ವ್ಲಾಡಿಮಿರ್ ಪುಟಿನ್  
ವಿದೇಶ

ಕುರ್ಸ್ಕ್ ಪ್ರದೇಶದ ಸೈನಿಕರು ಶರಣಾದರೆ ಉಕ್ರೇನ್ ಪಡೆಗಳ ಸುರಕ್ಷತೆ ಖಚಿತ: ರಷ್ಯಾ ಅಧ್ಯಕ್ಷ ಪುಟಿನ್

ರಷ್ಯಾ ಸೈನಿಕರಿಗೆ ಉಕ್ರೇನ್ ಪಡೆಗಳು ಸುತ್ತುವರೆದಿವೆ ಎಂಬ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹೇಳಿಕೆಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆನೆಸ್ಕಿ ತಳ್ಳಿಹಾಕಿದ್ದಾರೆ.

ಮಾಸ್ಕೋ: ಉಕ್ರೇನಿಯನ್ ಸೈನಿಕರ ಜೀವ ಉಳಿಸಲು ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ ನಂತರ, ಕುರ್ಸ್ಕ್ ಪ್ರದೇಶದಲ್ಲಿ ಹೋರಾಡುತ್ತಿರುವ ಉಕ್ರೇನ್ ಸೈನಿಕರು ಶರಣಾಗುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ನೀಡಿದ್ದಾರೆ.

ರಷ್ಯಾ ಸೈನಿಕರಿಗೆ ಉಕ್ರೇನ್ ಪಡೆಗಳು ಸುತ್ತುವರೆದಿವೆ ಎಂಬ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಹೇಳಿಕೆಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆನೆಸ್ಕಿ ತಳ್ಳಿಹಾಕಿದ್ದು, ತಮ್ಮ ದೇಶದ ಸೈನಿಕರ ಮೇಲೆ ಒತ್ತಡ ತೀವ್ರವಾಗಿ ಹೆಚ್ಚಾಗುತ್ತಿದೆ ಎಂದಿದ್ದಾರೆ.

ಕಳೆದ ವಾರ ರಷ್ಯಾ ತ್ವರಿತ ಪ್ರತಿದಾಳಿ ನಡೆಸಿದೆ, ಉಕ್ರೇನ್‌ನಿಂದ ಪಶ್ಚಿಮ ಗಡಿ ಪ್ರದೇಶದಲ್ಲಿನ ಭೂಮಿ ಮತ್ತು ವಸಾಹತುಗಳನ್ನು ವಶಪಡಿಸಿಕೊಂಡಿದೆ ಎಂದು ಉಕ್ರೇನ್ ಹೇಳಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಕರೆಗೆ ನಾವು ಸಹಾನುಭೂತಿ ಹೊಂದಿದ್ದೇವೆ ಎಂದು ಪುಟಿನ್ ಟೆಲಿವಿಷನ್ ಮೂಲಕ ಹೇಳಿದ್ದಾರೆ. ಉಕ್ರೇನ್ ಪಡೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾದರೆ, ಅವರಿಗೆ ಜೀವರಕ್ಷಣೆ ಮತ್ತು ನಮ್ಮ ಸರ್ಕಾರದಿಂದಲೇ ಸೂಕ್ತ ಚಿಕಿತ್ಸೆಯನ್ನು ಒದಗಿಸಲಾಗುವುದು ಎಂದರು.

ಅಮೆರಿಕ ಅಧ್ಯಕ್ಷರ ಮನವಿಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು, ಉಕ್ರೇನ್‌ನ ಮಿಲಿಟರಿ-ರಾಜಕೀಯ ನಾಯಕತ್ವ ಅದರ ಮಿಲಿಟರಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವಂತೆ ಆದೇಶ ನೀಡಬೇಕು ಎಂದು ಪುಟಿನ್ ಹೇಳಿದ್ದಾರೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಕುರ್ಸ್ಕ್‌ಗೆ ಗಡಿಯಾಚೆಗಿನ ದಾಳಿಯಲ್ಲಿ ವಶಪಡಿಸಿಕೊಂಡ ಬಹುಪಾಲು ಪ್ರದೇಶವನ್ನು ಮಾಸ್ಕೋ ಮರಳಿ ವಶಪಡಿಸಿಕೊಂಡಿದೆ, ಇದರಲ್ಲಿ ಕಳೆದ ವಾರದಲ್ಲಿ ಕ್ಷಿಪ್ರ ಪ್ರತಿದಾಳಿಯೂ ಸೇರಿದೆ. ಟ್ರಂಪ್ ಮತ್ತು ಪುಟಿನ್ ಅವರ ಹಕ್ಕುಗಳನ್ನು ಉಕ್ರೇನ್ ನಿರಾಕರಿಸಿತು ಮತ್ತು ಅಲ್ಲಿನ ಪ್ರದೇಶವನ್ನು ಹಿಡಿದಿಟ್ಟುಕೊಂಡಿದೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT