ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರನ್ (Emmanuel Macron)ರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಹಾಸ್ಯ ಚಟಾಕಿಯಿಂದ ಅವರ ಕಾಲೆಳೆದಿದ್ದಾರೆ. ಈ ವೇಳೆ ಉಭಯ ನಾಯಕರು ಬಿದ್ದು ಬಿದ್ದು ನಕ್ಕ ಘಟನೆ ನಡೆದಿದೆ.
ಹೌದು.. ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ವಿಶೇಷ ಆಹ್ವಾನದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದು, ಈ ವೇಳೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾದರು. ಇಬ್ಬರೂ ನಾಯಕರು ಪರಸ್ಪರ ಆಲಂಗಿಸಿಕೊಂಡು ಹೃತ್ಪೂರ್ವಕ ನಗೆ ಬೀರಿದರು.
Macron ಕಾಲೆಳೆದ ಪ್ರಧಾನಿ ಮೋದಿ
ಇದೇ ವೇಳೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರ ಕುರಿತು ಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ಉಭಯ ನಾಯಕರು ನಗಾಡಿದ್ದು ವಿಶೇಷವಾಗಿತ್ತು. ಮ್ಯಾಕ್ರನ್ ಉದ್ದೇಶಿಸಿ ಮಾತಾನಿಡದ ಮೋದಿ, 'ಇತ್ತೀಚಿನ ದಿನಗಳಲ್ಲಿ ನೀವೂ ಕೂಡ ಎಕ್ಸ್ ನಲ್ಲಿ ಸಕ್ರಿಯರಾಗಿದ್ದೀರಾ ಎಂದು ಹೇಳಿದ್ದು, ಇದನ್ನು ಕೇಳಿದ ಮ್ಯಾಕ್ರನ್ ಕೂಡ ನಗಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡುತ್ತಲೇ ಅವರ ಬಳಿಗೆ ಆಗಮಿಸಿದ ಮ್ಯಾಕ್ರನ್, ನೀವು ಯಾವಾಗ ಬಂದಿರಿ ಎಂದು ಕೇಳಿದ್ದು ಇದಕ್ಕೆ ಉತ್ತರಿಸಿದ ಮೋದಿ, ನಾನು ನಿನ್ನೆ ರಾತ್ರಿ ಇಲ್ಲಿಗೆ ತಲುಪಿದೆ, ಮತ್ತು ಅದಕ್ಕೂ ಮೊದಲು, ನಾನು ಸೈಪ್ರಸ್‌ಗೆ ಹೋಗಿದ್ದೆ ಎಂದು ಹೇಳಿದರು.
"ನನ್ನ ಸ್ನೇಹಿತ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಸಂವಹನ ನಡೆಸುವುದು ಮತ್ತು ವಿವಿಧ ವಿಷಯಗಳ ಕುರಿತು ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳುವುದು ಯಾವಾಗಲೂ ಸಂತೋಷಕರವಾಗಿರುತ್ತದೆ. ಭಾರತ ಮತ್ತು ಫ್ರಾನ್ಸ್ ನಮ್ಮ ಪ್ರದೇಶದ ಸುಧಾರಣೆಗಾಗಿ ನಿಕಟವಾಗಿ ಕೆಲಸ ಮಾಡುತ್ತಲೇ ಇರುತ್ತವೆ" ಎಂದು ಅವರು X ನಲ್ಲಿ ಬರೆದಿದ್ದಾರೆ.
ಮ್ಕಾಕ್ರನ್ ಮೂತಿಗೆ ತಿವಿದಿದ್ದ ಪತ್ನಿ
ಈ ಹಿಂದೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ವಿಮಾನದಿಂದ ಇಳಿಯುವಾಗ ತಮ್ಮ ಪತ್ನಿ ಜೊತೆ ಸಣ್ಣ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಅವರ ಪತ್ನಿ ಬ್ರಿಜೆಟ್ ಮ್ಯಾಕ್ರನ್ ಅವರ ಮೂತಿಗೆ ತಿವಿದಿದ್ದರು. ಈ ವಿಚಾರ ವ್ಯಾಪಕ ವೈರಲ್ ಆಗಿತ್ತು. ಈ ವಿಚಾರವಾಗಿ ಎಕ್ಸ್ ನಲ್ಲಿ ಮ್ಯಾಕ್ರನ್ ಟ್ವೀಟ್ ಮಾಡಿ ಸ್ಪಷ್ಟನೆ ಕೂಡ ಕೊಟ್ಟಿದ್ದರು.
ಇನ್ನು ಹಾಲಿ ಜಿ7 ಕಾರ್ಯಕ್ರಮದಲ್ಲಿ ಮ್ಯಾಕ್ರನ್ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಕೈಕುಲುಕಿದರು ಮತ್ತು ಪ್ರಧಾನಿ ಮೋದಿ ಅವರೊಂದಿಗೆ ಕುಳಿತುಕೊಳ್ಳುವ ಮೊದಲು ಶುಭಾಶಯ ವಿನಿಮಯ ಮಾಡಿಕೊಂಡರು.
ಅಂದಹಾಗೆ ಪ್ರಧಾನಿ ಮೋದಿ ವಾರ್ಷಿಕ G7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾಗೆ ಹೋಗಿದ್ದಾರೆ. ಅಲ್ಲಿ ಅವರು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರನ್ನು ಭೇಟಿ ಮಾಡಿದ್ದು, ದಕ್ಷಿಣ ಆಫ್ರಿಕಾದ ಅಧ್ಯಕ್ಷ ರಾಮಫೋಸಾ ಮತ್ತು ಬ್ರೆಜಿಲ್ ಅಧ್ಯಕ್ಷ ಲುಲಾ, EU ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಸೇರಿದಂತೆ ಹಲವಾರು ನಾಯಕರನ್ನು ಭೇಟಿಯಾದರು.