ಸಾಂದರ್ಭಿಕ ಚಿತ್ರ 
ವಿದೇಶ

ಪಂಜಾಬ್ ಪ್ರಾಂತ್ಯ: ಪಾಕ್ ಪೊಲೀಸರಿಂದ ನಾಲ್ವರು ಐಸಿಸ್ ಉಗ್ರರ ಬಂಧನ!

ಖಚಿತ ಮಾಹಿತಿ ಆಧಾರದ ಮೇಲೆ ಪಂಜಾಬ್, ಲಾಹೋರ್, ಟೋಬಾ ಟೇಕ್ ಸಿಂಗ್, ಬಹಾವಲ್ ಪುರ ಮತ್ತು ಮಿಯಾಂವಾಲಿಯಲ್ಲಿನ ಅಡಗುತಾಣಗಳ ಮೇಲೆ ಪಂಜಾಬ್ ಪೊಲೀಸರ ಭಯೋತ್ಪಾದನೆ ನಿಗ್ರಹ ಇಲಾಖೆ (ಸಿಟಿಡಿ) ದಾಳಿ ನಡೆಸಿತ್ತು.

ಪಂಜಾಬ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಾಲ್ವರು ISIS ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.

ಖಚಿತ ಮಾಹಿತಿ ಆಧಾರದ ಮೇಲೆ ಪಂಜಾಬ್, ಲಾಹೋರ್, ಟೋಬಾ ಟೇಕ್ ಸಿಂಗ್, ಬಹಾವಲ್ ಪುರ ಮತ್ತು ಮಿಯಾಂವಾಲಿಯಲ್ಲಿನ ಅಡಗುತಾಣಗಳ ಮೇಲೆ ಪಂಜಾಬ್ ಪೊಲೀಸರ ಭಯೋತ್ಪಾದನೆ ನಿಗ್ರಹ ಇಲಾಖೆ (ಸಿಟಿಡಿ) ದಾಳಿ ನಡೆಸಿತ್ತು ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.

ಬಂಧಿತ ಉಗ್ರರಿಂದ 2,570 ಗ್ರಾಂ ಸ್ಫೋಟಕ, ಮೂರು ಡೆಟೋನೇಟರ್, ರೈಫಲ್, ಪಿಸ್ತೂಲ್, 20 ಬುಲೆಟ್, ನಾಲ್ಕು ಕೈ ಗ್ರನೇಡ್ ಮತ್ತಿತರ ನಿಷೇಧಿತ ಐಎಸ್ ಐಎಸ್ ನ ಬರಹಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಉಗ್ರರು ಪ್ರಮುಖ ಕಟ್ಟಡಗಳು ಮತ್ತು ವ್ಯಕ್ತಿಗಳ ಮೇಲೆ ದಾಳಿ ಮಾಡಲು ಯೋಜಿಸಿದ್ದರು.

ಈ ಮಧ್ಯೆ CTD ಪಂಜಾಬ್ ಈ ವಾರ 980 ಕೂಂಬಿಂಗ್ ಕಾರ್ಯಾಚರಣೆಗ ನಡೆಸಿದ್ದು, ಸ್ಥಳೀಯ ಕಾನೂನು ಜಾರಿ ಏಜೆನ್ಸಿಗಳ ಸಹಯೋಗದೊಂದಿಗೆ 32,662 ವ್ಯಕ್ತಿಗಳನ್ನು ತಪಾಸಣೆ ನಡೆಸಿದೆ.

ಈ ಕಾರ್ಯಾಚರಣೆಯೊಂದಿಗೆ ಒಟ್ಟಾರೇ,109 ಶಂಕಿತ ಉಗ್ರರನ್ನು ಬಂಧಿಸಿ, 102 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಸಿಟಿಡಿ ಪಂಜಾಬ್ ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾ ಏಕಪಕ್ಷೀಯ ನೀತಿಗೆ ಬ್ರೇಕ್‌: 'Quad' ಸಭೆ ನಡುವೆ ಮಹತ್ವದ ಖನಿಜ ಒಪ್ಪಂದಕ್ಕೆ ಭಾರತ-ಅಮೆರಿಕಾ ಸಹಿ..!

Video: 'ಕಾಂತಾರ' ಕೆಂಗಣ್ಣಿಗೆ ಗುರಿ, ಬಾಲಿವುಡ್​ನಿಂದ ಬ್ಯಾನ್; ಚಾಮುಂಡೇಶ್ವರಿಗೆ ತಲೆಬಾಗಿ ಕ್ಷಮೆಯಾಚಿಸಿದ ರಣವೀರ್ ಸಿಂಗ್!

ಚೀನಾಗೆ ಕೌಂಟರ್: ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರ ಹೆಚ್ಚಿಸಲು 'Quad' ಮಹತ್ವದ ತೀರ್ಮಾನ, ಹೊಸ ಕಾರ್ಯಯೋಜನೆ ಘೋಷಿಸಿದ ಮಾರ್ಕೊ ರುಬಿಯೋ..!

ಮಾಜಿ ಸಿಎಂ ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್; 12 TMC ಸಂಸದರು BJP ಸೇರ್ಪಡೆ!

ಥೇಟ್ 'ಡೊನಾಲ್ಡ್ ಟ್ರಂಪ್' ರೀತಿಯ ಅಪರೂಪದ ಎಮ್ಮೆ! ನೋಡಲು ಮುಗಿಬಿದ್ದ ಜನರು, Video ವೈರಲ್

SCROLL FOR NEXT