ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್(ಸಂಗ್ರಹ ಚಿತ್ರ) 
ವಿದೇಶ

ಪುಲ್ವಾಮಾ ಘಟನೆ ಸಂಭವಿಸಿದಾಗ ಭಾರತ ಸಾಕ್ಷ್ಯ ನೀಡಲಿಲ್ಲ, ಈಗ ಪಹಲ್ಗಾಮ್ ದಾಳಿ ಕುರಿತು ಆರೋಪ ಮಾಡುತ್ತಿದೆ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಪಹಲ್ಗಾಮ್ ಘಟನೆಯಲ್ಲಿ ಜೀವಹಾನಿ ಸಂಭವಿಸಿರುವುದು ದುರಂತಮಯವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಆದರೆ, ದಾಳಿ ಕುರಿತು ಭಾರತದ ಆರೋಪ ಸರಿಯಲ್ಲ.

ಲಾಹೋರ್: ಪುಲ್ವಾಮಾ ಘಟನೆ ಸಂಭವಿಸಿದಾಗ ಭಾರತ ಸಾಕ್ಷ್ಯ ನೀಡಿಲಿಲ್ಲ. ಸಾಕ್ಷ್ಯ ನೀಡಲು ವಿಫಲವಾಗಿತ್ತು. ಇದೀಗ ಪಹಲ್ಗಾಮ್ ದಾಳಿ ಕುರಿತು ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿದೆ ಎಂದು ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಅವರು ಅವರು ಬುಧವಾರ ಹೇಳಿದ್ದಾರೆ.

ಪಹಲ್ಗಾಮ್ ಉಗ್ರರ ದಾಳಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿ ದುರಂತವಾಗಿದ್ದು, ಭಾರತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.

ಪಹಲ್ಗಾಮ್ ಘಟನೆಯಲ್ಲಿ ಜೀವಹಾನಿ ಸಂಭವಿಸಿರುವುದು ದುರಂತಮಯವಾಗಿದೆ. ಸಂತ್ರಸ್ತರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಆದರೆ, ದಾಳಿ ಕುರಿತು ಭಾರತದ ಆರೋಪ ಸರಿಯಲ್ಲ. ಪುಲ್ವಾಮಾ ಘಟನೆ ಸಂಭವಿಸಿದಾಗ ಭಾರತಕ್ಕೆ ಸಂಪೂರ್ಣ ಸಹಕಾರ ನೀಡಲು ಮುಂದಾಗಿದ್ದೆವು. ಆದರೆ, ಭಾರತ ಯಾವುದೇ ಸಾಕ್ಷ್ಯಗಳನನ್ನು ನೀಡಿಲಿಲ್ಲ, 2019ರಲ್ಲಿ ನಾನು ಊಹೆ ಮಾಡಿದಂತೆಯೇ ಪಹಲ್ಗಾಮ್ ಘಟನೆಯಲ್ಲೂ ಅದೇ ಆಗುತ್ತಿದೆ. ಆತ್ಮಾವಲೋಕನ ಮತ್ತು ತನಿಖೆಯ ಬದಲು, ಮೋದಿ ಸರ್ಕಾರ ಮತ್ತೆ ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿದೆ. 1.5 ಬಿಲಿಯನ್ ಜನ ಸಂಖ್ಯೆಯನ್ನು ಹೊಂದಿರುವ ಭಾರತ ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ.

ಶಾಂತಿ ನಮ್ಮ ಆದ್ಯತೆಯಾಗಿದೆ ಆದರೆ ಅದನ್ನು ಹೇಡಿತನ ಎಂದು ತಪ್ಪಾಗಿ ಭಾವಿಸಬಾರದು. 2019 ರಲ್ಲಿ ಇಡೀ ರಾಷ್ಟ್ರದ ಬೆಂಬಲದೊಂದಿಗೆ ನನ್ನ ಸರ್ಕಾರ ಮಾಡಿದಂತೆ, ಭಾರತದ ಯಾವುದೇ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡುವ ಎಲ್ಲಾ ಸಾಮರ್ಥ್ಯಗಳನ್ನು ಪಾಕಿಸ್ತಾನ ಹೊಂದಿದೆ. ವಿಶ್ವಸಂಸ್ಥೆಯ ನಿರ್ಣಯಗಳಿಂದ ಖಾತರಿಪಡಿಸಿದಂತೆ ಕಾಶ್ಮೀರಿಗಳ ಸ್ವ-ನಿರ್ಣಯದ ಹಕ್ಕಿನ ಪ್ರಾಮುಖ್ಯತೆಯನ್ನು ಈಗಲು ಒತ್ತಿ ಹೇಳುತ್ತೇನೆ. ಆರ್‌ಎಸ್‌ಎಸ್ ಸಿದ್ಧಾಂತದ ನೇತೃತ್ವದಲ್ಲಿರುವ ಭಾರತವು ಅಲ್ಲಿನ ಪ್ರದೇಶಕ್ಕೆ ಮಾತ್ರವಲ್ಲದೆ ಅದರಾಚೆಗೂ ಗಂಭೀರ ಬೆದರಿಕೆಯಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT