ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ನರೇಂದ್ರ ಮೋದಿ online desk
ವಿದೇಶ

ಮುಂದುವರೆದ ಟ್ರಂಪ್ ಹುಚ್ಚಾಟ: ಭಾರತದ ಉತ್ಪನ್ನಗಳ ಮೇಲೆ ಶೇ.25 ರಷ್ಟು ಹೆಚ್ಚುವರಿ ಸುಂಕ; ಒಟ್ಟು ಶೇ.50 ಕ್ಕೆ ಏರಿಕೆ

ಜುಲೈ ಆರಂಭದಲ್ಲಿ ಟ್ರಂಪ್ ಭಾರತದ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದ್ದರು, ಜೊತೆಗೆ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಅನಿರ್ದಿಷ್ಟ ದಂಡವನ್ನು ವಿಧಿಸಿದ್ದರು.

ನವದೆಹಲಿ: ಅಮೆರಿಕಾ ಆಮದು ಮಾಡಿಕೊಳ್ಳುವ ಭಾರತದ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ ಎಂದು ಶ್ವೇತಭವನ ಬುಧವಾರ ತಿಳಿಸಿದೆ.

ಜುಲೈ ಆರಂಭದಲ್ಲಿ ಟ್ರಂಪ್ ಭಾರತದ ಮೇಲೆ ಶೇ.25 ರಷ್ಟು ಸುಂಕ ವಿಧಿಸಿದ್ದರು, ಜೊತೆಗೆ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಅನಿರ್ದಿಷ್ಟ ದಂಡವನ್ನು ವಿಧಿಸಿದ್ದರು. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾರತ ರಷ್ಯಾವನ್ನು ಬೆಂಬಲಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ಟ್ರಂಪ್ ಪುನರಾವರ್ತಿತ ಆರೋಪಗಳಿಗೆ ಪ್ರತಿಕ್ರಿಯಿಸಿದ ಭಾರತ ಸೋಮವಾರ ವಾಷಿಂಗ್ಟನ್ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ ತೈಲ ಆಮದುಗಳ ಮೇಲೆ "ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ" ಗುರಿಯನ್ನು ಹೊಂದಿವೆ ಎಂದು ಆರೋಪಿಸಿದೆ, ಜಾಗತಿಕ ಮಾರುಕಟ್ಟೆಗಳನ್ನು ಸ್ಥಿರಗೊಳಿಸಲು ಆ ಖರೀದಿಗಳನ್ನು ಒಮ್ಮೆ ಪ್ರೋತ್ಸಾಹಿಸಿದ್ದು ಅಮೆರಿಕವೇ ಎಂಬುದನ್ನು ಭಾರತ ನೆನಪಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಮ್ಮ ಯೋಧರಿಗೆ ಇರುವುದು ಸೈನ್ಯ ಧರ್ಮ ಮಾತ್ರ: ಸೇನೆಯನ್ನು ಎಳೆದು ತರುತ್ತಿರುವುದು ರಾಜಕೀಯ ಕುತಂತ್ರ; ರಾಹುಲ್ ಗೆ ರಾಜನಾಥ್ ಸಿಂಗ್ ತಿರುಗೇಟು

3ನೇ ಮಹಾಯುದ್ಧದ ಸಾಧ್ಯತೆ ದೂರವಿಲ್ಲ: ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್

Devi Awards 2025: ಇಂದು ಸಂಜೆ ಬೆಂಗಳೂರಿನಲ್ಲಿ 11 ಮಹಿಳಾ ಸಾಧಕಿಯರಿಗೆ ಸನ್ಮಾನ

ನವೆಂಬರ್ 10 ರೊಳಗೆ ಬೆಂಗಳೂರಿನ ಎಲ್ಲಾ ರಸ್ತೆಗಳು ಗುಂಡಿ ಮುಕ್ತ: GBA

ಪುಣೆ ಭೂ ಹಗರಣ: ಮಹಾರಾಷ್ಟ್ರ ಸರ್ಕಾರದಿಂದ ಕವರ್‌ಅಪ್? FIR ನಲ್ಲಿ ಅಜಿತ್ ಪವಾರ್ ಪುತ್ರನ ಹೆಸರಿಲ್ಲ, ಆದ್ರೆ...

SCROLL FOR NEXT