ಭಾರತೀಯ ಕಾಲಮಾನ ಪ್ರಕಾರ ನಿನ್ನೆ ಶನಿವಾರ ಮಧ್ಯಾಹ್ನ ಉತ್ತರ ವಿಯೆಟ್ನಾಂನಲ್ಲಿ ಹಠಾತ್ ಗುಡುಗು ಸಹಿತ ಮಳೆಯಿಂದಾಗಿ ಪ್ರವಾಸಿ ದೋಣಿಯೊಂದು ಮಗುಚಿ ಎಂಟು ಮಕ್ಕಳು ಸೇರಿದಂತೆ ಕನಿಷ್ಠ 34 ಜನರು ಮೃತಪಟ್ಟಿದ್ದಾರೆ. 8 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಯೆಟ್ನಾಂ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ವಂಡರ್ ಸೀ ದೋಣಿಯು 53 ಪ್ರಯಾಣಿಕರು ಮತ್ತು ಐದು ಸಿಬ್ಬಂದಿಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ವಿಯೆಟ್ನಾಂನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಹಾ ಲಾಂಗ್ ಕೊಲ್ಲಿಯ ದೃಶ್ಯವೀಕ್ಷಣೆಯ ಪ್ರವಾಸಕ್ಕೆ ಕರೆದೊಯ್ಯುತ್ತಿತ್ತು.
ಈ ವೇಳೆ ಹಠಾತ್ ಗುಡುಗು ಸಹಿತ ಭಾರೀ ಗಾಳಿ ಮಳೆಯಿಂದ ದೋಣಿ ಮಗುಚಿ ಬಿತ್ತು. ರಕ್ಷಣಾ ತಂಡಗಳು 11 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಘಟನೆ ನಡೆದ ಸ್ಥಳದ ಬಳಿ 27 ಶವಗಳನ್ನು ಹೊರತೆಗೆದಿವೆ. ಉಳಿದ 23 ಪ್ರಯಾಣಿಕರು ಇನ್ನೂ ಪತ್ತೆಯಾಗಿಲ್ಲ.
ವಿಯೆಟ್ನಾಂ ಸ್ಥಳೀಯ ಸಮಯ ಮಧ್ಯಾಹ್ನ 2 ಗಂಟೆ ಸುಮಾರಿಗೆ ದೋಣಿ ಪಲ್ಟಿ ಹೊಡೆದಿದ್ದು, ಬಲವಾದ ಗಾಳಿ ಮತ್ತು ಬಿರುಗಾಳಿಯಿಂದ ಈ ದುರ್ಘಟನೆ ಸಂಭವಿಸಿದೆ. ಬದುಕುಳಿದವರಲ್ಲಿ 14 ವರ್ಷದ ಬಾಲಕನೂ ಸೇರಿದ್ದಾನೆ, ಆತನನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಉರುಳಿದ ಒಡಲಿನಲ್ಲಿ ಸಿಲುಕಿಸಿ ರಕ್ಷಿಸಲಾಯಿತು.
ಬಹುತೇಕ ಪ್ರಯಾಣಿಕರು ಹನೋಯ್‌ನ ಪ್ರವಾಸಿಗರಾಗಿದ್ದರು, ಅವರಲ್ಲಿ ಸುಮಾರು 20 ಮಕ್ಕಳು ಸೇರಿದ್ದರು. ಸವಾಲಿನ ಹವಾಮಾನ ಪರಿಸ್ಥಿತಿಗಳ ನಡುವೆಯೂ ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.