ಡೊನಾಲ್ಡ್ ಟ್ರಂಪ್- ಎಲಾನ್ ಮಸ್ಕ್ online desk
ವಿದೇಶ

ಟ್ರಂಪ್'ಗೆ ಎಲಾನ್ ಮಸ್ಕ್ ತಿರುಗೇಟು: ಹೊಸ ಪಕ್ಷ ಸ್ಥಾಪನೆ; ನಿಮ್ಮ ಸ್ವಾತಂತ್ರ್ಯ ಮರಳಿ ನೀಡಲು 'ಅಮೇರಿಕಾ ಪಾರ್ಟಿ' ರಚನೆ ಎಂದ ಉದ್ಯಮಿ!

ಎಲಾನ್​ ಮಸ್ಕ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮನಸ್ತಾಪ ಮೂಡಿದ್ದು, ಇಬ್ಬರು ಸಾರ್ವಜನಿಕವಾಗಿ ಪರಸ್ಪರ ಟೀಕೆಗಳಲ್ಲಿ ತೊಡಗಿದ್ದಾರೆ. ಇದರ ನಡುವೆಯೇ ಟ್ರಂಪ್​'ಗೆ ತಿರುಗೇಟು ನೀಡಲು ಮಸ್ಕ್​​ ಹೊಸ ಪಕ್ಷ ರಚನೆ ಮಾಡಿರುವುದಾಗಿ ತಿಳಿಸಿದ್ದಾರೆ.

ವಾಷಿಂಗ್ಟನ್: ಒಂದು ಕಾಲದಲ್ಲಿ ಡೊನಾಲ್ಡ್​ ಟ್ರಂಪ್ ಆಪ್ತಮಿತ್ರ ಮತ್ತು ಸಲಹೆಗಾರರಾಗಿದ್ದ ​ ಬಿಲಿಯನೇರ್ ಎಲಾನ್ ಮಸ್ಕ್​ ಇದೀಗ ಅವರ ವಿರುದ್ಧ ತಿರುಗಿ ಬಿದ್ದಿದ್ದು, “ಅಮೆರಿಕ ಪಾರ್ಟಿ” ಹೆಸರಿನಲ್ಲಿ ಹೊಸ ರಾಜಕೀಯ ಪಕ್ಷವನ್ನು ರಚಿಸಿರುವುದಾಗಿ ಹೇಳಿದ್ದಾರೆ.

ಎಲಾನ್​ ಮಸ್ಕ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮನಸ್ತಾಪ ಮೂಡಿದ್ದು, ಇಬ್ಬರು ಸಾರ್ವಜನಿಕವಾಗಿ ಪರಸ್ಪರ ಟೀಕೆಗಳಲ್ಲಿ ತೊಡಗಿದ್ದಾರೆ. ಇದರ ನಡುವೆಯೇ ಟ್ರಂಪ್​'ಗೆ ತಿರುಗೇಟು ನೀಡಲು ಮಸ್ಕ್​​ ಹೊಸ ಪಕ್ಷ ರಚನೆ ಮಾಡಿರುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಸ್ಕ್ ಅವರು, ನಮ್ಮ ದೇಶವನ್ನು ವ್ಯರ್ಥ ಮತ್ತು ಭ್ರಷ್ಟಾಚಾರದಿಂದ ದಿವಾಳಿ ಮಾಡುವ ವಿಷಯ ಬಂದಾಗ, ನಾವು ಪ್ರಜಾಪ್ರಭುತ್ವದಲ್ಲಲ್ಲ, ಏಕಪಕ್ಷೀಯ ವ್ಯವಸ್ಥೆಯಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಮಸ್ಕ್ ಪ್ರಸ್ತುತದ ರಾಜಕೀಯ ವ್ಯವಸ್ಥೆಯನ್ನು ಟೀಕಿಸಿದ್ದಾರೆ. ಅಲ್ಲದೆ, ಇಂದು, ನಿಮ್ಮ ಸ್ವಾತಂತ್ರ್ಯವನ್ನು ಮರಳಿ ನೀಡಲು ಅಮೇರಿಕಾ ಪಕ್ಷವನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, “ಏಕಪಕ್ಷ” ವ್ಯವಸ್ಥೆ ಎಂದು ಕರೆಯುವ ಅಮೆರಿಕದ ರಾಜಕೀಯ ವ್ಯವಸ್ಥೆಗೆ ಹೇಗೆ ಸವಾಲು ಹಾಕಬಹುದು ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

ನಾವು ಏಕಪಕ್ಷ ವ್ಯವಸ್ಥೆಯನ್ನು ಭೇದಿಸಲು ಹೊರಟಿರುವ ಮಾರ್ಗವೆಂದರೆ, ಲ್ಯೂಕ್ರಾದಲ್ಲಿ ಸ್ಪಾರ್ಟನ್ನರ ಅಜೇಯತೆಯ ಪುರಾಣವನ್ನು ಎಪಾಮಿನೊಂಡಾಸ್ ಹೇಗೆ ಛಿದ್ರಗೊಳಿಸಿದರು ಎಂಬುದರ ಒಂದು ರೂಪಾಂತರವನ್ನು ಬಳಸುವುದಾಗಿದೆ ಅಂದರೆ, ಯುದ್ಧಭೂಮಿಯಲ್ಲಿ ನಿಖರವಾದ ಸ್ಥಳದಲ್ಲಿ ಅತ್ಯಂತ ಕೇಂದ್ರೀಕೃತ ಬಲ ಎಂದು ​ವಿವರಿಸಿದ್ದಾರೆ.

ಯುಎಸ್ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ (ಜು.4) ಎಕ್ಸ್ ಖಾತೆಯಲ್ಲಿ ಮಸ್ಕ್ ಅವರು ಒಂದು ಸಮೀಕ್ಷೆಯನ್ನು ಪೋಸ್ಟ್ ಮಾಡಿದ್ದರು.

ನೀವು ಎರಡು-ಪಕ್ಷ (ಕೆಲವರು ಏಕಪಕ್ಷೀಯ ಎಂದು ಹೇಳುತ್ತಾರೆ) ವ್ಯವಸ್ಥೆಯಿಂದ ಸ್ವಾತಂತ್ರ್ಯವನ್ನು ಬಯಸುತ್ತೀರಾ ಎಂದು ಕೇಳಲು ಸ್ವಾತಂತ್ರ್ಯ ದಿನವು ಸೂಕ್ತ ಸಮಯ. ನಾವು ಅಮೆರಿಕ ಪಕ್ಷವನ್ನು ರಚಿಸಬೇಕೇ? ಎಂದು ಫಾಲೋವರ್ಸ್​ ಅನ್ನು ಮಸ್ಕ್ ಕೇಳಿದ್ದರು.

ಇದಕ್ಕೆ ಶೇ. 65.4 ರಷ್ಟು ಫಾಲೋವರ್ಸ್​ “ಹೌದು” ಎಂದು ಮತ ಚಲಾಯಿಸಿದ್ದರೆ, ಶೇ. 34.6 ರಷ್ಟು ಫಾಲೋವರ್ಸ್​ ಮಾತ್ರ “ಇಲ್ಲ” ಎಂದು ಮತ ಚಲಾಯಿಸಿದ್ದರು. ಈ ಸಮೀಕ್ಷಾ ವರದಿಯನ್ನೂ ಹಂಚಿಕೊಂಡಿರುವ ಮಸ್ಕ್ ಅವರು, ಈ ಬಲವಾದ ಬೆಂಬಲವನ್ನು ಪಕ್ಷ ರಚನೆ ನಿರ್ಧಾರ ಹಿಂದಿನ ಪ್ರೇರಕ ಶಕ್ತಿ ಎಂದು ಹೇಳಿದ್ದಾರೆ.

ಒನ್ ಬಿಗ್ ಬ್ಯೂಟಿಫುಲ್ ಬಿಲ್” ಎಂದು ಕರೆಯಲ್ಪಡುವ ಹೊಸ ಶಾಸನವು ಕಾಂಗ್ರೆಸ್​ನ ಎರಡೂ ಸದನಗಳನ್ನು ಅಂಗೀಕರಿಸಿ ಜುಲೈ 4 ರಂದು ಕಾನೂನಾಗಿ ಸಹಿ ಹಾಕಲ್ಪಟ್ಟಿತು.

ಈ ಮಸೂದೆಯನ್ನು ಮಸ್ಕ್ ಅವರು ತೀವ್ರವಾಗಿ ವಿರೋಧಿಸಿದ್ದು, ಟೀಕಿಸಿದ್ದಾರೆ. ಈ ಮಸೂದೆ ತೆರಿಗೆದಾರರ ಮೇಲೆ ಭಾರಿ ಹೊರೆಯಾಗಲಿದೆ ಎಂದು ಮಸ್ಕ್​ ಅಭಿಪ್ರಾಯಪಟ್ಟಿದ್ದರು. ಅಲ್ಲದೆ, ಒಂದೊಮ್ಮೆ ಈ ಬಿಲ್​ಗೆ ಅನುಮೋದನೆ ಸಿಕ್ಕರೆ ಜನರ ಹಿತಾಸಕ್ತಿಗಳಿಗೆ ನಿಜವಾಗಿಯೂ ಆದ್ಯತೆ ನೀಡುವ ಹೊಸ ಪಕ್ಷವನ್ನು ರಚಿಸುವುದಾಗಿ ಹೇಳಿದ್ದರು,

ಈ ಮಸೂದೆಯನ್ನು ಬೆಂಬಲಿಸುವ ಸಂಸದರು ಮುಂದಿನ ವರ್ಷ ಪ್ರಾಥಮಿಕ ಚುನಾವಣೆಯಲ್ಲಿ ಸೋಲನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿದ್ದರು.

ಶನಿವಾರ ಸೆನೆಟ್​ನಲ್ಲಿ ಮಸೂದೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಮಸ್ಕ್​ ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡುವುದಾಗಿ ಭರವಸೆ ನೀಡಿ ಈ ಮಸೂದೆಯನ್ನು ಬೆಂಬಲಿಸಿದ ಶಾಸಕರು ನಾಚಿಕೆಪಡಬೇಕು ಎಂದಿದ್ದರು.

ಮಸೂದೆಯನ್ನು ದುಬಾರಿ ಎಂದು ಕರೆದಿದ್ದ ಮಸ್ಕ್​​, ಇದನ್ನು ಪೋರ್ಕಿ ಪಿಗ್ ಪಾರ್ಟಿ ಎಂದಿದ್ದರು. ಈ ಪದವನ್ನು ವ್ಯರ್ಥ ವೆಚ್ಚಕ್ಕೆ ಬಳಸಲಾಗುತ್ತದೆ.

ಒಂದು ಕಾಲದಲ್ಲಿ ಟ್ರಂಪ್ ಅವರ ಆಪ್ತ ಸಲಹೆಗಾರರಾಗಿದ್ದ ಎಲೋನ್ ಮಸ್ಕ್ ಅವರನ್ನು ‘ಸರ್ಕಾರಿ ದಕ್ಷತೆ ಇಲಾಖೆ’ಯ ಮುಖ್ಯಸ್ಥರನ್ನಾಗಿ ಮಾಡಲಾಯಿತು . ಆದರೆ ಶೀಘ್ರದಲ್ಲೇ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಗಾಢವಾಗಲು ಪ್ರಾರಂಭಿಸಿದವು. ತಮ್ಮ ಬೆಂಬಲವಿಲ್ಲದಿದ್ದರೆ ಟ್ರಂಪ್ ಚುನಾವಣೆಯಲ್ಲಿ ಸೋಲುತ್ತಿದ್ದರು ಎಂದು ಮಸ್ಕ್ ಹೇಳಿಕೊಂಡಿದ್ದರು, ಬಳಿಕ ಸರ್ಕಾರದಿಂದ ಹೊರ ನಡೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT