ ಹಿಜ್ಬುಲ್ಲಾ ನಾಯಕ ನಸ್ರಲ್ಲಾಹ್ ಸೆಪ್ಟೆಂಬರ್ 27 ರಂದು ಹತ್ಯೆಗೀಡಾಗಿದ್ದಾನೆ.

ಲೆಬನಾನ್ ಮೂಲದ ಗುಂಪಿನ ನಾಯಕನಾಗಿ ತನ್ನ ದೂರದ ಸೋದರ ಸಂಬಂಧಿ ಉತ್ತರಾಧಿಕಾರಿಯಾಗಲು ಸಫೀದಿನ್, ವಾರಗಳ ಹಿಂದೆ ಬೈರುತ್‌ನಲ್ಲಿ ಇಸ್ರೇಲಿ ದಾಳಿ ಮಾಡಿದ ನಂತರ ಸಂಪರ್ಕದಿಂದ ಹೊರಗುಳಿದಿದ್ದಾನೆ ಎಂದು ಉನ್ನತ ಮಟ್ಟದ ಹಿಜ್ಬುಲ್ಲಾ ಮೂಲವು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ