ಟ್ರಂಪ್ ಪ್ರಚಾರದ ವೇಳೆ ಯುವತಿ ಅನುಚಿತ ವರ್ತನೆ 
ವಿದೇಶ

Video: Donald Trump ಚುನಾವಣಾ ಪ್ರಚಾರದ ವೇಳೆ ಯುವತಿ ಅನುಚಿತ ವರ್ತನೆ; ತುಂಬಿದ ಸಭೆಯಲ್ಲಿ 'ಎದೆ' ಪ್ರದರ್ಶನ

ಅಮೆರಿಕದಲ್ಲಿ ನಡೆಯುವ ದೊಡ್ಡ ದೊಡ್ಡ ಈವೆಂಟ್ ಗಳಿಗೆ ಹೋಗಿ ಅಲ್ಲಿಯೂ ಇಂತಹುದೇ ಕೃತ್ಯ ಮಾಡಿ ಪ್ರಚಾರ ಪಡೆಯುತ್ತಿದ್ದಳು.

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಪ್ರಚಾರದ ವೇಳೆ ಯುವತಿಯೊಬ್ಬಳು ತುಂಬಿದ ಸಭೆಯಲ್ಲಿ ತನ್ನ 'ತೆರೆದ ಎದೆ' ಪ್ರದರ್ಶನ ಮಾಡಿರುವ ಘಟನೆ ನಡೆದಿದೆ.

ಅಮೆರಿಕದ ಲಾಂಗ್ ಐಲೆಂಡ್ ನ Nassau Coliseum ವೇದಿಕೆಯಲ್ಲಿ ಡೊನಾಲ್ಡ್ ಟ್ರಂಪ್ ಪ್ರಚಾರದ ಭಾಷಣದಲ್ಲಿ ತೊಡಗಿದ್ದ ವೇಳೆ ಈ ಘಟನೆ ನಡೆದಿದೆ. ಟ್ರಂಪ್ ಭಾಷಣದ ವೇಳೆ ಯುವತಿ ತನ್ನ ಬಟ್ಟೆ ಟೀ ಶರ್ಟ್ ಎತ್ತಿ ತೆರೆದೆದೆ ಪ್ರದರ್ಶಸಿದ್ದಾರೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಯುವತಿ ಕೃತ್ಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇನ್ನು ಯುವತಿಯ ಅನುಚಿತ ವರ್ತನೆ ಹಿನ್ನಲೆಯಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಕರು ಆಕೆಯನ್ನು ಕಾರ್ಯಕ್ರಮದಿಂದ ಹೊರ ಹಾಕಿದ್ದು, ಹೊರಗೆ ಹೋದ ಮೇಲೂ ಕೂಡ ಆಕೆ ಅದೇ ಕೃತ್ಯವನ್ನು ಮುಂದುವರೆಸಿದ್ದಾಳೆ.

ಅಂದಹಾಗೆ ಟ್ರಂಪ್ ಪ್ರಚಾರದ ವೇಳೆ ಅನುಚಿತ ವರ್ತನೆ ತೋರಿದ ಯುವತಿಯನ್ನು 26 ವರ್ಷದ ಅವಾ ಲೂಯಿಸ್ (Ava Louise) ಎಂದು ಪತ್ತೆ ಮಾಡಲಾಗಿದ್ದು, ವೃತ್ತಿಯಲ್ಲಿ ರೂಪದರ್ಶಿಯಾಗಿರುವ ಅವಾ ಲೂಯಿಸ್ ತನ್ನ ಇಂತಹುದೇ ಕೃತ್ಯಗಳಿಂದ ಕುಖ್ಯಾತಿ ಪಡೆದಿದ್ದಾರೆ.

ಅಮೆರಿಕದಲ್ಲಿ ನಡೆಯುವ ದೊಡ್ಡ ದೊಡ್ಡ ಈವೆಂಟ್ ಗಳಿಗೆ ಹೋಗಿ ಅಲ್ಲಿಯೂ ಇಂತಹುದೇ ಕೃತ್ಯ ಮಾಡಿ ಪ್ರಚಾರ ಪಡೆಯುತ್ತಿದ್ದಳು. ಅಲ್ಲದೆ ತನ್ನ ಕೃತ್ಯವನ್ನು ವಿಡಿಯೋ ಮಾಡಿಕೊಂಡು ತನ್ನ Instagram ಖಾತೆಯಲ್ಲಿ ಅಪ್ಲೋಡ್ ಮಾಡುತ್ತಿದ್ದಳು. ಆಕೆ ಈ ವರೆಗೂ 4 ಲಕ್ಷದ 22 ಸಾವಿರ ಫಾಲೋವರ್ಸ್ ಗಳನ್ನು ಹೊಂದಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ; ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು

ಸಾಕು ಮಾಡಿ: ಸೇವಾಶ್ರಯ ಪ್ರಕರಣದಲ್ಲಿ ಕೊನೆಗೂ ಅಭಿಷೇಕ್ ಬ್ಯಾನರ್ಜಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್, ಬಂಧನಕ್ಕೆ ತಡೆ!

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಶೇ. 7.5 ರಷ್ಟು ಮೀಸಲಾತಿ – ಕರಡು ನಿಯಮ ಪ್ರಕಟ

ಸ್ವಚ್ಛ ವಾಯು ಸರ್ವೇಕ್ಷಣ 2026: ಬೆಂಗಳೂರು, ಶ್ರೀನಗರ ಹಿಂದಿಕ್ಕಿದ ದೆಹಲಿ; ಅತ್ಯಂತ ಸ್ವಚ್ಛ ಗಾಳಿ ಯಾವ ನಗರದಲ್ಲಿದೆ ಗೊತ್ತಾ?

ಸತ್ಯ ನಿಕೇತನ ಪಿಜಿ ಕುಸಿತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ; ದುರಂತಕ್ಕೆ ಮಾಲೀಕನಷ್ಟೇ ಅಲ್ಲ MCD, DU ಸಹ ಹೊಣೆ!