ಬ್ಯಾಂಕಾಕ್: ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷವು ವಿವಾದಿತ ಗಡಿಯಲ್ಲಿ ಮತ್ತೊಮ್ಮೆ ಭುಗಿಲೆದ್ದಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಥಾಯ್ಲೆಂಡ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಭಾರತೀಯ ರಾಯಭಾರ ಕಚೇರಿ ಸಲಹೆಗಳನ್ನು ನೀಡಿದೆ.
ಥಾಯ್ಲೆಂಡ್‌ನಲ್ಲಿ ನೆಲೆಸಿರುವ ಭಾರತೀಯರು ಎಚ್ಚರ ವಹಿಸಬೇಕು ಮತ್ತು ಭಾರತದಿಂದ ಬರುವವರು ಸದ್ಯಕ್ಕೆ ಪ್ರವಾಸ ಮುಂದೂಡಬೇಕು ಎಂದು ಥಾಯ್ಲೆಂಡ್‌ನಲ್ಲಿರುವ ರಾಯಭಾರ ಕಚೇರಿ ಪ್ರಕಟಣೆ ಹೊರಡಿಸಿದೆ.
ಉಭಯ ರಾಷ್ಟ್ರಗಳ ನಡುವೆ ಕಳೆದ ಗುರುವಾರದಿಂದ ಯುದ್ಧ ಆರಂಭವಾಗಿದೆ. ಸಂಘರ್ಷದಲ್ಲಿ ಕನಿಷ್ಠ 11 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ಥಾಯ್ ಸರ್ಕಾರಿ ಸ್ವಾಮ್ಯದ ಪ್ರಚಾರ ಇಲಾಖೆ ಮಾಹಿತಿ ನೀಡಿದೆ.
ಥಾಯ್ಲೆಂಡ್ ಮತ್ತು ಕಾಂಬೊಡಿಯಾ ಗಡಿಯ ಪ್ರಸ್ತುತದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರಿಸ್ಥಿತಿಯ ಮಾಹಿತಿಯನ್ನು ಪ್ರವಾಸಿಗರು ಥಾಯ್ ಅಧಿಕಾರಿಗಳಿಂದ ಪಡೆಯಹುದು ಎಂದು ಅಲ್ಲಿನ ಸರ್ಕಾರ ಎಕ್ಸ್ ಖಾತೆಯಲ್ಲಿ ಹೇಳಿದೆ.
‘ಉಬಾನ್ ರತ್ಚಥನಿ, ಸುರಿನ್, ಸಿಸಾಕೆತ್, ಬುರಿರಾಮ್, ಸಾಕೋ, ಚಂತಬುರಿ ಮತ್ತು ಟ್ರಾಟ್ ಪ್ರಾಂತ್ಯಗಳ ಭೇಟಿಯನ್ನು ಥಾಯ್ಲೆಂಡ್ ಶಿಫಾರಸು ಮಾಡುವುದಿಲ್ಲ’ ಎಂದು ಹೇಳಿದೆ.