ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಗಾಜಾ ಶಾಲೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ; 13 ಮಕ್ಕಳು ಸೇರಿ 22 ಮಂದಿ ಸಾವು

ಹತ್ಯೆಗೀಡಾದವರಲ್ಲಿ 13 ಮಕ್ಕಳು, ಆರು ಮಹಿಳೆಯರು ಮತ್ತು ಮೂರು ತಿಂಗಳ ಮಗು ಸೇರಿದ್ದಾರೆ ಎಂದು ಗಾಜಾ ಸರ್ಕಾರಿ ಮಾಧ್ಯಮ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಗಾಜಾ ಮೇಲೆ ಇಸ್ರೇಲ್ ದಾಳಿ
Lingaraj Badiger
Updated On : 21 Sept 2024, 9:03 pm

ಗಾಜಾ: ಉತ್ತರ ಗಾಜಾದ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 13 ಮಕ್ಕಳು ಸೇರಿದಂತೆ ಕನಿಷ್ಠ 22 ಜನ ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಹತ್ಯೆಗೀಡಾದವರಲ್ಲಿ 13 ಮಕ್ಕಳು, ಆರು ಮಹಿಳೆಯರು ಮತ್ತು ಮೂರು ತಿಂಗಳ ಮಗು ಸೇರಿದ್ದಾರೆ ಎಂದು ಗಾಜಾ ಸರ್ಕಾರಿ ಮಾಧ್ಯಮ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ದಾಳಿಯನ್ನು "ಭಯಾನಕ ಹತ್ಯಾಕಾಂಡ" ಎಂದು ಟೀಕಿಸಿದ ಗಾಜಾ,

Advertisement

Advertisement

ದಾಳಿಯಲ್ಲಿ ಕನಿಷ್ಠ 30 ಜನ ಗಾಯಗೊಂಡಿದ್ದಾರೆ, ಹಲವಾರು ಜನ ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ. ಅಲ್ಲದೆ ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

Also Read

ಇಸ್ರೇಲ್ ವೈಮಾನಿಕ ದಾಳಿ; ಮೋಸ್ಟ್ ವಾಂಟೆಂಡ್ ಹೆಜ್ಬೊಲ್ಲಾ ಕಮಾಂಡರ್ 'ಅಕಿಲ್' ಸಾವು

ಆದರೆ ಹಮಾಸ್‌ನ "ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಸೇನೆ ಹೇಳಿದೆ.

ಇದು ಹಿಂದೆ ಶಾಲೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಂಪೌಂಡ್‌ನೊಳಗೆ ಯುದ್ಧಸಾಮಗ್ರಿಗಳ ಬಳಕೆ ಮತ್ತು ವೈಮಾನಿಕ ಕಣ್ಗಾವಲು ನಡೆಸಲಾಗುತ್ತಿತ್ತು. ಹಮಾಸ್ ಭಯೋತ್ಪಾದಕ ಸಂಘಟನೆಯು ಶಾಲೆಯಲ್ಲಿ ಕಲ್ಪಿಸಲಾಗಿರುವ ಮೂಲಸೌಕರ್ಯಗಳನ್ನು ಮಿಲಿಟರಿ ಉದ್ದೇಶಕ್ಕೆ ಬಳಸುವುದನ್ನು ಮುಂದುವರಿಸಿತ್ತು ಎಂದು ಇಸ್ರೇಲ್ ಸೇನೆ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement