ಡೊನಾಲ್ಡ್ ಟ್ರಂಪ್- ಆಸೀಮ್ ಮುನೀರ್ online desk
ವಿದೇಶ

ಕಾಶ್ಮೀರ ವಿಷಯ ಕುರಿತು ಪಾಕ್ ಸೇನಾ ಮುಖ್ಯಸ್ಥ Asim Munir ಜೊತೆ ಅಮೆರಿಕಾ ಅಧ್ಯಕ್ಷ Donald Trump ಚರ್ಚೆ: ಭಾರತಕ್ಕೆ ಪರೋಕ್ಷ ಬೆದರಿಕೆ!

ಟ್ರಂಪ್ ಈ ವಾರ ಶ್ವೇತಭವನದಲ್ಲಿ ಪಾಕಿಸ್ತಾನಿ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಭೇಟಿಯಾಗಲಿದ್ದಾರೆ.

ವಾಷಿಂಗ್ ಟನ್: ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ನನ್ನು ಅಮೆರಿಕಾದ ಸೇನಾ ದಿನಾಚರಣೆಗೆ ಆಹ್ವಾನಿಸಿದ್ದ ಅಮೆರಿಕ ಈಗ ಆತನೊಂದಿಗೆ ಕಾಶ್ಮೀರದ ಬಗ್ಗೆ ಚರ್ಚೆ ನಡೆಸಲು ಮುಂದಾಗಿದೆ.

ಶ್ವೇತಭವನ ಈ ಮಾಹಿತಿಯನ್ನು ಖಚಿತಪಡಿಸಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟನ್ನು ಕೊನೆಗೊಳಿಸಲು ಅಮೆರಿಕ ಪ್ರಯತ್ನಿಸುತ್ತಿರುವಾಗ ಈ ಸಭೆ ನಡೆದಿದೆ.

ದಕ್ಷಿಣ ಏಷ್ಯಾ ವಿಶ್ಲೇಷಕ ಮೈಕೆಲ್ ಕುಗೆಲ್‌ಮನ್ ಅವರು X ಪೋಸ್ಟ್‌ನಲ್ಲಿ ಸಭೆಯ ಮಹತ್ವವನ್ನು ವಿವರಿಸಿದ್ದಾರೆ. "ಅಮೆರಿಕದ ಹಿರಿಯ ಅಧಿಕಾರಿಗಳು ಹೆಚ್ಚಾಗಿ ಪಾಕಿಸ್ತಾನಿ ಸೇನಾ ಮುಖ್ಯಸ್ಥರೊಂದಿಗೆ ವ್ಯವಹರಿಸುತ್ತಾರೆ, ಆದರೆ ಅಪರೂಪಕ್ಕೆ ಮಾತ್ರ ಅಮೆರಿಕ ಅಧ್ಯಕ್ಷರು ಶ್ವೇತಭವನದಲ್ಲಿ ಮುನೀರ್ ಜೊತೆ ಮಾತುಕತೆ ನಡೆಸಲಿದ್ದಾರೆ. ಟ್ರಂಪ್ ಅವರೊಂದಿಗಿನ ಮುನೀರ್ ಅವರ ನಿಗದಿತ ಸಭೆಯು ತುಂಬಾ ಮಹತ್ವದ್ದಾಗಿರಲು ಹಲವು ಕಾರಣಗಳಲ್ಲಿ ಒಂದಾಗಿದೆ, ವಿಶೇಷವಾಗಿ ಅಮೆರಿಕಾ ಆಡಳಿತ ಇರಾನ್‌ನಲ್ಲಿನ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕಾ ಆಯ್ಕೆಗಳನ್ನು ಪರಿಗಣಿಸುವುದರಿಂದ ಈ ಭೇಟಿ ಮಹತ್ವ ಪಡೆದುಕೊಂಡಿದೆ" ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

"ನಿಗದಿತ ಟ್ರಂಪ್-ಮುನೀರ್ ಸಭೆಯನ್ನು ಇಸ್ರೇಲ್-ಇರಾನ್ ಯುದ್ಧದ ದೃಷ್ಟಿಯಿಂದ ಮಾತ್ರವೇ ನೋಡಬಾರದು. ನಿರ್ಣಾಯಕ ಖನಿಜಗಳು, ಕ್ರಿಪ್ಟೋ ಮತ್ತು ಭಯೋತ್ಪಾದನಾ ನಿಗ್ರಹದ ಬಗ್ಗೆ ಯುಎಸ್-ಪಾಕ್ ಸಂಬಂಧಗಳಿವೆ. ಟ್ರಂಪ್ ಈ ಎಲ್ಲದರಲ್ಲೂ ಆಳವಾದ ವೈಯಕ್ತಿಕ ಆಸಕ್ತಿಯನ್ನು ಹೊಂದಿದ್ದಾರೆ. ಮತ್ತು ಮುನೀರ್ ಎಲ್ಲದರ ಬಗ್ಗೆ ಮಾತನಾಡಲು ಅಧಿಕಾರ ಹೊಂದಿದ್ದಾರೆ. ಅಲ್ಲದೆ, ಕಾಶ್ಮೀರದ ಬಗ್ಗೆಯೂ ಮಾತನಾಡಲಿದ್ದಾರೆ," ಎಂದು ಅವರು ಹೇಳಿದರು.

ಟ್ರಂಪ್ ಈ ವಾರ ಶ್ವೇತಭವನದಲ್ಲಿ ಪಾಕಿಸ್ತಾನಿ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಭೇಟಿಯಾಗಲಿದ್ದಾರೆ, ಅವರನ್ನು ನವದೆಹಲಿ ಭಾರತೀಯರ ಮೇಲಿನ ದಾಳಿಯ ಹಿಂದಿನ ಭಯೋತ್ಪಾದಕ ಮಾಸ್ಟರ್ ಮೈಂಡ್ ಎಂದು ನಂಬುತ್ತದೆ" ಇದು "ಭಾರತ, ಮಾತನಾಡಬೇಕಾದ ಸಮಯ! ಎಂದು ರಾಷ್ಟ್ರೀಯ ಭದ್ರತೆ ಮತ್ತು ಇಂಡೋ-ಪೆಸಿಫಿಕ್ ವಿಶ್ಲೇಷಕ ಡೆರೆಕ್ ಜೆ. ಗ್ರಾಸ್‌ಮನ್ ಹೇಳಿದ್ದಾರೆ.

2001 ರಲ್ಲಿ ಅಮೆರಿಕದ ಹಾಲಿ ಅಧ್ಯಕ್ಷರನ್ನು ಭೇಟಿಯಾದ ಕೊನೆಯ ಪಾಕಿಸ್ತಾನಿ ಮಿಲಿಟರಿ ನಾಯಕ ಜನರಲ್ ಪರ್ವೇಜ್ ಮುಷರಫ್ ಆಗಿದ್ದು, ಅವರು ಮಿಲಿಟರಿ ಸರ್ವಾಧಿಕಾರಿಯಾಗಿದ್ದಾಗ ರಾಷ್ಟ್ರದ ಮುಖ್ಯಸ್ಥರಾಗಿ ಅಮೆರಿಕ ಅಧ್ಯಕ್ಷರನ್ನು ಭೇಟಿ ಮಾಡಿದ್ದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ನಾನೇ ಕದನ ವಿರಾಮ ಒಪ್ಪಂದ ಮಾಡಿಸಿದ್ದು ಎಂದ ವಿಶ್ವದ ಮುಂದೆ ಬಡಾಯಿ ಕೊಚ್ಚುತ್ತಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಪ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಾಸ್ತವತೆಯ ಪರಿಚಯ ಮಾಡಿಸಿ ಪಾಕ್ ಮಂಡಿಯೂರಿದ್ದಕ್ಕೆ ಕದನ ವಿರಾಮಕ್ಕೆ ಒಪ್ಪಿದ್ದೇವೆ, ನಿಮ್ಮ ಮಧ್ಯಸ್ಥಿಕೆಯಿಂದಲ್ಲ ಎಂದು ಹೇಳಿದ್ದರು. ಈ ಬೆನ್ನಲ್ಲೇ ಪಾಕಿಸ್ತಾನವನ್ನು ಹತ್ತಿರ ಮಾಡಿಕೊಳ್ಳುವ ಮೂಲಕ ಅಮೆರಿಕ ಭಾರತಕ್ಕೆ ಬೆದರಿಕೆ ಹಾಕಲು ಯತ್ನಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT