ಖೈಬರ್ ಪಖ್ತುಂಖ್ವಾ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿರುವ ಬನ್ನು ಸೇನಾ ನೆಲೆಯ ಬಳಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, 30 ಮಂದಿ ಗಾಯಗೊಂಡಿದ್ದಾರೆ.
ಮಂಗಳವಾರ ಎರಡು ಸ್ಫೋಟಕ ತುಂಬಿದ ವಾಹನಗಳು ಬನ್ನು ಕಂಟೋನ್ಮೆಂಟ್ ಪ್ರದೇಶದ ಗಡಿ ಗೋಡೆಗೆ ನುಗ್ಗಿದ್ದರಿಂದ ಒಂಬತ್ತು ಮಂದಿ ಸಾವನ್ನಪ್ಪಿದ್ದರು. ಅಲ್ಲಿದ್ದ ಸೇನಾ ಸಿಬ್ಬಂದಿ ಆರು ಉಗ್ರರನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ.
ಟಿಟಿಪಿಯ (ತೆಹ್ರೀಕ್-ಎ-ತಾಲಿಬಾನ್) ಜೈಶುಲ್ ಫರ್ಸಾನ್ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿಕೊಂಡಿದೆ. ಆತ್ಮಹತ್ಯಾ ಬಾಂಬರ್‌ಗಳು ನಿನ್ನೆ ಸಂಜೆ ಸೂರ್ಯಾಸ್ತದ ಸಮಯದಲ್ಲಿ ಬನ್ನು ಕಂಟೋನ್ಮೆಂಟ್‌ನ ಗೋಡೆಗೆ ಸ್ಫೋಟಕ ತುಂಬಿದ್ದ ವಾಹನಗಳನ್ನು ನುಗ್ಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೇಶಾವರದ ನೈಋತ್ಯಕ್ಕೆ 200 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ ಎಂದು ಪಿಟಿಐ ವರದಿ ತಿಳಿಸಿದೆ. ಜೈಶ್ ಅಲ್ ಫುರ್ಸಾನ್ ಉಗ್ರರು ಈ ದಾಳಿ ನಡೆಸಿದ್ದಾರೆ. ಈ ಗುಂಪು ಪಾಕಿಸ್ತಾನದ ತೆಹ್ರೀಕ್-ಎ-ತಾಲಿಬಾನ್ ನ ಹಲವಾರು ಬಣಗಳಲ್ಲಿ ಒಂದಾಗಿದೆ.
ಪೇಶಾವರದ ನೈಋತ್ಯಕ್ಕೆ 200 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ ಎಂದು ಪಿಟಿಐ ವರದಿ ತಿಳಿಸಿದೆ. ಜೈಶ್ ಅಲ್ ಫುರ್ಸಾನ್ ಉಗ್ರರು ಈ ದಾಳಿ ನಡೆಸಿದ್ದಾರೆ. ಈ ಗುಂಪು ಪಾಕಿಸ್ತಾನದ ತೆಹ್ರೀಕ್-ಎ-ತಾಲಿಬಾನ್ ನ ಹಲವಾರು ಬಣಗಳಲ್ಲಿ ಒಂದಾಗಿದೆ.