ಸನಾ: ಜನವರಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಯೆಮೆನ್‌ನ ಹೌತಿ ಸಂಘಟನೆ ವಿರುದ್ಧ ಅಮೆರಿಕ ನಡೆಸಿದ ಮೊದಲ ದಾಳಿಯಲ್ಲಿ ಕನಿಷ್ಠ 31 ಜನರು ಮೃತಪಟ್ಟಿದ್ದಾರೆ ಎಂದು ಬಂಡುಕೋರರು ಭಾನುವಾರ ತಿಳಿಸಿದ್ದಾರೆ. ಇರಾನ್ ಬಂಡುಕೋರ ಗುಂಪಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕೆಂದು ಅಮೆರಿಕ ಎಚ್ಚರಿಕೆ ನೀಡಿದೆ.
ಗಾಜಾ ಯುದ್ಧದ ಉದ್ದಕ್ಕೂ ಇಸ್ರೇಲ್ ಮತ್ತು ಕೆಂಪು ಸಮುದ್ರದ ಹಡಗು ಸಾಗಣೆಯ ಮೇಲೆ ದಾಳಿ ಮಾಡಿದ ಹೌತಿಗಳ ವಿರುದ್ಧ ನಡೆದ ದಾಳಿಯಲ್ಲಿ ಮಕ್ಕಳು ಕೂಡ ಸೇರಿದ್ದಾರೆ. ಕೆಂಪು ಸಮುದ್ರದ ಹಡಗು ಸಾಗಣೆಯ ಮೇಲೆ ಯೆಮೆನ್ ನ ಇರಾನ್ ಒಡಂಬಡಿಕೆ ಹೌತಿಗಳು ನಡೆಸಿದ ದಾಳಿಯನ್ನು ಖಂಡಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ದಾಳಿ ನಡೆಸಿದೆ.
ಬಂಡುಕೋರರ ಹಿಡಿತದಲ್ಲಿರುವ ರಾಜಧಾನಿ ಸನಾದಲ್ಲಿನ ಎಎಫ್‌ಪಿ ಛಾಯಾಗ್ರಾಹಕರೊಬ್ಬರು ಸೆರೆಹಿಡಿದ ದೃಶ್ಯದಲ್ಲಿ, ಮೂರು ಸ್ಫೋಟಗಳು ವಸತಿ ಪ್ರದೇಶಗಳಿಂದ ಬರುತ್ತಿರುವುದು ಕಾಣುತ್ತಿದೆ. ಹೌತಿಗಳ ಭದ್ರಕೋಟೆಯಾದ ಯೆಮೆನ್‌ನ ಉತ್ತರ ಸಾದಾ ಪ್ರದೇಶದಲ್ಲಿಯೂ ದಾಳಿಗಳು ನಡೆದಿವೆ.
ಒಂಬತ್ತು ನಾಗರಿಕರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಇತರ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ ಎಂದು ಹೌತಿ ಆರೋಗ್ಯ ಮತ್ತು ಪರಿಸರ ಸಚಿವಾಲಯವು ತಮ್ಮ ಸಬಾ ಸುದ್ದಿ ಸಂಸ್ಥೆಯಲ್ಲಿ ಹೇಳಿಕೆಯಲ್ಲಿ ತಿಳಿಸಿದೆ,
ಸಾದಾ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಹೌತಿ ಅನ್ಸರೊಲ್ಲಾ ವೆಬ್‌ಸೈಟ್ ವರದಿ ಮಾಡಿದೆ, ಸಾದಾದ ಅಲ್ಶಾಫ್ ಜಿಲ್ಲೆಯ ಮನೆಯ ಮೇಲೆ ನಡೆದ ಪ್ರತ್ಯೇಕ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅನ್ಸರೋಲ್ಲಾ ಹೇಳಿದ್ದಾರೆ.
ಈ ಬಗ್ಗೆ ಬ್ರಿಟಿಷ್ ಅಧಿಕಾರಿಗಳಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಕೆಂಪು ಸಮುದ್ರದ ಸಾಗಣೆಯ ವಿರುದ್ಧ ಹೌತಿಗಳ ಬೆದರಿಕೆಗಳನ್ನು ಉಲ್ಲೇಖಿಸಿ, ನಮ್ಮ ಗುರಿ ಸಾಧಿಸುವವರೆಗೆ ದಾಳಿ ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಡೊನಾಲ್ಡ್ ಟ್ರಂಪ್ ಇರಾನ್‌ಗೆ ಹೌತಿಗಳಿಗೆ ತಕ್ಷಣ ಬೆಂಬಲವನ್ನು ಕಡಿತಗೊಳಿಸಬೇಕು ಎಂದು ಎಚ್ಚರಿಸಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಯೆಮೆನ್‌ನ ಬಹುಭಾಗವನ್ನು ನಿಯಂತ್ರಿಸಿರುವ ಬಂಡುಕೋರರು, ಇಸ್ರೇಲ್ ಮತ್ತು ಅಮೆರಿಕಕ್ಕೆ ತೀವ್ರವಾಗಿ ವಿರೋಧಿಸುವ ಇರಾನ್ ಪರ ಗುಂಪುಗಳ ಪ್ರತಿರೋಧದ ಅಕ್ಷದ ಭಾಗವಾಗಿದೆ.