ನವೆಹಲಿ: ಎಲಾನ್ ಮಸ್ಕ್ ಹಾಗೂ ಶಿವೊನ್ ಝಿಲಿಸ್ ಗೆ 4 ನೇ ಮಗು ಜನಿಸಿದೆ. ಮಸ್ಕ್- ಶಿವೊನ್ ಝಿಲಿಸ್ ಗೆ ಈಗಾಗಲೇ ಅವಳಿ ಮಕ್ಕಳಿದ್ದು ಓರ್ವ ಪುತ್ರಿ ಇದ್ದಾಳೆ. ನವಜಾತ ಶಿಶು ಗಂಡು ಮಗುವಾಗಿದ್ದು, ಮಗುವಿನ ಆಗಮನದ ಸುದ್ದಿಯನ್ನು ಶಿವೊನ್ ಝಿಲಿಸ್ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.
ಮಗುವಿಗೆ ಶೆಲ್ಡನ್ ಲೈಕರ್ಗಸ್ ಎಂದು ನಾಮಕರಣ ಮಾಡಲಾಗಿದೆ. ಪುತ್ರಿ ಅರ್ಕಾಡಿಯಾ ಅವರ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮಾಚರಣೆಯ ವೇಳೆಯಲ್ಲಿ ಮತ್ತೊಂದು ಮಗುವನ್ನು ಮಸ್ಕ್- ಝಿಲಿಸ್ ಜೋಡಿ ಸ್ವಾಗತಿಸಿದೆ.
ಶಿವೊನ್ ಝಿಲಿಸ್ ನಡಾದಲ್ಲಿ ಹುಟ್ಟಿದ್ದರೂ ಆಕೆಯ ಮಕ್ಕಳಿಗೆ ಪಂಜಾಬ್ ನಂಟು ಇದೆ.
2015 ರಲ್ಲಿ ಪೀಪಲ್ ನಿಯತಕಾಲಿಕೆಗೆ ಸಂದರ್ಶನ ನೀಡಿದ್ದ ಝಿಲೀಸ್ ನನ್ನ ಕಣ್ಣು ಪಂಜಾಬ್ ರಾಜ್ಯದಲ್ಲಿನವರಿಗೆ ಹೋಲಿಕೆಯಾಗುತ್ತದೆ ಎಂದು ಹೇಳಿದ್ದರು.
ವಿಶೇಷವೆಂದರೆ ಶಿವೊನ್ ಝಿಲಿಸ್- ಎಲಾನ್ ಮಸ್ಕ್ ನ ನಾಲ್ಕೂ ಮಕ್ಕಳಿಗೆ ಪಂಜಾಬ್ ನಂಟು ಇದೆ.
ಶಿವೊನ್ ಝಿಲಿಸ್ ಕೆನಡಾದ ಒಂಟಾರಿಯೋದಲ್ಲಿ ಹುಟ್ಟಿದ್ದರೂ, ಆಕೆಗೂ ಪಂಜಾಬ್ ಗೂ ಅವಿನಾಭಾವ ಸಂಬಂಧ ಇದೆ. ಶಿವೊನ್ ಝಿಲಿಸ್ ತಂದೆ ಕೆನಡಾದವರಾಗಿದ್ದರೂ ಆಕೆಯ ತಾಯಿ ಪಂಜಾಬಿ ಹೀಗಾಗಿ ಆಕೆ ಪಂಜಾಬ್ ಮೂಲವನ್ನು ಹೊಂದಿದ್ದಾರೆ.