ಕೇಟಿ ಪೆರ್ರಿ, ಜಸ್ಟಿನ್ ಟ್ರುಡೊ  
ವಿದೇಶ

Dating rumours: ಹಡಗಿನಲ್ಲಿ ರೋಮ್ಯಾನ್ಸ್! ಕೇಟಿ ಪೆರ್ರಿ ಕೆನ್ನೆಗೆ ಮುತ್ತಿಟ್ಟ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ! ಫೋಟೋ ವೈರಲ್

ಮಾಂಟ್ರಿಯಲ್‌ನಲ್ಲಿ ಇಬ್ಬರು ಡಿನ್ನರ್ ನಲ್ಲಿ ಕಾಣಿಸಿಕೊಂಡ ನಂತರ ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಇಬ್ಬರು ಸ್ವಲ್ಪ ದೂರ ಇದ್ದಾರೆ ಎಂದು ವರದಿಯಾಗಿತ್ತು. ಇದಾದ ಕೆಲವು ದಿನಗಳ ನಂತರ ಇದೀಗ ಇಬ್ಬರು ಪರಸ್ಪರ ಚುಂಬಿಸಿಕೊಳ್ಳುತ್ತಿರುವುದು ಕಂಡುಬಂದಿದೆ.

ಸಾಂಟಾ ಬಾರ್ಬರಾ: ಪಾಪ್‌ಸ್ಟಾರ್ ಕೇಟಿ ಪೆರ್ರಿ ಮತ್ತು ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾದಲ್ಲಿ ಹಡಗಿನಲ್ಲಿ ಪರಸ್ಪರ ಚುಂಬಿಸಿಕೊಳ್ಳುವ ಮೂಲಕ ಡೇಟಿಂಗ್ ವದಂತಿಗಳನ್ನು ದೃಢಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿದ್ದು, ಇಬ್ಬರೂ ಒಟ್ಟಿಗೆ ಆನಂದಿಸುತ್ತಿರುವುದನ್ನು ತೋರಿಸುತ್ತವೆ. ಇದು ಹಲವು ತಿಂಗಳಿಗಳಿಂದ ಕೇಳಿಬರುತ್ತಿದ್ದ ಡೇಟಿಂಗ್ ವದಂತಿಗಳಿಗೆ ಬ್ರೇಕ್ ಹಾಕಿದ್ದಂತೆ ಕಂಡುಬರುತ್ತಿದೆ.

ಮಾಂಟ್ರಿಯಲ್‌ನಲ್ಲಿ ಇಬ್ಬರು ಡಿನ್ನರ್ ನಲ್ಲಿ ಕಾಣಿಸಿಕೊಂಡ ನಂತರ ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಇಬ್ಬರು ಸ್ವಲ್ಪ ದೂರ ಇದ್ದಾರೆ ಎಂದು ವರದಿಯಾಗಿತ್ತು. ಇದಾದ ಕೆಲವು ದಿನಗಳ ನಂತರ ಇದೀಗ ಇಬ್ಬರು ಪರಸ್ಪರ ಚುಂಬಿಸಿಕೊಳ್ಳುತ್ತಿರುವುದು ಕಂಡುಬಂದಿದೆ.

ಈ ಫೋಟೋದಲ್ಲಿ ಇಬ್ಬರು ತಬ್ಬಿಕೊಂಡಿದ್ದು, ಪೆರ್ರಿ ಕೆನ್ನೆಗೆ ಟ್ರುಡೊ ಮುತ್ತು ನೀಡುತ್ತಿರುವುದು ಕಂಡುಬಂದಿದೆ. ಪೆರ್ರಿ ಕಪ್ಪು ಈಜುಡುಗೆ ಧರಿಸಿ ಶರ್ಟ್ ಧರಿಸದ ಟ್ರೂಡೊ ಜೊತೆಗಿದ್ದಾರೆ. ಇಬ್ಬರು ತಬ್ಬಿಕೊಂಡಿದ್ದು, ಟ್ರೂಡೊ ಪೆರ್ರಿಯ ಕೆನ್ನೆಗೆ ಮುತ್ತಿಡುತ್ತಿರುವುದು ಫೋಟೋದಲ್ಲಿದೆ.

ಜಸ್ಟಿನ್ ಟ್ರುಡೊ, ಆಗಸ್ಟ್ 2023 ರಲ್ಲಿ 18 ವರ್ಷಗಳ ನಂತರ ಅವರ ಪತ್ನಿ ಸೋಫಿ ಗ್ರ್ಗೊಯಿರ್ ಟ್ರುಡೊ ಅವರಿಂದ ಬೇರ್ಪಡುವುದಾಗಿ ಘೋಷಿಸಿದ್ದರು. ಮಾಜಿ ದಂಪತಿಗೆ ಮೂವರು ಮಕ್ಕಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ. ಚೌಧರಿ

'ಯಾವ ಕ್ಷಣದಲ್ಲಾದರೂ ಕುಸಿಯಬಹುದು': Kerala Landslide ಕುರಿತು ಮೊದಲೇ ಎಚ್ಚರಿಕೆ ನೀಡಿದ್ದ ಗುತ್ತಿಗೆದಾರರ ವರದಿ

ಚೆಕ್ ಬೌನ್ಸ್ ಪ್ರಕರಣ: ಬಾಲಿವುಡ್ ನಟ Rajpal Yadav ಮತ್ತೆ ಜೈಲುಪಾಲು: ಶಿಕ್ಷೆ ಎತ್ತಿಹಿಡಿದ ದೆಹಲಿ ಹೈಕೋರ್ಟ್

ಮುಂಬೈ ಮುಂಗಾರು ಅಬ್ಬರ: ಜಲಾವೃತ ರೈಲು ಹಳಿಗಳಲ್ಲಿ ಮೀನುಗಳ ಸ್ವಚ್ಛಂದ ಈಜಾಟ, Video Viral

ರಾಜ್ಯ ಸರ್ಕಾರಕ್ಕೆ ಶಾಶ್ವತ ನಿವಾಸ ಪ್ರಮಾಣ ಪತ್ರ ಕೊಡೋ ಅಧಿಕಾರವೇ ಇಲ್ಲ-ಛಲವಾದಿ ನಾರಾಯಣ ಸ್ವಾಮಿ ಕಿಡಿ!