ಡೊನಾಲ್ಡ್ ಟ್ರಂಪ್ 
ವಿದೇಶ

ಇದೇ ಮೊದಲು, ಶತ್ರು ರಾಷ್ಟ್ರದ ಪ್ರಾಂತ್ಯದಲ್ಲಿ ಇಬ್ಬರು US ಪೈಲಟ್‌ ರಕ್ಷಣೆ; ಡೊನಾಲ್ಡ್ ಟ್ರಂಪ್!

ಅಮೆರಿಕದ ಶಕ್ತಿಶಾಲಿ ಯುದ್ಧ ವಿಮಾನ F-15ನ್ನು ಹೊಡದುರುಳಿಸಿರುವುದಾಗಿ ಇರಾನ್ ಶುಕ್ರವಾರ ಹೇಳಿಕೊಂಡಿತ್ತು. ವಿ

ಟೆಹರಾನ್: ಇರಾನ್ ಸೇನೆ ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದ್ದ ಎಫ್-15 ಯುದ್ಧ ವಿಮಾನದ ಮತ್ತೊಬ್ಬ ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.

ಈ ಕುರಿತು ತಮ್ಮ ಸತ್ಯ ಸಾಮಾಜಿಕ ಮಾಧ್ಯಮ ಸೋಶಿಯಲ್ ಟ್ರೂಥ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಅವರು ನಮಗೆ ಸಿಕ್ಕಿದ್ದಾರೆ.ಅವರಿಗಾಗಿ ಅಮೆರಿಕ ಸೇನೆಯು ದೇಶದ ಇತಿಹಾಸದಲ್ಲೇ ಅತ್ಯಂತ ಸಾಹಸಮಯ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಈಗ ಅವರು ಸುರಕ್ಷಿತ ಹಾಗೂ ಸದೃಢವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಅಮೆರಿಕದ ಶಕ್ತಿಶಾಲಿ ಯುದ್ಧ ವಿಮಾನ F-15ನ್ನು ಹೊಡದುರುಳಿಸಿರುವುದಾಗಿ ಇರಾನ್ ಶುಕ್ರವಾರ ಹೇಳಿಕೊಂಡಿತ್ತು. ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಕೆಳಕ್ಕೆ ಜಿಗಿದಿದ್ದರು. ಆ ಪೈಕಿ ಒಬ್ಬರನ್ನು ಸೇನೆಯ ವಿಶೇಷ ಕಮಾಂಡೋಗಳು ರಕ್ಷಿಸಿದ್ದಾರೆ. ಮತ್ತೊಬ್ಬ ಪೈಲಟ್ ಇನ್ನೂ ಪತ್ತೆಯಾಗಿಲ್ಲ. ಆತನಿಗಾಗಿ ಇರಾನ್ ಹಾಗೂ ಅಮೆರಿಕ ಪೈಪೋಟಿಗೆ ಇಳಿದಿವೆ ಎಂದು ಅಮೆರಿಕದ ಮಾಧ್ಯಮಗಳಲ್ಲಿ ವರಿದಿಯಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ಂಪ್, ನಿನ್ನೆ ಮತ್ತೊರ್ವ ಪೈಲಟ್ ನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಎರಡನೇ ರಕ್ಷಣಾ ಕಾರ್ಯಾಚರಣೆಗೆ ಅಪಾಯವನ್ನುಂಟುಮಾಡುವುದನ್ನು ತಪ್ಪಿಸಲು ಅದನ್ನು ಬಹಿರಂಗಪಡಿಸಲಾಗಿಲ್ಲ. ಮೊದಲ ಬಾರಿಗೆ ಇಬ್ಬರು ಯುಎಸ್ ಪೈಲಟ್‌ಗಳನ್ನು ಪ್ರತ್ಯೇಕವಾಗಿ, ಶತ್ರು ಪ್ರಾಂತ್ಯದಲ್ಲಿ ರಕ್ಷಿಸಲಾಗಿದೆ.ಯಾರಿಗೂ ಏನೂ ಆಗದೆ ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಈ ಮಧ್ಯೆ ನಾಪತ್ತೆಯಾದ ಅಮೆರಿಕನ್ ಫೈಟರ್ ಜೆಟ್‌ನ ಸಿಬ್ಬಂದಿಗಾಗಿ ಹುಡುಕಾಟ ನಡೆಸುತ್ತಿದ್ದ ಯುಎಸ್ ವಿಮಾನವನ್ನು ನಾಶಪಡಿಸಲಾಗಿದೆ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಹೇಳಿದೆ ಎಂದು ಇರಾನ್ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ. ಪತನಗೊಂಡ ಫೈಟರ್ ಜೆಟ್‌ನ ಪೈಲಟ್‌ಗಾಗಿ ಹುಡುಕಾಟ ನಡೆಸುತ್ತಿದ್ದ ಅಮೆರಿಕದ ಶತ್ರು ವಿಮಾನವನ್ನು ಇಸ್ಫಾಹಾನ್‌ನ ದಕ್ಷಿಣ ಪ್ರದೇಶದಲ್ಲಿ ಇಸ್ಲಾಂನ ನಾಶಪಡಿಸಿದ್ದಾರೆ ಎಂದು ಗಾರ್ಡ್‌ಗಳನ್ನು ಉಲ್ಲೇಖಿಸಿ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

48 ಗಂಟೆಗಳೊಳಗೆ ಶಾಂತಿ ಒಪ್ಪಂದವನ್ನು ಒಪ್ಪಿಕೊಳ್ಳದಿದ್ದರೆ ಇರಾನ್‌ನ ಪ್ರಮುಖ ಮೂಲಸೌಕರ್ಯವನ್ನು ನಾಶಪಡಿಸುವ ಟ್ರಂಪ್ ಘೋಷಣೆ ನಡುವೆ ಈ ಕಾರ್ಯಾಚರಣೆ ನಡೆದಿದ್ದು, ಶಾಂತಿ ಒಪ್ಪಂದವನ್ನು ಇರಾನ್ ತಿರಸ್ಕರಿಸಿದೆ. ಬೆದರಿಕೆಯನ್ನು ಅಸಹಾಯಕ, ಅಸಮತೋಲಿತ ಮತ್ತು ಮೂರ್ಖ ಕ್ರಮ" ಎಂದು ಕರೆದಿದೆ.

ಇರಾನ್ ಭಾನುವಾರ ಮುಂಜಾನೆ ಇಸ್ರೇಲ್ ಮತ್ತು ಕುವೈತ್‌ನಲ್ಲಿ ಮತ್ತೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ಫೆ. 28 ರಿಂದ ಯುಎಸ್-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಯದ್ಧಕ್ಕೆ ಸಾವಿರಾರು ಜನರು ಬಲಿಯಾಗಿದ್ದು, ಜಾಗತಿಕ ಮಾರುಕಟ್ಟೆಯನನ್ನು ಅಲ್ಲಾಡಿಸಿದೆ, ಪ್ರಮುಖ ಹಡಗು ಮಾರ್ಗಗಳನ್ನು ಅಡ್ಡಿಪಡಿಸಿದೆ ಮತ್ತು ಇಂಧನ ಬೆಲೆಗಳನ್ನು ಹೆಚ್ಚಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

ದೆಹಲಿ: ಫ್ರೆಂಡ್​ಶಿಪ್ ನಿರಕಾರಿಸಿದ್ದಕ್ಕೆ 21 ವರ್ಷದ ಮಾಡೆಲ್'ನನ್ನು ಆಕೆಯ ಮನೆಗೆ ನುಗ್ಗಿ ಹತ್ಯೆಗೈದು ಜಿಮ್ ಟ್ರೇನರ್!

ಅಸಮಾಧಾನ ತಣಿಸಲು CM ಡಿಕೆಶಿ ಆಪ್ತ ಶಾಸಕ ಆಸೀಫ್ ಸೇಠ್‌ಗೆ ‘ಬುಡಾ’ ಅಧ್ಯಕ್ಷ ಪಟ್ಟ

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!