ಖವಾಜಾ ಆಸಿಫ್ 
ವಿದೇಶ

'ಸಿಂಧೂ ನದಿಗೆ ಭಾರತ ನಿರ್ಮಿಸುವ ಯಾವುದೇ ಡ್ಯಾಮ್ ಅನ್ನು ನಾವು ಧ್ವಂಸಗೊಳಿಸುತ್ತೇವೆ': ಪಾಕ್ ರಕ್ಷಣಾ ಸಚಿವ

ಸಿಂಧೂ ನದಿಗೆ ಅಡ್ಡವಾಗಿ ಡ್ಯಾಂ ನಿರ್ಮಿಸಲು ಭಾರತ ಯತ್ನಿಸಿದರೆ ಬಲವಾದ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಆಸಿಫ್ ಒತ್ತಿ ಹೇಳಿದ್ದಾರೆ.

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಭಾರತ - ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವುದರ ನಡುವೆ, ಭಾರತ ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿ ಯಾವುದೇ ಡ್ಯಾಮ್ ನಿರ್ಮಿಸಿದರೆ ಇಸ್ಲಾಮಾಬಾದ್ ಅದನ್ನು "ಧ್ವಂಸಗೊಳಿಸಲಿದೆ" ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಶುಕ್ರವಾರ ಹೇಳಿದ್ದಾರೆ.

ಜಿಯೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಸಿಫ್, ಸಿಂಧೂ ನದಿಗೆ ಅಡ್ಡವಾಗಿ ಯಾವುದೇ ಮೂಲಸೌಕರ್ಯ ನಿರ್ಮಿಸುವುದನ್ನು "ಭಾರತದ ಆಕ್ರಮಣ" ಎಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದೆ.

ಸಿಂಧೂ ನದಿಗೆ ಅಡ್ಡವಾಗಿ ಡ್ಯಾಂ ನಿರ್ಮಿಸಲು ಭಾರತ ಯತ್ನಿಸಿದರೆ ಬಲವಾದ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಆಸಿಫ್ ಒತ್ತಿ ಹೇಳಿದ್ದಾರೆ.

"ಖಂಡಿತ, ಅವರು ಯಾವುದೇ ರಚನೆಯನ್ನು ನಿರ್ಮಿಸಲು ಪ್ರಯತ್ನಿಸಿದರೆ, ನಾವು ಅದನ್ನು ಧ್ವಂಸಗೊಳಿಸುತ್ತೇವೆ. ಆಕ್ರಮಣವು ಕೇವಲ ಫಿರಂಗಿ ಅಥವಾ ಗುಂಡುಗಳನ್ನು ಹಾರಿಸುವುದರ ಮೂಲಕ ಅಲ್ಲ; ಅದಕ್ಕೆ ಹಲವು ಮುಖಗಳಿವೆ. ಆ ಮುಖಗಳಲ್ಲಿ ಸಿಂಧೂ ನದಿ ನೀರನ್ನು ತಡೆಯುವುದು ಅಥವಾ ತಿರುಗಿಸುವುದು ಒಂದು. ಇದರಿಂದ ಪಾಕಿಸ್ತಾನದಲ್ಲಿ ಹಸಿವು ಮತ್ತು ಬಾಯಾರಿಕೆಯಿಂದ ಜನರ ಸಾವುಗಳಿಗೆ ಕಾರಣವಾಗಬಹುದು" ಎಂದಿದ್ದಾರೆ.

ಆದಾಗ್ಯೂ, ಸದ್ಯಕ್ಕೆ ಪಾಕಿಸ್ತಾನವು ಸೂಕ್ತ ವೇದಿಕೆಗಳಲ್ಲಿ ಮತ್ತು ಸಂಬಂಧಿತ ಪಾಲುದಾರರೊಂದಿಗೆ ಸಿಂಧೂ ನದಿ ಒಪ್ಪಂದದ ವಿಷಯವನ್ನು ಪ್ರಸ್ತಾಪಿಸುತ್ತದೆ ಎಂದು ಆಸಿಫ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT