ಹಸ್ಸಾನಲ್ ಬೊಲ್ಕಿಯಾ-ನರೇಂದ್ರ ಮೋದಿ 
ವಿದೇಶ

ಚಿನ್ನದ ಗೋಡೆಗಳ ಅರಮನೆ, 7000 ಕಾರುಗಳ 'ಸುಲ್ತಾನ್‌' ಜೊತೆ ಇಂದು ಪ್ರಧಾನಿ ಮೋದಿ ಭೇಟಿ!

ಬೊಲ್ಕಿಯಾ ಅರಮನೆಯು 1700ಕ್ಕೂ ಹೆಚ್ಚು ಕೊಠಡಿಗಳಿದ್ದು 257 ವಾಶ್ ರೂಂಗಳನ್ನು ಹೊಂದಿದೆ. ವಾಹನಗಳಿಗಾಗಿ 110 ಗ್ಯಾರೇಜ್ಗಳನ್ನು ನಿರ್ಮಿಸಲಾಗಿದೆ. ಅರಮನೆಯ ಕೆಲವು ಗೋಡೆಗಳ ಮೇಲೆ ಚಿನ್ನವನ್ನು ಸಹ ಲೇಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಏಷ್ಯಾದ ಬ್ರೂನಿಗೆ ತೆರಳಿದ್ದಾರೆ. ಪ್ರಧಾನಿ ಮೋದಿಯವರ ಬ್ರೂನಿ ಭೇಟಿಯಿಂದಾಗಿ, ರಾಜಪ್ರಭುತ್ವ ಮತ್ತು ಮೂಲಭೂತವಾದಿ ನಿಯಮಗಳಿಗೆ ಹೆಸರುವಾಸಿಯಾದ ಬ್ರೂನಿ ಬಗ್ಗೆ ಭಾರತದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬ್ರೂನಿ ಬಗ್ಗೆ ಮಾತನಾಡುವಾಗಲೆಲ್ಲಾ, ಮೊದಲು ಚರ್ಚಿಸಲ್ಪಡುವುದು ಆ ದೇಶದ ಸುಲ್ತಾನನ ವಿಷಯವಾಗಿ, ಹೌದು ವಿಶ್ವದ ಶ್ರೀಮಂತ ಸುಲ್ತಾನ್ ಹಸ್ಸಾನಲ್ ಬೊಲ್ಕಿಯಾ ಅವನು ತನ್ನ ಐಷಾರಾಮಿ ಜೀವನವನ್ನು ನಡೆಸುತ್ತಿರುವ ರೀತಿ ನಿಜವಾಗಿಯೂ ಆಶ್ಚರ್ಯಕರವಾಗಿದೆ. ವಾಸ್ತವವಾಗಿ, ಅವರ ಅರಮನೆಯು ಸಾಕಷ್ಟು ಐಷಾರಾಮಿಯಾಗಿದ್ದು ಸಾವಿರಾರು ವಾಹನಗಳ ಸಂಗ್ರಹವನ್ನು ಹೊಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬ್ರೂನಿ ಆಗಮಿಸಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿ ಇದಾಗಿದೆ. ಎರಡು ದಿನಗಳ ಭೇಟಿಯು ಬ್ರೂನಿಯೊಂದಿಗೆ ಭಾರತದ ಬಾಂಧವ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಮತ್ತು ಉಭಯ ದೇಶಗಳ ನಡುವಿನ 40 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಸ್ಮರಿಸುತ್ತದೆ.

ಬ್ರೂನಿ ಸುಲ್ತಾನ್ ಯಾರು?

ಬ್ರೂನಿಯ ಈ ಸುಲ್ತಾನನ ಹೆಸರು ಹಸ್ಸಾನಲ್ ಬೊಲ್ಕಿಯಾ, ಅವರು ವಿಶ್ವದ ಶ್ರೀಮಂತ ಜನರಲ್ಲಿ ಪರಿಗಣಿಸಲ್ಪಟ್ಟಿದ್ದಾರೆ. ಬ್ರೂನಿ 1984ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದಿತ್ತು. ಸುಲ್ತಾನ್ ಒಮರ್ ಅಲಿ ಸೈಫುದ್ದೀನ್ III 1967ರ ಅಕ್ಟೋಬರ್ 5ರಂದು ಬ್ರೂನಿ ರಾಜನಾದರು. ಈಗ ಹಸನಲ್ ಬೊಲ್ಕಿಯಾ ಅವರು ಸುಮಾರು 59 ವರ್ಷಗಳ ಕಾಲ ಚಕ್ರವರ್ತಿಯಾಗಿದ್ದಾರೆ.

ಹಸನಲ್ ಬೊಲ್ಕಿಯಾ ಅವರು ತಮ್ಮ ಐಷಾರಾಮಿ ಜೀವನಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ. ಅವನ ಐಷಾರಾಮಿಗಳಲ್ಲಿ ಅತ್ಯಂತ ವಿಶೇಷವಾದದ್ದು ಅವನ ಅರಮನೆಯು ಹಲವಾರು ಎಕರೆಗಳಲ್ಲಿ ಹರಡಿಕೊಂಡಿದೆ. ಇದಲ್ಲದೆ, ಅವರು ಖಾಸಗಿ ವಿಮಾನವನ್ನು ಹೊಂದಿದ್ದಾರೆ. ಅದಕ್ಕೆ ಚಿನ್ನದ ತಗಡಿನ ಲೇಪನವಿದೆ. ಇದರೊಂದಿಗೆ, ಬ್ರೂನಿ ಸುಲ್ತಾನ್ ವಿಶ್ವದ ಅತಿದೊಡ್ಡ ವಾಹನ ಸಂಗ್ರಹವನ್ನು ಹೊಂದಿದ್ದಾರೆ. ಸುಲ್ತಾನನ ಆಸ್ತಿಯ ಬಗ್ಗೆ ವಿಭಿನ್ನ ವರದಿಗಳಿವೆ, ಆದರೆ ಅವರ ಬಳಿ 30 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಇದೆ ಎಂದು ಹೇಳಲಾಗುತ್ತದೆ.

ಅರಮನೆಯ ಕಥೆ ಅಚ್ಚರಿ ಮೂಡಿಸುತ್ತದೆ

1980ರ ದಶಕದಲ್ಲಿ, ಸುಲ್ತಾನ್ ಹಸನ್ ಅಲಿ ವಿಶ್ವದ ಅತಿದೊಡ್ಡ ಅರಮನೆಯನ್ನು ನಿರ್ಮಿಸಿದರು. ಅದರಲ್ಲಿ ಪ್ರಸ್ತುತ ಸುಲ್ತಾನ್ ಇಂದು ವಾಸಿಸುತ್ತಿದ್ದಾರೆ. ಈ ಅರಮನೆಯು 1,770 ಕೊಠಡಿಗಳು ಮತ್ತು ಸಭಾಂಗಣಗಳನ್ನು ಹೊಂದಿದೆ. ವಿಶ್ವದ ಅತಿದೊಡ್ಡ ಐಷಾರಾಮಿ ಕಾರ್ ಗ್ಯಾರೇಜ್ ಕೂಡ ಈ ಅರಮನೆಯಲ್ಲಿದೆ. ಈ ಅರಮನೆಯು ಎಷ್ಟು ಐಷಾರಾಮಿಯಾಗಿದೆ ಎಂದರೆ ಇಲ್ಲಿನ ಸುಲ್ತಾನರು ಪ್ರಪಂಚದಲ್ಲಿಯೇ ಅತ್ಯಂತ ಐಷಾರಾಮಿಯಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಈ ಅರಮನೆಯು 2 ಮಿಲಿಯನ್ ಚದರ ಅಡಿಗಳಲ್ಲಿದೆ. ಈ ಅರಮನೆಯ ಗುಮ್ಮಟವನ್ನು 22 ಕ್ಯಾರೆಟ್ ಚಿನ್ನದಿಂದ ಅಲಂಕರಿಸಲಾಗಿದೆ. ಈ ಅರಮನೆಯ ಮೌಲ್ಯ 2,550 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಆತನಿಗೆ ಚಿನ್ನದ ಮೇಲಿನ ಪ್ರೀತಿ ಎಷ್ಟಿತ್ತೆಂದರೆ ಮನೆಯಲ್ಲಿ ಚಿನ್ನದ ಬೇಸಿನ್ ಗಳಿದ್ದು, ಕಾರು, ವಿಮಾನದ ಮೇಲೂ ಚಿನ್ನ ಲೇಪಿಸಲಾಗಿದೆ. ಸುಲ್ತಾನನ ಖಾಸಗಿ ವಿಮಾನವೂ ಸಾಮಾನ್ಯ ವಿಮಾನವಲ್ಲ, ಇದನ್ನು ಹಾರುವ ಅರಮನೆ ಎಂದೂ ಕರೆಯುತ್ತಾರೆ. ನಾವು ಅದನ್ನು ಒಳಗಿನಿಂದ ನೋಡಿದರೆ, ಅದು ಸಂಪೂರ್ಣವಾಗಿ ಹಳದಿ ಬಣ್ಣದಲ್ಲಿ ಕಾಣುತ್ತದೆ, ಏಕೆಂದರೆ ಅದರಲ್ಲಿ ಸಾಕಷ್ಟು ಚಿನ್ನವನ್ನು ಬಳಸಲಾಗಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಬೊಲ್ಕಿಯಾ ಅರಮನೆಯು 1700ಕ್ಕೂ ಹೆಚ್ಚು ಕೊಠಡಿಗಳಿದ್ದು 257 ವಾಶ್ ರೂಂಗಳನ್ನು ಹೊಂದಿದೆ. ವಾಹನಗಳಿಗಾಗಿ 110 ಗ್ಯಾರೇಜ್ಗಳನ್ನು ನಿರ್ಮಿಸಲಾಗಿದೆ. ಅರಮನೆಯ ಕೆಲವು ಗೋಡೆಗಳ ಮೇಲೆ ಚಿನ್ನವನ್ನು ಸಹ ಲೇಪಿಸಲಾಗಿದೆ. ಸುಲ್ತಾನ್ ಒಂದು ಸಲ ಕೂದಲನ್ನು ಕತ್ತರಿಸಲು 20 ಸಾವಿರ ಡಾಲರ್ ಅಂದರೆ 16 ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಏಕೆಂದರೆ ಹೇರ್ ಕಟಿಂಗ್ ತಜ್ಞರು ಲಂಡನ್‌ನಿಂದ ಬರುತ್ತಾರೆ.

ಬ್ರೂನಿಯಲ್ಲಿ 80ರಷ್ಟು ಮುಸ್ಲಿಮರಿದ್ದಾರೆ. ಮುಸ್ಲಿಮ್ ಜನಸಂಖ್ಯೆಯ ಈ ಪ್ರಮಾಣವು ಇಂಡೋನೇಷ್ಯಾಕ್ಕಿಂತ ಕಡಿಮೆ ಇದೆ. ಸ್ವಾತಂತ್ರ್ಯದ ನಂತರ ಬ್ರೂನಿಯಲ್ಲಿ ವಿರೋಧಕ್ಕೆ ಅವಕಾಶವಿಲ್ಲ. ಅಂತಹ ಪ್ರಭಾವಶಾಲಿ ನಾಗರಿಕ ಸಮಾಜವೂ ಇಲ್ಲ. 1962ರಲ್ಲಿ ಘೋಷಿಸಲಾದ ತುರ್ತು ಪರಿಸ್ಥಿತಿ ಇನ್ನೂ ಅಲ್ಲಿ ಕಾರ್ಯನಿರ್ವಹಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT