ಥಾಯ್ಲೆಂಡ್-ಕಾಂಬೋಡಿಯಾ ಸಂಘರ್ಷದ ಕೇಂದ್ರ ಬಿಂದು ಹಿಂದೂ ದೇಗುಲ 
ವಿದೇಶ

Thailand vs Cambodia war: ಬೌದ್ಧ ರಾಷ್ಟ್ರಗಳ ನಡುವಿನ ಸಂಘರ್ಷಕ್ಕೆ Hindu Temple ಕಾರಣ?

ಶಿವನಿಗೆ ಅರ್ಪಿತವಾದ 900 ವರ್ಷ ಹಳೆಯ ಪ್ರೀಯಾ ವಿಹಾರ್ ದೇವಾಲಯವು ಕಾಂಬೋಡಿಯಾದ ಡಾಂಗ್ರೆಕ್ ಪರ್ವತಗಳಲ್ಲಿ 525 ಮೀಟರ್ ಬಂಡೆಯ ಮೇಲೆ ನೆಲೆಗೊಂಡಿದೆ.

ನವದೆಹಲಿ: ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ತೀವ್ರ ಸೇನಾ ಸಂಘರ್ಷ ಆರಂಭವಾಗಿದ್ದು, ಕಾಂಬೋಡಿಯಾ ಮೇಲೆ ಥಾಯ್ಲೆಂಡ್ ವಾಯುದಾಳಿ ನಡೆಸುತ್ತಿದೆ. ಈ ನಡುವೆ ಉಭಯ ಬೌದ್ಧ ದೇಶಗಳ ನಡುವಿನ ಸೇನಾ ಸಂಘರ್ಷಕ್ಕೆ 900 ವರ್ಷಗಳ ಹಳೆಯ ಹಿಂದೂ ದೇಗುಲ ಕಾರಣ ಎಂದು ಹೇಳಲಾಗಿದೆ.

ಹೌದು.. ಶಿವನಿಗೆ ಅರ್ಪಿತವಾದ 900 ವರ್ಷ ಹಳೆಯ ಪ್ರೀಯಾ ವಿಹಾರ್ ದೇವಾಲಯವು ಕಾಂಬೋಡಿಯಾದ ಡಾಂಗ್ರೆಕ್ ಪರ್ವತಗಳಲ್ಲಿ 525 ಮೀಟರ್ ಬಂಡೆಯ ಮೇಲೆ ನೆಲೆಗೊಂಡಿದೆ.

ಪಶ್ಚಿಮಕ್ಕೆ ಸರಿಸುಮಾರು 95 ಕಿಮೀ ದೂರದಲ್ಲಿ 12 ನೇ ಶತಮಾನದ ಶಿವ ದೇವಾಲಯವಾದ ತಾ ಮುಯೆನ್ ಥಾಮ್ ದೇವಾಲಯವಿದೆ. ಖಮೇರ್ ಸಾಮ್ರಾಜ್ಯದ ಅಡಿಯಲ್ಲಿ ನಿರ್ಮಿಸಲಾದ ಇದು ಕಾಂಬೋಡಿಯನ್ನರಿಗೆ ಮಾತ್ರವಲ್ಲದೆ ಅವರ ಥಾಯ್ ನೆರೆಹೊರೆಯವರಿಗೂ ಪವಿತ್ರ ಧಾರ್ಮಿಕ ಸ್ಥಳವಾಗಿದೆ.

ಎರಡೂ ದೇಶಗಳಲ್ಲಿ ಬಹುಸಂಖ್ಯಾತರು ಬೌದ್ಧ ಧರ್ಮೀಯರಾದರೂ ಎರಡೂ ರಾಷ್ಟ್ರಗಳಲ್ಲಿ ಪುರಾತನ ಕಾಲದಿಂದಲೂ ಹಿಂದೂ ಧರ್ಮದ ಅಸ್ತಿತ್ವ ಇದ್ದ ಅನೇಕ ಕುರುಹುಗಳೂ ಈಗಲೂ ಉಳಿದಿವೆ.

11 ನೇ ಶತಮಾನದ ಖಮೇರ್ ಶಿವನಿಗೆ ಸಮರ್ಪಿತವಾದ ತಾ ಮುಯೆನ್ ದೇವಾಲಯಗಳ ಸಂಕೀರ್ಣದ ಬಳಿ ಕಾಂಬೋಡಿಯ ಹಾರಿಸಿದ ಡ್ರೋನ್‌ಗಳು ಅಪ್ಪಳಿಸಿದ ನಂತರ ಘರ್ಷಣೆಗಳು ಆರಂಭವಾಗಿವೆ. 1,000 ವರ್ಷಗಳಷ್ಟು ಹಳೆಯದಾದ ಪ್ರಸಾತ್ ತಾ ಮುಯೆನ್ ಥಾಮ್ ದೇವಾಲಯ ಮತ್ತು ಅದು ಹೇಗೆ ಬೌದ್ಧ ಕೇಂದ್ರವಾಗಿ ಬದಲಾಯಿತು ಎಂಬುದರ ಬಗ್ಗೆ ಕುತೂಹಲಕಾರಿ ಕಥೆಯಿದೆ.

ಮಿಲಿಟರಿ ಘರ್ಷಣೆಗಳ ವಿಚಾರದಲ್ಲಿ ಪ್ರಾಚೀನ ಗಡಿ ವಿವಾದವಿದ್ದು, ಇದು ಫ್ರೆಂಚರು ಬಿಟ್ಟುಹೋದ ವಸಾಹತುಶಾಹಿ ಪರಂಪರೆಯಾಗಿದ್ದು ಅಲ್ಲಿ 11 ನೇ ಶತಮಾನಕ್ಕೂಹಿಂದಿನ ಮೂರು ಪ್ರಾಚೀನ ಹಿಂದೂ ದೇವಾಲಯಗಳ ಸಂಕೀರ್ಣ ಪ್ರಮುಖ ವಿಚಾರವಾಗಿದೆ.

ರಾಯಭಾರಿಗಳ ಹೊರದಬ್ಬಿದ ಉಭಯ ದೇಶಗಳು

ಇನ್ನು ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿರುವಂತೆಯೇ ಎರಡೂ ರಾಷ್ಟ್ರಗಳು ಪರಸ್ಪರ ರಾಯಭಾರಿಗಳನ್ನು ಹೊರಹಾಕಿ ರಾಜತಾಂತ್ರಿಕ ಸಂಬಂಧಗಳನ್ನು ಅತ್ಯಂತ ಕೆಳಮಟ್ಟಕ್ಕೆ ಇಳಿಸಿವೆ. ಪ್ರಸ್ತುತ ಯುದ್ಧದ ಕೇಂದ್ರ ಬಿಂದು ಥೈಲ್ಯಾಂಡ್-ಕಾಂಬೋಡಿಯಾ ಗಡಿಯಲ್ಲಿರುವ ದಟ್ಟವಾದ ಕಾಡುಗಳಲ್ಲಿ ಇರುವ ಪ್ರಸಾತ್ ತಾ ಮುಯೆನ್ ಥಾಮ್ ದೇವಾಲಯದ ಬಳಿ ಇದೆ.

ಉಭಯ ದೇಶಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ದೇವಾಲಯ

ಇನ್ನು ಈ ಅಂಕೋರ್ ವಾಟ್‌ನ ದೇವಾಲಯದ ಜನಪ್ರಿಯತೆ ಜಗತ್ತಿನಾದ್ಯಂತ ಪಸರಿಸಿದೆಯಾದರೂ ಈ ದೇವಾಲಯಗಳ ಸಮೂಹವು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಎರಡು ರಾಷ್ಟ್ರಗಳ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿದೆ.

ಗುರುವಾರ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವೆ ತಮ್ಮ ಗಡಿಯಲ್ಲಿ ಮತ್ತೆ ಘರ್ಷಣೆಗಳು ಭುಗಿಲೆದ್ದವು. ಇದು ಒಂದು ದಶಕದಲ್ಲಿ ನಡೆದ ಅತ್ಯಂತ ಹಿಂಸಾತ್ಮಕ ಉಲ್ಬಣವಾಗಿದೆ. ಈ ಘರ್ಷಣೆಯಲ್ಲಿ 12 ಜನರು ಬಲಿಯಾಗಿದ್ದಾರೆ. ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಇದು ಈ ಪ್ರದೇಶದಲ್ಲಿ ಸಾಮೂಹಿಕ ಸ್ಥಳಾಂತರಿಸುವಿಕೆಗೆ ಕಾರಣವಾಗಿದೆ.

ಕಾಂಬೋಡಿಯಾದ ಒಡ್ಡರ್ ಮೀಂಚೆ ಪ್ರಾಂತ್ಯ ಮತ್ತು ಥೈಲ್ಯಾಂಡ್‌ನ ಸುರಿನ್ ಪ್ರಾಂತ್ಯದ ನಡುವಿನ ವಿವಾದಿತ ಗಡಿಯಲ್ಲಿ ದೇವಾಲಯದ ಸ್ಥಳವು ಎರಡು ರಾಷ್ಟ್ರಗಳ ನಡುವಿನ ಉದ್ವಿಗ್ನತೆಯ ಕೇಂದ್ರಬಿಂದುವಾಗಿದೆ. ಐತಿಹಾಸಿಕ ಖಮೇರ್ ಸಾಮ್ರಾಜ್ಯದ ಗಡಿಗಳ ಆಧಾರದ ಮೇಲೆ ಕಾಂಬೋಡಿಯಾ ಮಾಲೀಕತ್ವ ತನ್ನದೆಂದು ಹೇಳಿಕೊಂಡರೂ, ಥೈಲ್ಯಾಂಡ್ ಈ ಪ್ರದೇಶವು ತನ್ನ ಗಡಿಯೊಳಗೆ ಇದೆ ಎಂದು ಪ್ರತಿಪಾದಿಸುತ್ತಿದೆ.

ಥೈಲ್ಯಾಂಡ್‌ನ ಸುರಿನ್ ಪ್ರಾಂತ್ಯದ ತಾ ಮುಯೆನ್ ಥಾಮ್ ದೇವಾಲಯದ ಬಳಿ ಗುರುವಾರ ಇತ್ತೀಚಿನ ಸುತ್ತಿನ ಹೋರಾಟ ಪ್ರಾರಂಭವಾಯಿತು. ಮೂಲಗಳ ಪ್ರಕಾರ, ಕಾಂಬೋಡಿಯನ್ ಪಡೆಗಳು ಥಾಯ್ ಮಿಲಿಟರಿ ಸ್ಥಾನಗಳ ಬಳಿ ವೈಮಾನಿಕ ವಿಚಕ್ಷಣಕ್ಕಾಗಿ ಡ್ರೋನ್‌ಗಳನ್ನು ನಿಯೋಜಿಸಿದಾಗ ಘರ್ಷಣೆ ಪ್ರಾರಂಭವಾಯಿತು.

ಥಾಯ್ ಸೈನಿಕರು ದಾಳಿಯನ್ನು ಕಡಿಮೆ ಮಾಡಲು ಮಾಡಿದ ಪ್ರಯತ್ನಗಳು ವಿಫಲವಾದವು ಮತ್ತು ಸ್ಥಳೀಯ ಸಮಯ 08:20 ರ ಹೊತ್ತಿಗೆ, ಭಾರೀ ಗುಂಡಿನ ಚಕಮಕಿಗಳು ಪ್ರಾರಂಭವಾದವು.

ಆರ್‌ಪಿಜಿಗಳನ್ನು ಹೊಂದಿದ ಕಾಂಬೋಡಿಯನ್ ಸೇನಾಪಡೆಗಳು ಪ್ರಚೋದನಾ ದಾಳಿ ನಡೆಸಿದ ನಂತರ ತನ್ನ ಪಡೆಗಳು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದವು ಎಂದು ಥೈಲ್ಯಾಂಡ್ ಹೇಳಿಕೊಂಡಿದೆ. ಮತ್ತೊಂದೆಡೆ, ಕಾಂಬೋಡಿಯಾ ಥೈಲ್ಯಾಂಡ್ ತನ್ನ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.

ಅಂತೆಯೇ ಥೈಲ್ಯಾಂಡ್ ಬೆದರಿಕೆ ಮಟ್ಟವನ್ನು "ಲೆವೆಲ್ 4" ಗೆ ಹೆಚ್ಚಿಸಿದೆ, ಇದು ಹಂಚಿಕೆಯ ಗಡಿಯುದ್ದಕ್ಕೂ ಎಲ್ಲಾ ಗಡಿ ಚೆಕ್‌ಪೋಸ್ಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಲು ಕಾರಣವಾಯಿತು. 86 ಹಳ್ಳಿಗಳಿಂದ ಸುಮಾರು 40,000 ಥಾಯ್ ನಾಗರಿಕರನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Live: Bihar Election Results 2025: ನಿತೀಶ್ ಕುಮಾರ್ ನೇತೃತ್ವದ JD(U) ಪುನರಾಗಮನ ನಿರೀಕ್ಷೆ, NDAಗೆ ಆರಂಭಿಕ ಮುನ್ನಡೆ

Bihar trends- ಬಿಹಾರ ಮತ ಎಣಿಕೆ ಪ್ರಗತಿಯಲ್ಲಿ, ಆರಂಭಿಕ ಟ್ರೆಂಡ್ ನಲ್ಲಿ NDA ಮುನ್ನಡೆ, ಮಹಾಘಟಬಂಧನ್ ಹಿನ್ನಡೆ

Bihar Election Results 2025: ಮತ ಎಣಿಕೆ ಆರಂಭ, ಸತತ 5ನೇ ಬಾರಿ ಗೆಲುವಿನ ಉತ್ಸಾಹದಲ್ಲಿ ನಿತೀಶ್ ಕುಮಾರ್, ಬದಲಾವಣೆ ನಿರೀಕ್ಷೆಯಲ್ಲಿ ತೇಜಸ್ವಿ ಯಾದವ್

Bihar Election Results 2025: ಇಂದು ಬಿಹಾರ ಚುನಾವಣೆ ಮತ ಎಣಿಕೆ, ಕೆಲವೇ ಹೊತ್ತಿನಲ್ಲಿ ಭವಿಷ್ಯ ನಿರ್ಧಾರ; ಗೆಲುವಿನ 'ಹಾರ' ಯಾರ ಪಾಲು?

'ನಮಗೆ ಆತುರವಿಲ್ಲ, ಪಕ್ಷ ಕಟ್ಟಲು ರಕ್ತ -ಬೆವರು ಸುರಿಸಿದ್ದೇವೆ: ಅಧಿಕಾರಕ್ಕಾಗಿ ಇನ್ನೂ 5 ವರ್ಷ ಕಾಯುತ್ತೇವೆ; ಸಮ್ಮಿಶ್ರ ಸರ್ಕಾರ ಸೇರುವ ಪ್ರಶ್ನೆಯೇ ಇಲ್ಲ'

SCROLL FOR NEXT