ದುಬೈನ ಗಗನಚುಂಬಿ ಕಟ್ಟಡದಲ್ಲಿ ಭೀಕರ ಅಗ್ಮಿ ಅವಘಡ 
ವಿದೇಶ

67 ಅಂತಸ್ತಿನ ಕಟ್ಟಡದಲ್ಲಿ ಭೀಕರ ಅಗ್ನಿಅವಘಡ, 4 ಸಾವಿರ ಮಂದಿ ಸ್ಥಳಾಂತರ; ಮೈ ಜುಮ್ಮೆನಿಸುವ Video

ದುಬೈನ ಮರೀನಾದಲ್ಲಿರುವ 67 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಶುಕ್ರವಾರ ತಡರಾತ್ರಿ ಮರಿನಾದ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ದುಬೈ: ಬರೊಬ್ಬರಿ 67 ಅಂತಸ್ತಿನ ಗಗನಚುಂಬಿ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಕಟ್ಟಡದಲ್ಲಿದ್ದ ಸುಮಾರು 4 ಸಾವಿರ ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಸ್ಖಳಾಂತರಗೊಳಿಸಲಾಗಿದೆ.

ದುಬೈನ ಮರೀನಾದಲ್ಲಿರುವ 67 ಅಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಶುಕ್ರವಾರ ತಡರಾತ್ರಿ ಮರಿನಾದ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ಟೈಗರ್ ಟವರ್ ಎಂದು ಕರೆಯಲ್ಪಡುವ ಮರೀನಾ ಪಿನಾಕಲ್‌ ಕಟ್ಟಡದಲ್ಲಿ ಮೇ 2015 ರಲ್ಲಿ ಸಹ ಅಗ್ನಿ ಅವಘಡ ಸಂಭವಿಸಿತ್ತು. ಆಗ 47 ನೇ ಮಹಡಿಯಲ್ಲಿ ಬೆಂಕಿ ತಗುಲಿ 48 ನೇ ಮಹಡಿಗೂ ವ್ಯಾಪಿಸಿತ್ತು. ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಅಗ್ಮಿಶಾಮಕ ಸಿಬ್ಬಂದಿ ಈ ಕಟ್ಟಡದಲ್ಲಿದ್ದ ಸುಮಾರು 4,000 ಜನರನ್ನು ಯಾವುದೇ ತೊಂದರೆಯಾಗದಂತೆ ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ.

ಕಟ್ಟಡದ 35ನೇ ಮಹಡಿಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿ ಕೆನ್ನಾಲಿಗೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಇಡೀ ಕಟ್ಟಡ ಒಣಗಿದ ಮರದಂತೆ ಹೊತ್ತಿ ಉರಿದಿದೆ. ಇದರಿಂದ ಇಡೀ ನಗರಾದ್ಯಂತ ಹೊಗೆ ಆವರಿಸಿತ್ತು. ಇಂತಹ ಅಗ್ನಿ ದುರಂತವನ್ನು ರಕ್ಷಣಾ ತಂಡಗಳು ಜಾಗರೂಕತೆಯಿಂದ ನಿಭಾಯಿಸಿವೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

6 ಗಂಟೆಗಳ ಕಾಲ ಕಾರ್ಯಾಚರಣೆ

ಇನ್ನು ಅಗ್ನಿಶಾಮಕ ದಳ ಬರೊಬ್ಬರಿ 6 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿವೆ. ಅವಘಡದಿಂದ ಸಮಸ್ಯೆಗೊಳಗಾದವರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲು ಅಧಿಕಾರಿಗಳು ಸಭೆ ನಡೆಸಿದ್ದಾರೆ.

ಬದುಕಿದ್ದೇ ಅದೃಷ್ಟ

ಇನ್ನು ಅಗ್ನಿ ದುರಂತದ ಕುರಿತು ಕರಾಳ ಅನುಭವ ಬಿಚ್ಚಿಟ್ಟ ಸ್ಥಳೀಯ ನಿವಾಸಿ ತಾವು ಬದುಕಿದ್ದೇ ಅದೃಷ್ಟ ಎಂದು ಹೇಳಿದ್ದಾರೆ. 'ಅಗ್ನಿ ಅವಘಡ ಸಂದರ್ಭದಲ್ಲಿ ನಾನು ಕಟ್ಟಡದಲ್ಲಿದ್ದೆ ಮತ್ತು ನನ್ನ ಹೆಂಡತಿ ನಮ್ಮ ಅಪಾರ್ಟ್ಮೆಂಟ್ನಲ್ಲಿ ಶಾಂತಿಯುತವಾಗಿ ಮಲಗಿದ್ದೆವು. ಈ ವೇಳೆ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ನಾವು ಸಮಯಕ್ಕೆ ಸರಿಯಾಗಿ ಹೊರಬಂದೆವು ಎಂದು ನಿಶಿತ್ ಶರ್ಮಾ ಹೇಳಿದ್ದಾರೆ.

ಈ 67 ಅಂತಸ್ತಿನ ಸ್ಕ್ರೈ ಸ್ಕ್ರೇಪರ್ ಕಟ್ಟಡದಲ್ಲಿ ಸುಮಾರು 764 ಅಪಾರ್ಟ್‌ಮೆಂಟ್‌ಗಳಿದ್ದು, ಇಲ್ಲಿ ಸುಮಾರು 3,820 ನಿವಾಸಿಗಳು ವಾಸಿಸುತ್ತಿದ್ದರು. ಇದೀಗ ಎಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT