ಬೋಂಡಿ ಬೀಚ್ ನಲ್ಲಿ ಉಗ್ರ ದಾಳಿ 
ವಿದೇಶ

Bondi Beach attack: ಉಗ್ರ ದಾಳಿ ಖಂಡಿಸಿದ ಭಾರತ; ಆಸ್ಟ್ರೇಲಿಯಾಗೆ ಬೆಂಬಲ

ದಾಳಿಯ ನಂತರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೋಮವಾರ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರಿಗೊಂದಿಗೆ ಮಾತನಾಡಿದ್ದು, ಅಮಾಯಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ನವದೆಹಲಿ: ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಬೀಚ್ ನಲ್ಲಿ ಜಮಾವಣೆಯಾಗಿದ್ದ ಯಹೂದಿಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 16 ಮಂದಿ ಮೃತಪಟ್ಟಿದ್ದು, ಈ ಘಟನೆಯನ್ನು ಭಾರತ ಖಂಡಿಸಿದೆ ಮತ್ತು ಆಸ್ಟ್ರೇಲಿಯಾಗೆ 'ಸಂಪೂರ್ಣ ಬೆಂಬಲ' ನೀಡಿದೆ.

ದಾಳಿಯ ನಂತರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೋಮವಾರ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರಿಗೊಂದಿಗೆ ಮಾತನಾಡಿದ್ದು, ಅಮಾಯಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

'ಆಸ್ಟ್ರೇಲಿಯಾದ ವಿದೇಶಾಂಗ ಸಚಿವಪೆನ್ನಿ ವಾಂಗ್ ಅವರೊಂದಿಗೆ ಮಾತನಾಡಿದ್ದೇನೆ. ಬೋಂಡಿ ಬೀಚ್ ಭಯೋತ್ಪಾದಕ ದಾಳಿಯ ಬಗ್ಗೆ ನಮ್ಮ ಆಳವಾದ ಸಂತಾಪ ತಿಳಿಸಿದ್ದೇವೆ ಮತ್ತು ನಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದೇವೆ' ಎಂದು ಜೈಶಂಕರ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಸ್ಟ್ರೇಲಿಯಾದ ಅಧಿಕಾರಿಗಳ ಪ್ರಕಾರ, ಭಾನುವಾರ ಇಬ್ಬರು ಬಂದೂಕುಧಾರಿಗಳು ನಡೆಸಿದ ಗುಂಡಿ ದಾಳಿಯಲ್ಲಿ ಹದಿನಾರು ಜನ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಘಟನೆಯ ನಂತರ, ಜೈಶಂಕರ್ ಅವರು ಈ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಬೋಂಡಿ ಬೀಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸುವುದಾಗಿ ಹೇಳಿದ್ದಾರೆ.

ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಈ ದಾಳಿಯನ್ನು ದೇಶಕ್ಕೆ 'ಕರಾಳ ಕ್ಷಣ' ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜಂತರ್ ಮಂತರ್ ಪ್ರತಿಭಟನೆ: ಮಹಿಳೆಯ ಮಾರ್ಫ್ ಮಾಡಿದ ಚಿತ್ರ ತೆಗೆದುಹಾಕಲು Metaಗೆ ಹೈಕೋರ್ಟ್ ಸೂಚನೆ; CJP ನಾಯಕರಿಗೆ ನೋಟಿಸ್

Asian Games 2026: ಭಾರತದ 'ಚಿನ್ನದ' ಬೇಟೆ; ಶೂಟಿಂಗ್ ನಲ್ಲಿ ಸುರುಚಿ ಸಿಂಗ್-ಕಮಲ್ಜೀತ್ ಚಿನ್ನ; ಬೆಳ್ಳಿಗೆ ಮುತ್ತಿಟ್ಟ ಗುಲ್ವೀರ್ ಸಿಂಗ್!

ಕರ್ನಾಟಕಕ್ಕೆ ನೀಡಬೇಕಿದ್ದ 2,186 ಕೋಟಿ ರೂ. ಅನುದಾನಕ್ಕೆ ಕೇಂದ್ರ ಸರ್ಕಾರ ತಡೆ: ಸಚಿವ ಈಶ್ವರ್ ಖಂಡ್ರೆ

'ಚುನಾವಣೆಯಲ್ಲಿ ಅಕ್ರಮ ನಡೆದರೆ ಸ್ಪರ್ಧಿಸಬೇಡಿ, ಚುನಾವಣೆಯನ್ನೇ ಬಹಿಷ್ಕರಿಸಿ:': ಪ್ರತಿಪಕ್ಷಗಳಿಗೆ CJPಯ ಅಭಿಜೀತ್ ದೀಪ್ಕೆ ಆಗ್ರಹ

ನಿರಂತರ ಮಳೆಗೆ ಸಿಕ್ಕಿಂ ತತ್ತರ: ರಿಂಬಿ ಗ್ರಾಮದಲ್ಲಿ ಭಾರೀ ಭೂಕುಸಿತ, 30ಕ್ಕೂ ಹೆಚ್ಚು ಮನೆಗಳು ಹಾನಿ, ಸಿಎಂ ತಮಂಗ್ ಹೇಳಿದ್ದೇನು? Video