ಇರಾನ್ ಮೇಲೆ ಇಸ್ರೇಲ್ ದಾಳಿ online desk
ವಿದೇಶ

Ceasefire ಘೋಷಣೆ ಬೆನ್ನಲ್ಲೇ ಕದನ ವಿರಾಮ ಉಲ್ಲಂಘನೆ ಆರೋಪ; ಇರಾನ್ ಹೇಳಿದ್ದೇನು?

ಕದನ ವಿರಾಮ ಪ್ರಾರಂಭವಾದ ಕೆಲವು ಗಂಟೆಗಳ ನಂತರ ಇರಾನ್‌ನಿಂದ ಕ್ಷಿಪಣಿ ದಾಳಿಗಳು ನಡೆದಿವೆ ಎಂದು ಇಸ್ರೇಲ್ ಹೇಳಿದೆ.

ತೆಹ್ರಾನ್: ಇಸ್ರೇಲ್- ಅಮೆರಿಕಾದೊಂದಿಗೆ ಕದನ ವಿರಾಮ ಘೋಷನೆಯಾದ ನಂತರವೂ ಇರಾನ್ ವಿರುದ್ಧ ಕದನ ವಿರಾಮ ಉಲ್ಲಂಘನೆ ಆರೋಪ ಕೇಳಿಬಂದಿದೆ.

ಇರಾನ್‌ನ ಕದನ ವಿರಾಮ ಉಲ್ಲಂಘನೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇಸ್ರೇಲ್ ಭರವಸೆ ನೀಡುತ್ತಿದ್ದಂತೆ, ಇರಾನ್ ಸೇನೆ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿರುವುದನ್ನು ನಿರಾಕರಿಸಿದೆ.

ISNA ಸುದ್ದಿ ಸಂಸ್ಥೆ ಟೆಲಿಗ್ರಾಮ್‌ನಲ್ಲಿ ಈ ಬಗ್ಗೆ ವರದಿ ಮಾಡಿದ್ದು, "ಜಿಯೋನಿಸ್ಟ್ ಆಡಳಿತದ ಮೇಲೆ ಕದನ ವಿರಾಮ ಹೇರಿದ ನಂತರ ಇರಾನ್ ಆಕ್ರಮಿತ ಪ್ರದೇಶಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ ಎಂಬ ಸುದ್ದಿಯನ್ನು ನಿರಾಕರಿಸಲಾಗಿದೆ." ಎಂದು ಹೇಳಿದೆ.

ಕದನ ವಿರಾಮ ಪ್ರಾರಂಭವಾದ ಕೆಲವು ಗಂಟೆಗಳ ನಂತರ ಇರಾನ್‌ನಿಂದ ಕ್ಷಿಪಣಿ ದಾಳಿಗಳು ನಡೆದಿವೆ ಎಂದು ಇಸ್ರೇಲ್ ಹೇಳಿದೆ. ಈಗ, ಇಸ್ರೇಲ್ ಪ್ರತಿಕ್ರಿಯೆಯಾಗಿ ಇರಾನ್ ಮೇಲೆ ದಾಳಿ ಮಾಡಲು ಆದೇಶಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್