ಯುಎಸ್ಎಐಡಿ  
ವಿದೇಶ

ಜೊ ಬೈಡನ್ ಆಡಳಿತದಲ್ಲಿ ಭಾರತಕ್ಕೆ ಅಮೆರಿಕ ನೀಡಿದ ಹೆಚ್ಚಿನ ನೆರವು ಆರೋಗ್ಯ ಉಪಕ್ರಮಗಳಿಗೆ: ಸರ್ಕಾರದ ಅಂಕಿಅಂಶ

ದಕ್ಷಿಣ ಮತ್ತು ಮಧ್ಯ ಏಷ್ಯಾದ 15 ದೇಶಗಳಲ್ಲಿ 4 ನೇ ಮತ್ತು 5 ನೇ ಸ್ಥಾನದಲ್ಲಿರುವ ಭಾರತದ ಕಳೆದ ನಾಲ್ಕು ವರ್ಷಗಳಲ್ಲಿ ಅಮೆರಿಕದ ನೆರವಿನ ಪಾಲು ಪಾಕಿಸ್ತಾನದ 970 ಮಿಲಿಯನ್‌ಗಿಂತ ಶೇಕಡಾ 35ರಷ್ಟು ಕಡಿಮೆಯಾಗಿದೆ. ಅದೇ ಅವಧಿಯಲ್ಲಿ ಚೀನಾದ 49.7 ಮಿಲಿಯನ್‌ ಡಾಲರ್ ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಜೊ ಬೈಡನ್ ಆಡಳಿತ ಸಮಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಭಾರತಕ್ಕೆ 720 ಮಿಲಿಯನ್ ಡಾಲರ್ ಸಹಾಯವನ್ನು ನೀಡಿದ್ದು, ಅದರಲ್ಲಿ ಶೇ.64 ರಷ್ಟು ಈಗ ನಿಷ್ಕ್ರಿಯವಾಗಿರುವ ಅಂತರರಾಷ್ಟ್ರೀಯ ಅಭಿವೃದ್ಧಿಗಾಗಿ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ(USAID) ನಿರ್ವಹಿಸುತ್ತಿತ್ತು. 20.1 ಮಿಲಿಯನ್ ಡಾಲರ್ ಹಣ ಭಾರತದಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕುತ್ತಿರುವ ಪ್ರಜಾಪ್ರಭುತ್ವ ಭಾಗವಹಿಸುವಿಕೆ ಮತ್ತು ನಾಗರಿಕ ಸಮಾಜಕ್ಕಾಗಿ ಹಂಚಿಕೆಯಾಗಿದೆ ಎಂದು ಅಮೆರಿಕ ಸರ್ಕಾರದ ದತ್ತಾಂಶ ವಿಶ್ಲೇಷಣೆ ಹೇಳುತ್ತದೆ.

ದಕ್ಷಿಣ ಮತ್ತು ಮಧ್ಯ ಏಷ್ಯಾದ 15 ದೇಶಗಳಲ್ಲಿ 4 ನೇ ಮತ್ತು 5 ನೇ ಸ್ಥಾನದಲ್ಲಿರುವ ಭಾರತದ ಕಳೆದ ನಾಲ್ಕು ವರ್ಷಗಳಲ್ಲಿ ಅಮೆರಿಕದ ನೆರವಿನ ಪಾಲು ಪಾಕಿಸ್ತಾನದ 970 ಮಿಲಿಯನ್‌ಗಿಂತ ಶೇಕಡಾ 35ರಷ್ಟು ಕಡಿಮೆಯಾಗಿದೆ. ಅದೇ ಅವಧಿಯಲ್ಲಿ ಚೀನಾದ 49.7 ಮಿಲಿಯನ್‌ ಡಾಲರ್ ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ದಕ್ಷಿಣ ಏಷ್ಯಾದಲ್ಲಿ, ಬಾಂಗ್ಲಾದೇಶವು 1.89 ಬಿಲಿಯನ್ ಡಾಲರ್ ಪಡೆದುಕೊಂಡಿದೆ, ಇದು ಭಾರತಕ್ಕಿಂತ ಸುಮಾರು ಶೇಕಡಾ 162ರಷ್ಟು ಹೆಚ್ಚಾಗಿದೆ. 2022 ರಲ್ಲಿ, ಭಾರತವು ಪಾಕಿಸ್ತಾನಕ್ಕಿಂತ 20 ಮಿಲಿಯನ್ ಡಾಲರ್ ಹೆಚ್ಚು, ಒಟ್ಟು 250 ಮಿಲಿಯನ್ ಡಾಲರ್ ನೆರವು, ಪ್ರಾಥಮಿಕವಾಗಿ ಕೋವಿಡ್ ನಂತರದ ಉಪಕ್ರಮಗಳಿಂದಾಗಿ ಬಂದಿದೆ.

ಯುಎಸ್ ಎಐಡಿ ಮೂಲಕ ನಿರ್ವಹಿಸಲ್ಪಡುವ ಹೆಚ್ ಐವಿ-ಏಡ್ಸ್ ವಿರುದ್ಧ ಹೋರಾಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರವು ಒಟ್ಟು 462 ಮಿಲಿಯನ್ ಡಾಲರ್ ಪಡೆದಿದೆ. ಫೆಡರಲ್ ಸರ್ಕಾರದ ಗಾತ್ರವನ್ನು ಕಡಿಮೆ ಮಾಡುವ ಶ್ವೇತಭವನದ ಪ್ರಯತ್ನಗಳಲ್ಲಿ ಭಾಗಿಯಾಗಿರುವ ಎಲೋನ್ ಮಸ್ಕ್, ಯುಎಸ್ ಎಐಡಿಯನ್ನು ಈ ಹಿಂದೆ ಒಂದು ಅಪರಾಧ ಸಂಸ್ಥೆ ಎಂದೂ ಡೊನಾಲ್ಡ್ ಟ್ರಂಪ್ ಅದನ್ನು ಮುಚ್ಚಲು ಒಪ್ಪಿಕೊಂಡಿದ್ದಾರೆ ಎಂದಿದ್ದರು.

ಸರ್ಕಾರದ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್, ಯುಎಸ್ಎಐಡಿ ಆರೋಗ್ಯ ಮತ್ತು ಸಾಮಾಜಿಕ ವಲಯದಲ್ಲಿ ನೀತಿಯ ಮೇಲೆ ಪ್ರಭಾವ ಬೀರುವಲ್ಲಿ ರಹಸ್ಯ ಪಾತ್ರವನ್ನು ವಹಿಸುತ್ತಿದೆ ಎಂದು ಆರೋಪಿಸಿದರು.

ಭಾರತದ ಚುನಾವಣೆಗಳಲ್ಲಿ ಯುಎಸ್ ಎಐಡಿ ಹಸ್ತಕ್ಷೇಪದ ಬಗ್ಗೆ ಕಾಳಜಿ ವಹಿಸುವವರು ಭಾರತದ ವೈದ್ಯಕೀಯ ವ್ಯವಸ್ಥೆ ಮತ್ತು ಸಾಮಾಜಿಕ ನೀತಿಗಳಲ್ಲಿ ಯುಎಸ್ ಎಐಡಿನ ಹಿಡಿತಗಳ ಬಗ್ಗೆಯೂ ಅಷ್ಟೇ ಕಾಳಜಿ ವಹಿಸಬೇಕು. ಯುಎಸ್ಎಐಡಿ 1990ರ ದಶಕದಿಂದ ಎರಡು ವರ್ಷಗಳ ಹಿಂದೆ ಅದನ್ನು ನಿಲ್ಲಿಸುವವರೆಗೆ ಭಾರತದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಿತು ಎಂದು ಹೇಳಿದರು.

ಭಾರತೀಯ ಚುನಾವಣೆಗಳಿಗೆ ಎಲೋನ್ ಮಸ್ಕ್ ಖರ್ಚು ಮಾಡಿದ 21 ಮಿಲಿಯನ್ ಡಾಲರ್ ಅಂಕಿ ಅಂಶವು ಭಾರತದಲ್ಲಿ ಪ್ರಜಾಪ್ರಭುತ್ವ ಭಾಗವಹಿಸುವಿಕೆ ಮತ್ತು ನಾಗರಿಕ ಸಮಾಜದ ಪ್ರಯತ್ನಗಳಿಗಾಗಿ ಮೀಸಲಿಟ್ಟ ಹಣದ ಕುರಿತು ಅಮೆರಿಕಾ ದತ್ತಾಂಶದೊಂದಿಗೆ ಹೊಂದಿಕೆಯಾಗುತ್ತದೆ.

2024ರ ಚುನಾವಣಾ ವರ್ಷದಲ್ಲಿ, ಅಮೆರಿಕಾ ಮತದಾರರ ಮತದಾನದ ಉಪಕ್ರಮಗಳಿಗೆ 5.5 ಮಿಲಿಯನ್ ಡಾಲರ್ ನ್ನು ನಿಗದಿಪಡಿಸಿತು, 2023 ರಲ್ಲಿ ಅದೇ ವರ್ಗದ ಅಡಿಯಲ್ಲಿ ಹೆಚ್ಚುವರಿಯಾಗಿ 6.1 ಮಿಲಿಯನ್ ಡಾಲರ್ ಖರ್ಚು ಮಾಡಲಾಯಿತು. ಕಳೆದ ನಾಲ್ಕು ವರ್ಷಗಳಲ್ಲಿ, ಪ್ರಜಾಪ್ರಭುತ್ವ ಭಾಗವಹಿಸುವಿಕೆಗೆ ಒಟ್ಟು ಬದ್ಧತೆ 20.1 ಮಿಲಿಯನ್ ಡಾಲರ್ ಆಗಿತ್ತು, ಅದರಲ್ಲಿ 13.25 ಮಿಲಿಯನ್ ಡಾಲರ್ ವಿತರಿಸಲಾಗಿದೆ.

ನಾವು ಭಾರತಕ್ಕೆ 21 ಮಿಲಿಯನ್ ಡಾಲರ್ ನ್ನು ಏಕೆ ನೀಡುತ್ತಿದ್ದೇವೆ, ಅವರ ಬಳಿ ಹೆಚ್ಚಿನ ಹಣವಿದೆ. ಅವರು ನಮಗೆ ವಿಶ್ವದ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಒಂದಾಗಿದೆ; ಭಾರತದ ಸುಂಕಗಳು ತುಂಬಾ ಹೆಚ್ಚಿರುವುದರಿಂದ ನಾವು ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT