ವಿದೇಶ

ಜಾಗತಿಕವಾಗಿ Pak ಮಾನ ಹರಾಜು: ಹೇಡಿಗಳಂತೆ ಓಡಿಹೋದ ಪಾಕ್ ಸೈನಿಕರ ಪ್ಯಾಂಟ್‌ ರಸ್ತೆಯಲ್ಲಿ ನೇತುಹಾಕಿದ Taliban; Video!

ಪ್ರತಿ ಯುದ್ಧದಲ್ಲೂ ಸೋಲನ್ನು ಅನುಭವಿಸಿದ ನಂತರ, ಪಾಕಿಸ್ತಾನವು ವಿಜಯ ಮತ್ತು ತನ್ನ ಎದುರಾಳಿಯನ್ನು ಸೋಲಿಸಿದೆ ಎಂದು ಹೇಳಿಕೊಳ್ಳುತ್ತದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ಪಾಕಿಸ್ತಾನವನ್ನು ಮಂಡಿಯೂರಿಸಿದಾಗಲೂ, ಪಾಕಿಸ್ತಾನವು ಭಾರತೀಯ ಸೇನೆಗೆ ಗಮನಾರ್ಹ ನಷ್ಟವನ್ನುಂಟುಮಾಡಿತ್ತು.

ಕಾಬೂಲ್(ಅಫ್ಘಾನಿಸ್ತಾನ): ಪ್ರತಿ ಯುದ್ಧದಲ್ಲೂ ಸೋಲನ್ನು ಅನುಭವಿಸಿದ ನಂತರ, ಪಾಕಿಸ್ತಾನವು ವಿಜಯ ಮತ್ತು ತನ್ನ ಎದುರಾಳಿಯನ್ನು ಸೋಲಿಸಿದೆ ಎಂದು ಹೇಳಿಕೊಳ್ಳುತ್ತದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ಪಾಕಿಸ್ತಾನವನ್ನು ಮಂಡಿಯೂರಿಸಿದಾಗಲೂ, ಪಾಕಿಸ್ತಾನವು ಭಾರತೀಯ ಸೇನೆಗೆ ಗಮನಾರ್ಹ ನಷ್ಟವನ್ನುಂಟುಮಾಡಿದೆ ಎಂದು ಹೇಳಿಕೊಂಡಿತು. ಅಫ್ಘಾನಿಸ್ತಾನದಲ್ಲಿ ಮತ್ತೊಂದು ಅವಮಾನಕರ ಸೋಲಿನ ನಂತರವೂ, ಪಾಕಿಸ್ತಾನವು ತಾನೇ ಗೆದ್ದಿದ್ದಾಗಿ ಹೇಳಿಕೊಂಡಿತ್ತು. ಆದರೆ ಅಫ್ಘಾನಿಸ್ತಾನದಿಂದ ಬರುವ ವೀಡಿಯೊಗಳು ಮತ್ತು ಫೋಟೋಗಳು ನಿಜಸತ್ಯವನ್ನು ಬಹಿರಂಗಪಡಿಸುತ್ತಿವೆ.

ನಿನ್ನೆ ಎರಡೂ ಕಡೆಯವರು ತಾತ್ಕಾಲಿಕ 48 ಗಂಟೆಗಳ ಕದನ ವಿರಾಮ ಘೋಷಿಸಿದರು. ಇದು ಅಫ್ಘಾನಿಸ್ತಾನದ ಕೋರಿಕೆಯ ಮೇರೆಗೆ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ ಅಫ್ಘಾನ್ ಸರ್ಕಾರವು ಅದನ್ನು ಪಾಕಿಸ್ತಾನದ ಕೋರಿಕೆಯ ಮೇರೆಗೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಈ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಇದು ನಾಚಿಕೆಗೇಡಿನ ತಿರುವು. ಏಕೆಂದರೆ ಅಫ್ಘಾನಿಸ್ತಾನದ ಸಾಮಾಜಿಕ ಮಾಧ್ಯಮಗಳು ಪಾಕಿಸ್ತಾನಿ ಸೈನಿಕರ ವಾಹನಗಳು, ಶಸ್ತ್ರಾಸ್ತ್ರಗಳು ಮತ್ತು ಸೈನಿಕರ ಪ್ಯಾಂಟ್‌ಗಳನ್ನು ಸಹ ಲೂಟಿ ಮಾಡುವುದನ್ನು ತೋರಿಸುವ ಚಿತ್ರಗಳು ಮತ್ತು ವೀಡಿಯೊಗಳನ್ನು ಬಹಿರಂಗಪಡಿಸುತ್ತಿದೆ.

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದ ಹಲವಾರು ವೀಡಿಯೊಗಳು ಮತ್ತು ಫೋಟೋಗಳನ್ನು ಅಫ್ಘಾನಿಸ್ತಾನ ಬಿಡುಗಡೆ ಮಾಡಿದೆ. ಕೆಲವು ಸ್ಥಳಗಳಲ್ಲಿ ಜನರು ಒಗ್ಗೂಡುತ್ತಿದ್ದಾರೆ. ಅಲ್ಲಿ ಅಫ್ಘಾನ್ ಸೈನಿಕರನ್ನು ಜೊತೆ ರ್ಯಾಲಿಗಳನ್ನು ನಡೆಸುತ್ತಿದ್ದು ಅಫ್ಘಾನ್ ಸೈನಿಕರ ಶೌರ್ಯಕ್ಕಾಗಿ ಅವರನ್ನು ಗೌರವಿಸುತ್ತಿದ್ದಾರೆ. ಮತ್ತಷ್ಟು ಫೋಟೋಗಳಲ್ಲಿ ಪಾಕಿಸ್ತಾನಿ ಸೈನ್ಯಕ್ಕೆ ಮಣ್ಣು ಮುಕ್ಕಿಸಿದ್ದು, ಅಲ್ಲದೆ ಪಾಕಿಸ್ತಾನದ ಟ್ಯಾಂಕ್‌ಗಳ ಮೇಲೆ ಸವಾರಿ ಮಾಡಿ ಅವರ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದರು. ತಾಲಿಬಾನ್ ಪಾಕಿಸ್ತಾನಿ ಸೈನಿಕರ ಪ್ಯಾಂಟ್‌ಗಳನ್ನು ರಸ್ತೆ ಮಧ್ಯೆ ನೇತುಹಾಕುತ್ತಿರುವುದನ್ನು ತೋರಿಸುವ ಮತ್ತೊಂದು ಫೋಟೋ ಕೂಡ ಹೊರಬಂದಿದೆ. ಅವರು ಹೋರಾಟದ ಸಮಯದಲ್ಲಿ ತಮ್ಮ ನೆಲೆಗಳಿಂದ ಓಡಿಹೋಗಿದ್ದು ಅವರ ಬಟ್ಟೆಗಳನ್ನು ಆಫ್ಘನ್ನರು ವಶಪಡಿಸಿಕೊಂಡಿದ್ದರು.

ಪಾಕಿಸ್ತಾನ-ಅಫ್ಘಾನಿಸ್ತಾನ ಸಂಘರ್ಷ ಹೇಗೆ ಹುಟ್ಟಿಕೊಂಡಿತು?

ಪಾಕಿಸ್ತಾನವು ಅಫ್ಘಾನಿಸ್ತಾನದ ಕಂದಹಾರ್ ಮತ್ತು ಸ್ಪಿನ್ ಬೋಲ್ಡಕ್ ಪ್ರದೇಶಗಳಲ್ಲಿ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದಾಗ ಅದೇ ದಿನ ಸಂಘರ್ಷ ಪ್ರಾರಂಭವಾಯಿತು. ಪಾಕಿಸ್ತಾನವು ತನ್ನ ಕ್ರಮಗಳು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ ಸ್ಥಾನಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿಕೊಂಡಿತ್ತು. ಅಫ್ಘಾನ್ ಅಧಿಕಾರಿಗಳು ಈ ದಾಳಿಯಲ್ಲಿ ಕನಿಷ್ಠ 12 ನಾಗರಿಕರು ಸಾವನ್ನಪ್ಪಿದ್ದು ಮತ್ತು 100ಕ್ಕೂ ಹೆಚ್ಚು ಜನರನ್ನು ಗಾಯಗೊಂಡಿದ್ದರು ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಆಫ್ಘನ್ ಸೇನೆ ಮತ್ತು ತಾಲಿಬಾನ್ ಹೋರಾಟಗಾರರು ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಂಡರು. ಮಾತ್ರವಲ್ಲದೆ ಅವರ ಶಸ್ತ್ರಾಸ್ತ್ರಗಳು ಮತ್ತು ಟ್ಯಾಂಕ್‌ಗಳನ್ನು ಸಹ ವಶಪಡಿಸಿಕೊಂಡರು. ಪ್ರಸ್ತುತ 48 ಗಂಟೆಗಳ ಕದನ ವಿರಾಮ ಜಾರಿಯಲ್ಲಿದ್ದು, ಸೌದಿ ಅರೇಬಿಯಾ ಮತ್ತು ಕತಾರ್‌ನಂತಹ ದೇಶಗಳು ಎರಡೂ ದೇಶಗಳಿಗೆ ಶಾಂತತೆ ಮತ್ತು ಮಾತುಕತೆಗೆ ಮನವಿ ಮಾಡಿವೆ. ಪ್ರಸ್ತುತ, ಗಡಿಗಳು ಮುಚ್ಚಲ್ಪಟ್ಟಿದ್ದು, ವ್ಯಾಪಾರ ಮತ್ತು ಸಂಚಾರಕ್ಕೆ ಅಡ್ಡಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gujarat: ಒಂದು ಕಾಲದ ಬಿಜೆಪಿ ವಿರೋಧಿಗಳಿಗೆ ಒಲಿದ ಸಚಿವ ಸ್ಥಾನ?: ನೂತನ ಸಂಪುಟದಲ್ಲಿ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್!

ಜಾಗತಿಕ ಸೇನಾ ಬಲ: ಚೀನಾವನ್ನು ಹಿಂದಿಕ್ಕಿದ ಭಾರತ! ಅಮೆರಿಕ, ರಷ್ಯಾ ನಂತರ 3ನೇ ಅತಿ ಬಲಿಷ್ಠ ಸೇನೆ!

HMT ಕಾರ್ಖಾನೆ ಪುನರುಜ್ಜೀವನಗೊಳಿಸಲು DPR ಸಿದ್ಧವಾಗುತ್ತಿದೆ: ಕುಮಾರಸ್ವಾಮಿ

RSS ಚಟುವಟಿಕೆಗಳಿಗೆ ಕಡಿವಾಣ: BJP ಆದೇಶವನ್ನೇ ಅಸ್ತ್ರವಾಗಿ ಬಳಸಿದ Congress; ಸಚಿವ ಸಂಪುಟದಲ್ಲಿ​​ ಮಹತ್ವದ ತೀರ್ಮಾನ!

ನಮ್ಮ ಆದ್ಯತೆಗಳಿಗೆ ತಕ್ಕಂತೆ ವ್ಯವಹಾರ: ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಭಾರತದ ತಿರುಗೇಟು!

SCROLL FOR NEXT