ಪೀಟ್ ಹೆಗ್ ಸೆತ್ ಹಾಗೂ ಸೇನೆ ಮುಖ್ಯಸ್ಥರಾಗಿದ್ದ ರಾಂಡಿ ಜಾರ್ಜ್ ಚಿತ್ರ 
ವಿದೇಶ

ಇರಾನ್‌ ಯುದ್ಧದ ನಡುವೆ ಅಮೆರಿಕದಲ್ಲಿ ಮಹತ್ವದ ಬೆಳವಣಿಗೆ: ಸೇನಾ ಮುಖ್ಯಸ್ಥರನ್ನು ಕಿತ್ತೆಸೆದ ಟ್ರಂಪ್ ಆಡಳಿತ!

ಸೇನೆಯಿಂದ ಜನರಲ್ ರಾಂಡಿ ಜಾರ್ಜ್ ನಿರ್ಗಮನವನ್ನು ಪ್ರಧಾನ ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್ ದೃಢಪಡಿಸಿದ್ದಾರೆ.

ವಾಷಿಂಗ್ಟನ್: ಇರಾನ್‌ ಯುದ್ಧದ ನಡುವೆ ಅಮೆರಿಕದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಯುಎಸ್ ಸೇನಾ ಮುಖ್ಯಸ್ಥರನ್ನು ಟ್ರಂಪ್ ಆಡಳಿತ ಕಿತ್ತೆಸೆದಿರುವುದಾಗಿ ಮೂಲಗಳು ತಿಳಿಸಿವೆ. ಸೇನಾ ಮುಖ್ಯಸ್ಥ ಜನರಲ್ ರಾಂಡಿ ಜಾರ್ಜ್ ಅವರನ್ನು ತಕ್ಷಣ ನಿವೃತ್ತರಾಗುವಂತೆ ಯುನೈಟೆಡ್ ಸ್ಟೇಟ್ಸ್ ಯುದ್ಧದ ಕಾರ್ಯದರ್ಶಿ ಪೀಟ್ ಹೆಗ್‌ಸೆತ್ ಕೋರಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿರುವುದಾಗಿ ಸಿಬಿಎಸ್ ನ್ಯೂಸ್‌ ವರದಿ ಮಾಡಿದೆ.

ಈ ನಿರ್ಧಾರ ಮಹತ್ವದ ಬದಲಾವಣೆಯನ್ನು ತೋರಿಸುತ್ತಿದೆ. ಸೇನೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಹೆಗ್‌ಸೆತ್ ಅವರ ದೃಷ್ಟಿಕೋನವನ್ನು ಕಾರ್ಯಗತಗೊಳಿಸುವ' ಕಮಾಂಡರ್ ಹುಡುಕಾಟ ನಡೆಸಲಾಗುತ್ತಿದೆ. ಸೇನೆಯಿಂದ ಜನರಲ್ ರಾಂಡಿ ಜಾರ್ಜ್ ನಿರ್ಗಮನವನ್ನು ಪ್ರಧಾನ ಪೆಂಟಗನ್ ವಕ್ತಾರ ಸೀನ್ ಪಾರ್ನೆಲ್ ದೃಢಪಡಿಸಿದ್ದಾರೆ.

ಜನರಲ್ ಜಾರ್ಜ್ ಸೇನೆಯ 41 ನೇ ಮುಖ್ಯಸ್ಥ ಸ್ಥಾನದಿಂದ ತಕ್ಷಣ ನಿವೃತ್ತರಾಗುತ್ತಾರೆ. ದಶಕಗಳ ಕಾಲ ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಕ್ಕಾಗಿ ಅವರಿಗಾಗಿ ಡಿಪಾರ್ಟ್ ಮೆಂಟ್ ಆಫ್ ವಾರ್ ಕೃತಜ್ಞರಾಗಿದೆ ಎಂದು ಹೇಳಿದ್ದು, ಅವರ ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ.

ಜಾರ್ಜ್ ಅವರ ಸೇವೆಗೆ ನಾವು ಕೃತಜ್ಞರಾಗಿರುತ್ತೇವೆ. ಆದರೆ ಸೇನೆಯಲ್ಲಿ ನಾಯಕತ್ವ ಬದಲಾವಣೆಗೆ ಇದು ಸಮಯವಾಗಿದೆ ಎಂದು ಹಿರಿಯ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು CBS ನ್ಯೂಸ್‌ಗೆ ಹೇಳಿದ್ದಾರೆ.

ವೆಸ್ಟ್ ಪಾಯಿಂಟ್ ಪದವೀಧರ ಮತ್ತು ವೃತ್ತಿ ಪದಾತಿ ದಳದ ಅಧಿಕಾರಿಯಾಗಿರುವ ಜನರಲ್ ಜಾರ್ಜ್, ಈ ಹಿಂದೆ ಬೈಡನ್ ಆಡಳಿತದಲ್ಲಿ ಲಾಯ್ಡ್ ಆಸ್ಟಿನ್‌ಗೆ ಹಿರಿಯ ಮಿಲಿಟರಿ ಸಹಾಯಕರಾಗಿ ಸೇವೆ ಸಲ್ಲಿಸಿದ್ದರು. 2023 ರಲ್ಲಿ ಅವರ ಸೆನೆಟ್ ದೃಢೀಕರಣದ ನಂತರ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನಾಲ್ಕು ವರ್ಷಗಳ ಅವಧಿಯು 2027 ರಲ್ಲಿ ಮುಕ್ತಾಯಗೊಳ್ಳಬೇಕಾಗಿತ್ತು.

ಹಾಲಿ ಸೇನಾ ಉಪ ಮುಖ್ಯಸ್ಥ ಹಾಗೂ ಪೀಟ್ ಹೆಗ್ ಸೆತ್ ಅವರ ಮಾಜಿ ಸಹಾಯಕ ಜನರಲ್ ಕ್ರಿಸ್ಟೋಫರ್ ಲಾನೆವ್ ಸದ್ಯ ಹಂಗಾಮಿ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕುರ್ಚಿ ಕದನಕ್ಕೆ ಕೊನೆಗೂ climax? ಸಿಎಂ ಡಿಸಿಎಂ ಗೆ ಹೈಕಮಾಂಡ್ ಬುಲಾವ್; ರಾಜ್ಯ ರಾಜಕೀಯದಲ್ಲಿ ಸಂಚಲನ!

I Love India, I Love Modi: ಭಾರತ ನನ್ನನ್ನ 100% ನಂಬಬಹುದು- ಡೊನಾಲ್ಡ್ ಟ್ರಂಪ್

ಕದನ ವಿರಾಮ, ಹಾರ್ಮುಜ್ ಜಲಸಂಧಿ ತೆರೆಯಲು ಒಪ್ಪಂದಕ್ಕೆ ಇರಾನ್-ಯುಎಸ್ ಹತ್ತಿರ: 'ಆತುರ ಬೇಡ'- ಟ್ರಂಪ್ ಹೊಸ ವರಸೆ!

ಇರಾನ್-ಅಮೆರಿಕಾ ಕದನ ವಿರಾಮ ನಡುವೆ ಯುಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ; ರಾಜಧಾನಿಗೆ ಅಪ್ಪಳಿಸಿದ ಹೊಸ ಹೈಪರ್ಸಾನಿಕ್ ಕ್ಷಿಪಣಿ; Video

ಎಚ್.ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿದ Biggboss ಮಾಜಿ ಸ್ಪರ್ಧಿ ಜಾಹ್ನವಿ!

SCROLL FOR NEXT