ಜಾಕಿ ಜಾನ್ 
ವಿದೇಶ

'Karate Kid: Legends': 64 ವರ್ಷಗಳಿಂದ ಮಾರ್ಷಲ್ ಆರ್ಟ್ಸ್ ಅಭ್ಯಾಸ- ಆಕ್ಷನ್ ಲೆಜೆಂಡ್ ಜಾಕಿ ಜಾನ್!

ದಿ ಕರಾಟೆ ಕಿಡ್‌ನ 2010 ಚಿತ್ರದ ಪಾತ್ರದಂತೆ ಈ ಚಿತ್ರದಲ್ಲೂ ಅವರು ನಟಿಸಿದ್ದಾರೆ.

ಲಾಸ್ ಏಂಜಲೀಸ್: ಆಕ್ಷನ್ ಲೆಜೆಂಡ್ ಜಾಕಿ ಚಾನ್ ಅವರ ಕರಾಟೆ ಕಿಡ್: ಲೆಜೆಂಡ್ಸ್ ಮೇ 30 ರಿಂದ ಭಾರತ ಸೇರಿದಂತೆ ವಿಶ್ವದಾದ್ಯಂತ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಜೋನಾಥನ್ ಎಂಟ್ವಿಸ್ಟಲ್ ನಿರ್ದೇಶನದ ಚಿತ್ರದಲ್ಲಿ ರಾಲ್ಫ್ ಮ್ಯಾಕಿಯೊ ಮತ್ತು ಬೆನ್ ವಾಂಗ್ ಜೊತೆಗೆ ಜಾಕಿ ಚಾನ್ ನಟಿಸಿದ್ದಾರೆ.

ದಿ ಕರಾಟೆ ಕಿಡ್‌ನ 2010 ಚಿತ್ರದ ಪಾತ್ರದಂತೆ ಈ ಚಿತ್ರದಲ್ಲೂ ಅವರು ನಟಿಸಿದ್ದಾರೆ. ತಮ್ಮ ಹೊಸ ಚಿತ್ರದ ಕುರಿತು ಲಾಸ್ ಏಂಜಲೀಸ್ ನಲ್ಲಿ ಮಾತನಾಡಿದ ಜಾಕಿಜಾನ್, 64 ವರ್ಷಗಳಿಂದ ಮಾರ್ಷಲ್ ಆರ್ಟ್ಸ್ ಅಭ್ಯಾಸ ಮಾಡುತ್ತಿದ್ದು, ಯಾವುದೇ ತರಬೇತಿಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ವೃತ್ತಿಜೀವನದುದ್ದಕ್ಕೂ ತನ್ನದೇ ಆದ ಸಾಹಸ ಪ್ರದರ್ಶಿಸುವಲ್ಲಿ ಹೆಸರುವಾಸಿಯಾದ ಜಾಕಿಜಾನ್, ಪೈಟಿಂಗ್ ನನ್ನ ಎರಡನೇ ಸ್ವಭಾವವಾಗಿದೆ. 64 ವರ್ಷಗಳಿಂದ ಪ್ರತಿದಿನ ತರಬೇತಿ ನೀಡುತ್ತಿದ್ದು, ಇನ್ನು ಮುಂದೆ ಅದರ ಅಗತ್ಯವಿಲ್ಲ. ಆದರೂ ಈಗಲೂ ನಾನು ನಾನು ಪೈಟ್ ಮಾಡುತ್ತೇದ್ದೇನೆ ಎಂದು 71 ವರ್ಷ ವರ್ಷದ ನಟ ಎಂಟರ್ಟೈನ್ಮೆಂಟ್ ಔಟ್ಲೆಟ್ ವೆರೈಟಿಗೆ ತಿಳಿಸಿದರು.

ಯೌವ್ವನದಲ್ಲಿದ್ದಾಗೆ ದೈಹಿಕ ಆಕಾರದಲ್ಲಿ ಇಲ್ಲದಿದ್ದರೂ, ಇನ್ನೂ ತನ್ನದೇ ಆದ ಸಾಹಸಗಳನ್ನು ಮಾಡುತ್ತಿರುವುದಾಗಿ ಅವರು ಒಪ್ಪಿಕೊಂಡರು. "ನಾನು 20 ವರ್ಷದವನಿದ್ದಾಗ ಮಾಡುತ್ತಿದ್ದ ಹಾಗೆ ಈಗ ಮಾಡಲು ಸಾಧ್ಯವಿಲ್ಲ. ಈಗಲೂ ಕೂಡಾ ನಾನು ಹೊಡೆಯಬಹುದು ಎಂದು ನಗುತ್ತಾ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

60 ದಿನಗಳ ಕದನ ವಿರಾಮ ವಿಸ್ತರಣೆಗೆ ಅಮೆರಿಕ, ಇರಾನ್ ಸಂಧಾನಕಾರರು ಒಪ್ಪಿಗೆ; ಟ್ರಂಪ್ ಅನುಮೋದನೆ ಬಾಕಿ

ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!

Karnataka CM News LIVE Updates | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ; ಸಿಎಲ್‌ಪಿ ಸಭೆ ಶನಿವಾರ ಸಾಧ್ಯತೆ!

SCROLL FOR NEXT