ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀ‌ರ್ ಖಾನ್ ಮುತ್ತಾಖಿ  
ವಿದೇಶ

ಆಫ್ಘಾನ್ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಮುತ್ತಾಖಿ ಮುಂದಿನ ವಾರ ಭಾರತಕ್ಕೆ..!

1998ರಲ್ಲಿ ತಾಲಿಬಾನ್ ನಾಯಕರ ಮೇಲೆ ಭದ್ರತಾ ಮಂಡಳಿ ನಿರ್ಬಂಧ ಹೇರಿರುವ ಕಾರಣ, ಯಾವುದೇ ತಾಲಿಬಾನ್ ನಾಯಕರ ಪ್ರವಾಸಕ್ಕೆ ವಿಶ್ವಸಂಸ್ಥೆ ಪೂರ್ವಾನುಮತಿ ಕಡ್ಡಾಯವಾಗಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀ‌ರ್ ಖಾನ್ ಮುತ್ತಾಖಿ ಭಾರತ ಪ್ರವಾಸಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ಅನುಮೋದನೆ ನೀಡಿದೆ.

ಭಾರತದ ಮನವಿ ಮೇರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಮುತ್ತಾಖಿ ಅ.9-16ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ.

1998ರಲ್ಲಿ ತಾಲಿಬಾನ್ ನಾಯಕರ ಮೇಲೆ ಭದ್ರತಾ ಮಂಡಳಿ ನಿರ್ಬಂಧ ಹೇರಿರುವ ಕಾರಣ, ಯಾವುದೇ ತಾಲಿಬಾನ್ ನಾಯಕರ ಪ್ರವಾಸಕ್ಕೆ ವಿಶ್ವಸಂಸ್ಥೆ ಪೂರ್ವಾನುಮತಿ ಕಡ್ಡಾಯವಾಗಿದೆ.

ಮುತ್ತಾಖಿ ಅವರಿಗೆ ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ದೃಢಪಡಿಸಿದೆ. ಇದರಿಂದಾಗಿ ಅವರು ಅ.9 ಮತ್ತು 16 ರ ನಡುವೆ ಭಾರತಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.

ಚೀನಾ ಮತ್ತು ಪಾಕಿಸ್ತಾನ ಹತ್ತಿಕ್ಕಲು ಭಾರತ ಯತ್ನಿಸುತ್ತಿರುವ ನಡುವೆಯೇ ಮುತ್ತಾಖಿ ಭಾರತ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.

ವಿದೇಶಗಳಲ್ಲಿ ತಾಲಿಬಾನ್ ಸರ್ಕಾರದ ಪ್ರತಿನಿಧಿಗಳ ಜೊತೆ ಭಾರತದ ಅಧಿಕಾರಿಗಳ ಮಟ್ಟದ ಭೇಟಿ ನಡೆದಿತ್ತಾದರೂ, ಭಾರತಕ್ಕೆ ತಾಲಿಬಾನ್ ನಾಯಕರ ಆಗಮನ ಇದೇ ಮೊದಲು.

ಭಾರತೀಯ ರಾಜತಾಂತ್ರಿಕ ವಲಯಗಳು ತಿಂಗಳುಗಳಿಂದ ಈ ಕ್ಷಣಕ್ಕಾಗಿ ತಯಾರಿ ನಡೆಸುತ್ತಿವೆ. ಜನವರಿಯಿಂದ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಹಿರಿಯ ಐಎಫ್‌ಎಸ್ ಅಧಿಕಾರಿ ಜೆ.ಪಿ. ಸಿಂಗ್ ಸೇರಿದಂತೆ ಭಾರತೀಯ ಅಧಿಕಾರಿಗಳು ಮುತ್ತಕಿ ಮತ್ತು ಇತರ ತಾಲಿಬಾನ್ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆಗಾಗ್ಗೆ ದುಬೈನಂತಹ ಸ್ಥಳಗಳಲ್ಲಿ ಭೇಟಿ ಮಾಡಿದ್ದಾರೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ದುಬೈನಲ್ಲಿ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರನ್ನು ಭೇಟಿಯಾಗಿದ್ದರು. ಭಾರತವು ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ಮಾನವೀಯ ನೆರವು, ವಿಶೇಷವಾಗಿ ಆರೋಗ್ಯ ವಲಯವನ್ನು ಬಲಪಡಿಸುವುದು ಮತ್ತು ನಿರಾಶ್ರಿತರ ಪುನರ್ವಸತಿಯನ್ನು ಬೆಂಬಲಿಸುವ ಬಗ್ಗೆ ಚರ್ಚೆ ನಡೆಸಲಾಯಿತು.

ಭಾರತವು ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ಮೇ 15 ರಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮುತ್ತಾಖಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು.

ಇದು 2021 ರ ನಂತರದ ಮೊದಲ ಸಚಿವ ಮಟ್ಟದ ಸಂಪರ್ಕವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತಾಲಿಬಾನ್ ಖಂಡಿಸಿದ್ದಕ್ಕಾಗಿ ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭಾರತ ಮತ್ತು ಅಫ್ಘಾನ್ ಜನರೊಂದಿಗಿನ ಸಾಂಪ್ರದಾಯಿಕ ಸ್ನೇಹವನ್ನು ಪುನರುಚ್ಚರಿಸಿದರು. 2021ರಲ್ಲಿ ಚುನಾಯಿತ ಸರ್ಕಾರ ಕೆಡವಿದ ಬಳಿಕ ಅಲ್ಲಿ ತಾಲಿಬಾನಿಗಳು ಸರ್ಕಾರ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: ವೈದ್ಯನಾದರೂ ತಲೆ ತುಂಬ 'ಇಸ್ಲಾಮ್ ಮೂಲಭೂತವಾದ' ತುಂಬಿಕೊಂಡಿದ್ದ ಬಾಂಬರ್! ರೋಗಿಗಳಿಗೆ ಏನು ಹೇಳ್ತಿದ್ದ ಗೊತ್ತಾ?

5th Generation Fighter: "ಭಾರತಕ್ಕೆ ಬೇಕಾದ್ದು ಕೊಡ್ತೇವೆ": ವಿಶ್ವದ ಯಾವುದೇ ರಾಷ್ಟ್ರ ಮಾಡದ 'ಸಾಹಸ' ಮಾಡಿದ ರಷ್ಯಾ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಸಿದ್ದರಾಮಯ್ಯ 'ಫೇಸ್ ಬುಕ್ 'ನಲ್ಲಿ ಲೈವ್ ಬಂದರೆ ಹೇಗಿರುತ್ತದೆ? ಈ Video ನೋಡಿ..

ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪಲ್ಲ: ಡಿಕೆ ಸುರೇಶ್ ಮಾರ್ಮಿಕ ಮಾತಿನ ಅರ್ಥ ಏನು?​

ಬೆಂಗಳೂರು ಶೇ. 8.5 ರಷ್ಟು ಬೆಳವಣಿಗೆಯೊಂದಿಗೆ ಮುಂಬೈ, ದೆಹಲಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿದೆ! ಇಲ್ಲಿದೆ ವರದಿ...

SCROLL FOR NEXT