ಸೆಂಟ್ರಲ್ ಬೆನ್ಯೂ: ನೈಜೀರಿಯಾದ ಸೆಂಟ್ರಲ್ ಬೆನ್ಯೂ ರಾಜ್ಯದ ಯೆಲೆವಾಟಾ ಗ್ರಾಮದ ಮೇಲೆ ಬಂದೂಕುಧಾರಿಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 100 ಜನರ ಹತ್ಯೆಯಾಗಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ನೈಜೀರಿಯಾ ಶನಿವಾರ ವರದಿ ಮಾಡಿದೆ.
ಶುಕ್ರವಾರ ತಡರಾತ್ರಿಯಿಂದ ಶನಿವಾರದ ಮುಂಜಾನೆಯವರೆಗೆ ದಾಳಿ ನಡೆದಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಫೋಸ್ಟ್ ಮಾಡಿದೆ.
ಅನೇಕ ಜನರು ಇನ್ನೂ ಕಾಣೆಯಾಗಿದ್ದಾರೆ. ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಸಾಕಷ್ಟು ಮಂದಿಗೆ ಚಿಕಿತ್ಸೆ ಸಿಗುತ್ತಿಲ್ಲ. ಅನೇಕ ಕುಟುಂಬಗಳನ್ನು ಅವರ ಮಲಗುವ ಕೊಠಡಿಗಳಲ್ಲಿ ಲಾಕ್ ಮಾಡಿ, ಸುಟ್ಟುಹಾಕಲಾಗಿದೆ ಎಂದು ಹೇಳಲಾಗಿದೆ.
ಬೆನ್ಯೂ ರಾಜ್ಯದಾದ್ಯಂತ ನಡೆದ ಆತಂಕಕಾರಿ ದಾಳಿಗಳನ್ನು "ಆಮ್ನೆಸ್ಟಿ ಇಂಟರ್‌ನ್ಯಾಷನಲ್ ದಾಖಲಿಸುತ್ತಿದೆ. ಅಲ್ಲಿ ಬಂದೂಕುಧಾರಿಗಳು ಸಂಪೂರ್ಣ ನಿರ್ಭಯದಿಂದ ಹತ್ಯೆಗೈಯುತ್ತಿದ್ದಾರೆ. ಈ ದಾಳಿಯಿಂದ ಅನೇಕ ಜನರು ಬೇರೆಡೆಗೆ ಸ್ಥಳಾಂತರವಾಗುತ್ತಿದ್ದಾರೆ. ಮೃತರಲ್ಲಿ ಹೆಚ್ಚಿನವರು ರೈತರಾಗಿರುವುದರಿಂದ ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರಬಹುದು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಹೇಳಿದೆ.