ಪಾಕ್ ಪತ್ರಕರ್ತ ವಿವಾದಾತ್ಮಕ ಹೇಳಿಕೆ 
ವಿದೇಶ

'ಭಾರತೀಯ ನಟಿಯರನ್ನು S*x Slaves ಮಾಡಿಕೊಳ್ಳುತ್ತೇನೆ': Pakistani YouTuber ದುರಂಹಕಾರ! Video Viral

ಭಾರತೀಯ ನಟಿಯರನ್ನು ತನ್ನ ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳುವುದಾಗಿ' ಬಹಿರಂಗವಾಗಿ ಹೇಳಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಇಸ್ಲಾಮಾಬಾದ್: 26 ಮಂದಿಯ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ವಿರುದ್ಧ ಆಕ್ರಮಣಕಾರಿ ಕ್ರಮಗಳನ್ನು ಘೋಷಿಸಿದಾಗಿನಿಂದ, ನೆರೆಯ ದೇಶದ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಭಾರತ ಮತ್ತು ಭಾರತೀಯರ ವಿರುದ್ಧ ಪ್ರಚೋದನಕಾರಿ ಮತ್ತು ಭಯಾನಕ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಎರಡು ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಪಾಕಿಸ್ತಾನಿ ಪತ್ರಕರ್ತನೊಬ್ಬ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, 'ಭಾರತೀಯ ನಟಿಯರನ್ನು ತನ್ನ ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳುವುದಾಗಿ' ಬಹಿರಂಗವಾಗಿ ಹೇಳಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಪಾಡ್ ಕಾಸ್ಟ್ ಕಾರ್ಯಕ್ರಮದಲ್ಲಿ ಪಾಕಿಸ್ತಾನಿ ಪತ್ರಕರ್ತ ನಯೀಮ್ ಹನೀಫ್ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭುಗಿಲೆದ್ದರೆ ನಿಮ್ಮ ಬಯಕೆ ಏನು? ಎಂದು ಪತ್ರಕರ್ತ ಮಬಾಶಿರ್ ಲುಕ್ಮಾನ್ ಎಂಬಾತನನ್ನು ಕೇಳುತ್ತಾನೆ. ಈ ವೇಳೆ ಉತ್ತರಿಸುವ ಪತ್ರಕರ್ತ ಮಬಾಶಿರ್ ಲುಕ್ಮಾನ್, 'ಯುದ್ಧದ ಜೊತೆ ಭಾರತೀಯ ನಟಿಯರನ್ನು ತನ್ನ ಸೆಕ್ಸ್ ಗುಲಾಮರಾಗಿ ಮಾಡಿಕೊಳ್ಳುತ್ತೇನೆ' ಎಂದು ಹೇಳುತ್ತಾನೆ. ಅಂತೆಯೇ "ಗಂಭೀರವಾಗಿ ಹೇಳಬೇಕೆಂದರೆ, ನನ್ನ ಆಸೆ ಹುತಾತ್ಮತೆಯಲ್ಲ, ನನ್ನ ಆಸೆ ಯೋಧನಾಗುವುದು. ಅಲ್ಲಾಹನು ಪಾಕಿಸ್ತಾನದ ಎಲ್ಲರನ್ನೂ ಯೋಧರನ್ನಾಗಿ ಮಾಡಲಿ" ಎಂದು ಹೇಳುತ್ತಾನೆ.

ವ್ಯಾಪಕ ಆಕ್ರೋಶ

ಇನ್ನು ಪಾಕಿಸ್ತಾನ ಪತ್ರಕರ್ತನ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಭಾರತೀಯ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 'ಇದು ಈ ಒಬ್ಬ ಪತ್ರಕರ್ತನ ಮನಸ್ಥಿತಿಯಲ್ಲ.. ಇದು ಪಾಕಿಸ್ತಾನದ ಆಮೂಲಾಗ್ರ ಮನಸ್ಥಿತಿಯನ್ನು ಉತ್ತೇಜಿಸುವ ಕೊಳಕಿಗೆ ಪುರಾವೆಯಾಗಿದೆ ಎಂದು ಓರ್ವ ಬಳಕೆದಾರ ಕಿಡಿಕಾರಿದ್ದಾರೆ. ಅಂತೆಯೇ ಮತ್ತೋರ್ವ ಬಳಕೆದಾರರು 'ಸ್ತ್ರೀದ್ವೇಷ, ವಿಕೃತತೆ ಮತ್ತು ಅನಾಗರಿಕ ಕಲ್ಪನೆಗಳು ರಾಷ್ಟ್ರೀಯತೆಯ ಲಕ್ಷಣಗಳಲ್ಲ. ಅವು ರೋಗಗ್ರಸ್ತ ಮನಸ್ಥಿತಿಯ ಲಕ್ಷಣಗಳಾಗಿವೆ. ಬಾಲಿವುಡ್ ಈಗ ಮೌನವಾಗಿದ್ದರೆ, ಅದು ಆ ಹೇಳಿಕೆಗೆ ಸಹಭಾಗಿತ್ವವಾಗಿರಲಿದೆ" ಎಂದು ಮತ್ತೋರ್ವ ಬಳಕೆದಾರ ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್