ಓನ್ಲಿ ಫ್ಯಾನ್ಸ್ ಮಾಡೆಲ್ ಲಿಲಿ ಫಿಲಿಪ್ಸ್ 
ವಿದೇಶ

Sex Marathon: ಒಂದೇ ದಿನ 100 ಪುರುಷರೊಂದಿಗೆ ಸೆಕ್ಸ್, OnlyFans Model ಲಿಲಿ ಫಿಲಿಪ್ಸ್ ಗೆ ಸಂಕಷ್ಟ, Airbnb ನಿಷೇಧ ಭೀತಿ

ಒಂದೇ ದಿನ 100 ಪುರುಷರೊಂದಿಗೆ ಸೆಕ್ಸ್ ಕಾರ್ಯಕ್ರಮ ಆಯೋಜನೆ ಮಾಡಿದ ಆರೋಪದ ಮೇರೆಗೆ ಬ್ರಿಟೀಷ್ ಮಾಡೆಲ್ ಲಿಲಿ ಫಿಲಿಪ್ಸ್ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಲಂಡನ್: ಹೊಸ ವರ್ಷಾಚರಣೆಯ ಅಂಗವಾಗಿ ಒಂದೇ ದಿನ ಬರೊಬ್ಬರಿ 100 ಜನರೊಂದಿಗೆ ಸೆಕ್ಸ್ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ OnlyFans Model ಖ್ಯಾತಿಯ ಮಾಡೆಲ್ ಲಿಲಿ ಫಿಲಿಪ್ಸ್ ಗೆ ಸಂಕಷ್ಟ ಎದುರಾಗಿದ್ದು, ನಿಷೇಧದ ಭೀತಿ ಎದಿರುಸುವಂತಾಗಿದೆ.

ಹೌದು.. ಲಿಲಿ ಫಿಲಿಪ್ಸ್ ವಾಸವಿದ್ದ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ಮಾಲೀಕರ ಒಪ್ಪಿಗೆ ಇಲ್ಲದೇ ಒಂದೇ ದಿನ 100 ಪುರುಷರೊಂದಿಗೆ ಸೆಕ್ಸ್ ಕಾರ್ಯಕ್ರಮ ಆಯೋಜನೆ ಮಾಡಿದ ಆರೋಪದ ಮೇರೆಗೆ ಮಾಡೆಲ್ ಲಿಲಿ ಫಿಲಿಪ್ಸ್ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅವರ ಈ ಕಾರ್ಯಕ್ಕೆ ಅವರ ಮೇಲೆ ನಿಷೇಧದ ತೂಗುಗತ್ತಿ ತೂಗುತ್ತಿದೆ.

ಲಂಡನ್ ನ Airbnb ಲಿಲಿ ಫಿಲಿಪ್ಸ್ ಮೇಲೆ ನಿಷೇಧ ಹೇರಲು ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಲಾಗುತ್ತಿದೆ. Airbnb ಎನ್ನುವುದು ಆನ್‌ಲೈನ್ ಮಾರುಕಟ್ಟೆಯಾಗಿದ್ದು ಅದು ಜನರಿಗೆ ಅಲ್ಪಾವಧಿಗೆ ಬಾಡಿಗೆಗೆ ಆಸ್ತಿಯನ್ನು ಲಭ್ಯವಾಗುವಂತೆ ಮಾಡುತ್ತದೆ. ಆಸ್ತಿ ಮಾಲೀಕರು ಮತ್ತು Airbnb ಮೂಲಕ ಆಸ್ತಿಯನ್ನು ಬಾಡಿಗೆಗೆ ಪಡೆಯಲು ಆಸಕ್ತಿ ಹೊಂದಿರುವ ಜನರು ಈ ಪ್ಲಾಟ್ ಫಾರ್ಮ್ ಮೂಲಕ ಸಂಪರ್ಕದಲ್ಲಿರಬಹುದು.

ಇದೀಗ ಮಾಡಲ್ ಲಿಲಿ ಫಿಲಿಪ್ಸ್ ತನ್ನ ಅಪಾರ್ಟ್ ಮೆಂಟ್ ನಲ್ಲಿ ಮಾಲೀಕರ ಒಪ್ಪಿಗೆ ಇಲ್ಲದೇ ಸೆಕ್ಸ್ ಪಾರ್ಟಿ ಆಯೋಜನೆ ಮಾಡಿದ್ದರಿಂದ ಆಕೆಯನ್ನು Airbnb ನಿಷೇಧಿಸಲು ಮುಂದಾಗಿದೆ.

ವೈರಲ್ ಆಗಿದ್ದ ಲಿಲಿ ಫಿಲಿಪ್ಸ್ ಪೋಸ್ಟ್

ಇನ್ನು ಓನ್ಲಿ ಫ್ಯಾನ್ಸ್‌ನ ಮಾಡೆಲ್ ಲಿಲಿ ಫಿಲಿಪ್ಸ್ ಈ ಹಿಂದೆ ಹೊಸ ವರ್ಷಾಚರಣೆ ಸಂಬಂಧ ಪೋಸ್ಟ್ ವೊಂದನ್ನು ಹಾಕಿದ್ದರು. ಅದರಲ್ಲಿ ಸೆಕ್ಸ್ ಮ್ಯಾರಥಾನ್ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಆಕೆ 1 ಸಾವಿರ ಮಂದಿ ಜೊತೆ ಮ್ಯಾರಥಾನ್ ಸೆಕ್ಸ್ ನಡೆಸುವುದಾಗಿ ಘೋಷಣೆ ಮಾಡಿದ್ದರು.

ಅಲ್ಲದೆ ಜನವರಿ 1ರಂದು ಅಂದರೆ ಹೊಸ ವರ್ಷಾಚರಣೆ ದಿನ ಆಕೆ AirBnB ಅಪ್ಲಿಕೇಶನ್ ಮೂಲಕ ಬಾಡಿಗೆಗೆ ಪಡೆದಿದ್ದ ಫ್ಲಾಟ್ ನಲ್ಲೇ 100 ಜನರೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದರು. ಈ ವಿಚಾರವನ್ನೂ ಆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಇದೇ ಪೋಸ್ಟ್ ಅವರ ವಿರುದ್ಧ AirBnB ಕ್ರಮಕ್ಕೆ ಮುಂದಾಗುವಂತೆ ಮಾಡಿದೆ.

ಸೆಕ್ಸ್ ಮ್ಯಾರಥಾನ್ ಗೂ ಚಿಂತನೆ

ಇದೇ ವಿಡಿಯೋದಲ್ಲಿ ಲಿಲಿ ಫಿಲಿಪ್ಸ್ ತಾನು ಭವಿಷ್ಯದಲ್ಲಿಯೂ ಇದೇ ಸಾಹಸವನ್ನು ಮುಂದುವರೆಸಲು ಬಯಸುತ್ತೇನೆ. ನನ್ನ ಈ ಕೃತ್ಯದಿಂದ ನನಗೆ ಪಾಶ್ಚಾತ್ತಾಪವೇನೂ ಇಲ್ಲ.. ಅಲ್ಲದೆ ಮುಂದಿನ ಬಾರಿ ಈ ಪ್ರಮಾಣ 10 ಪಟ್ಟು ಹೆಚ್ಚಾಗಲಿದೆ ಎಂದು ಹೇಳಿದ್ದರು. ಅವರ ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.

ಮಾಲೀಕರ ಆಘಾತ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಕೆಯ ಫ್ಲಾಟ್ ಮಾಲೀಕ, ಅವರ ಈ ಪೋಸ್ಟ್ ನಿಂದ ತಾವು ಆಘಾತಕ್ಕೊಳಗಾಗಿದ್ದು, ಸಾವಿರ ಮಂದಿಯ ಜೊತೆ ಸೆಕ್ಸ್ ನಡೆಸಲು ಆಕೆ ಫ್ಲಾಟ್ ಪಡೆದಿದ್ದಾಳೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಓನ್ಲಿ ಫ್ಯಾನ್ಸ್‌ನ ಮಾಡೆಲ್ ಲಿಲಿ ಫಿಲಿಪ್ಸ್ ಇತ್ತೀಚೆಗೆ ಯೂಟ್ಯೂಬರ್‌ನೊಂದಿಗಿನ ಸಂಭಾಷಣೆಯಲ್ಲಿ ಲಂಡನ್ ಫ್ಲಾಟ್‌ನಲ್ಲಿ ಒಂದು ದಿನದಲ್ಲಿ 100 ಜನರೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದೇನೆ ಎಂದು ಬಹಿರಂಗಪಡಿಸಿದ್ದರು.

ನಿಯಮ ಉಲ್ಲಂಘನೆ; ನಿಷೇಧದ ಭೀತಿ

ಇನ್ನು ಲಿಲಿ ಫಿಲಿಪ್ಸ್ AirBnB ಆ್ಯಪ್ ಮೂಲಕ ಬಾಡಿಗೆಗೆ ಫ್ಲಾಟ್ ಪಡೆದಿದ್ದು, ಆದಾಗ್ಯೂ ಅವರು ಸೆಕ್ಸ್ ಪಾರ್ಟಿ ಆಯೋಜನೆ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ AirBnB ಪ್ಲಾಟ್ ಫಾರ್ಮ್ ನಲ್ಲಿ ಆಕೆಯನ್ನು ನಿಷೇಧಕ್ಕೊಳಪಡಿಸಲಾಗುತ್ತದೆ ಎಂದು ಹೇಳಲಾಗಿದೆ.

ಇಷ್ಟಕ್ಕೂ ಏನಿದು Airbnb?

Airbnb ಎನ್ನುವುದು ಆನ್‌ಲೈನ್ ಮಾರುಕಟ್ಟೆಯಾಗಿದ್ದು ಅದು ಜನರಿಗೆ ಅಲ್ಪಾವಧಿಗೆ ಬಾಡಿಗೆಗೆ ಆಸ್ತಿಗಳು ಲಭ್ಯವಾಗುವಂತೆ ಮಾಡುತ್ತದೆ. ಆಸ್ತಿ ಮಾಲೀಕರು ಮತ್ತು Airbnb ಮೂಲಕ ಆಸ್ತಿಯನ್ನು ಬಾಡಿಗೆಗೆ ಪಡೆಯಲು ಆಸಕ್ತಿ ಹೊಂದಿರುವ ಜನರು ಸಂಪರ್ಕದಲ್ಲಿರಬಹುದು. ಇದು ಫ್ಲಾಟ್, ಮನೆ, ಅಂಗಡಿ, ಗೋದಾಮು ಮುಂತಾದವುಗಳನ್ನು ಒಳಗೊಂಡಿರುತ್ತದೆ. ಈಗ Airbnb ಲಿಲಿ ಫಿಲಿಪ್ಸ್ ಅವರ ಹೇಳಿಕೆಗೆ ಅಸಮಾಧಾನವನ್ನು ವ್ಯಕ್ತಪಡಿಸಿತು ಮತ್ತು ಲಿಲಿ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಅವರು ಯಾವ ಉದ್ದೇಶಕ್ಕಾಗಿ ಫ್ಲಾಟ್ ಅನ್ನು ಬಾಡಿಗೆಗೆ ನೀಡುತ್ತಿದ್ದಾರೆಂದು ಜಮೀನುದಾರರಿಗೆ ತಿಳಿಸಲಿಲ್ಲ ಎಂದು ಹೇಳಿದರು. ಈಗ Airbnb ಲಿಲಿ ಫಿಲಿಪ್ಸ್ ಅನ್ನು ನಿಷೇಧಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT