ಮೊಜ್ತಾಬಾ ಖಮೇನಿ 
ವಿದೇಶ

Iran ಸರ್ವಾಧಿಕಾರಿ ಈಗ 'ಜೀವಂತ ಶವ', 'ಪ್ರಜ್ಞಾಹೀನ'.. ಯುದ್ಧವೂ ಗೊತ್ತಿಲ್ಲ.. ಕದನ ವಿರಾಮದ ಅರಿವೂ ಇಲ್ಲ: ವರದಿ

ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಆರೋಗ್ಯದ ಮಾಹಿತಿ ಲಭ್ಯವಾಗಿದ್ದು, ಬ್ರಿಟಿಷ್ ಪತ್ರಿಕೆ ದಿ ಟೈಮ್ಸ್‌ನ ವರದಿಯ ಪ್ರಕಾರ, ಮೊಜ್ತಬಾ ಖಮೇನಿ ಬದುಕುಳಿದಿದ್ದಾರೆ.

ಟೆಹ್ರಾನ್: ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಹತ್ಯೆಗೀಡಾದ ಅಂದಿನ ಸರ್ವೋಚ್ಛ ನಾಯಕ ಆಯತೊಲ್ಲ ಖಮೇನಿ ಬಳಿಕ ಸರ್ವೋಚ್ಛ ನಾಯಕ ಪಟ್ಟಕೇರಿದ್ದ ಮೊಜ್ತಬಾ ಖಮೇನಿ ಕೂಡ ಇದೀಗ ಜೀವಂತವವಾಗಿದ್ದು, 'ಪ್ರಜ್ಞಾಹೀನ' ಸ್ಥಿತಿಯಲ್ಲಿರುವ ಮೊಜ್ತಾಬಾಗೆ ಯುದ್ಧವೂ ಗೊತ್ತಿಲ್ಲ.. ಕದನ ವಿರಾಮದ ಅರಿವೂ ಇಲ್ಲ ಎಂದು ಹೇಳಲಾಗಿದೆ.

ಹೌದು.. ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಆರೋಗ್ಯದ ಮಾಹಿತಿ ಲಭ್ಯವಾಗಿದ್ದು, ಬ್ರಿಟಿಷ್ ಪತ್ರಿಕೆ ದಿ ಟೈಮ್ಸ್‌ನ ವರದಿಯ ಪ್ರಕಾರ, ಮೊಜ್ತಬಾ ಖಮೇನಿ ಬದುಕುಳಿದಿದ್ದಾರೆ. ಆದರೆ ಅವರ ಸ್ಥಿತಿ ದೇಶವನ್ನು ನಡೆಸಲು ಅಸಮರ್ಥವಾಗಿದೆ ಎಂದು ವರದಿ ಮಾಡಿದೆ.

ಮೊಜ್ತಾಬಾ ಖಮೇನಿ ಪ್ರಸ್ತುತ ಪ್ರಜ್ಞಾಹೀನರಾಗಿದ್ದು, ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊಜ್ತಬಾ ಖಮೇನಿ ಸದ್ಯ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಥವಾ ಆಡಳಿತ ನಡೆಸುವ ಸಾಮರ್ಥ್ಯವನ್ನು ಹೊಂದಿಲ್ಲ. ಅವರಿಗೆ ಯುದ್ಧದ ಸುದ್ದಿಯಿಲ್ಲ, ಕದನ ವಿರಾಮದ ಅರಿವಿಲ್ಲ ಎಂದು ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈ ಮಾಹಿತಿ ಒಂದು ರಾಜತಾಂತ್ರಿಕ ಜ್ಞಾಪಕ ಪತ್ರದಲ್ಲಿ (ಡಿಪ್ಲೊಮ್ಯಾಟಿಕ್ ಮೆಮೊ) ಇದೆ. ಈ ಜ್ಞಾಪಕ ಪತ್ರ ಅಮೆರಿಕ ಮತ್ತು ಇಸ್ರೇಲಿ ಗುಪ್ತಚರ ಸಂಸ್ಥೆಗಳ ಮಾಹಿತಿಯನ್ನು ಆಧರಿಸಿದೆ. ಇದನ್ನು ಗಲ್ಫ್ ರಾಷ್ಟ್ರಗಳಲ್ಲಿನ ಮಿತ್ರ ದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ. ಪತ್ರಿಕೆಯ ಪ್ರಕಾರ, ಮೊಜ್ತಬಾ ಖಮೇನಿಗೆ ಟೆಹ್ರಾನ್‌ನಿಂದ ಸುಮಾರು 140 ಕಿಲೋಮೀಟರ್ ದಕ್ಷಿಣಕ್ಕಿರುವ ಪವಿತ್ರ ನಗರ ಕೋಮ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಿಂದಿನ ವರದಿಗಳಲ್ಲಿ ಮೊಜ್ತಬಾ ರಷ್ಯಾಕ್ಕೆ ಕರೆದೊಯ್ಯಲ್ಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ರಷ್ಯಾದ ರಾಯಭಾರಿ, ಅವರು ಇರಾನ್‌ನಲ್ಲೇ ಉಳಿದಿದ್ದಾರೆ ಎಂದು ತಿಳಿಸಿದ್ದರು. ಈಗ ದಿ ಟೈಮ್ಸ್ ಈ ಮಾಹಿತಿಯನ್ನು ದೃಢಪಡಿಸಿದೆ ಎನ್ನಲಾಗಿದೆ.

ಫೆಬ್ರವರಿ 28 ರಂದು ಅಗಿದ್ದೇನು?

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಮೊಜ್ತಬಾ ಖಮೇನಿ ಅವರ ತಂದೆ, ಇರಾನ್‌ನ ದೀರ್ಘಕಾಲದ ಸರ್ವೋಚ್ಚ ನಾಯಕ ಅಲಿ ಖಮೇನಿ ಸೇರಿದಂತೆ ಕುಟುಂಬದ ಹಲವು ಸದಸ್ಯರು ಬಲಿಯಾಗಿದ್ದರು. ಅದೇ ದಾಳಿಯಲ್ಲಿ ಮೊಜ್ತಬಾ ಕೂಡ ಗಾಯಗೊಂಡಿದ್ದರು. ಆದರೆ ಅವರು ಅದೃಷ್ಟವಶಾತ್ ಬದುಕುಳಿದಿದ್ದು, ದಾಳಿ ನಡೆಯುವ ಕೆಲವೇ ನಿಮಿಷಗಳ ಮುಂಚೆ ಅವರು ತಮ್ಮ ಮನೆಯ ತೋಟಕ್ಕೆ ಹೊರಟಿದ್ದರು ಎಂಬುದು ತಿಳಿದುಬಂದಿದೆ.

ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು

ಇಸ್ರೇಲಿ “ಬ್ಲೂ ಸ್ಪ್ಯಾರೋ” ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮನೆಯನ್ನು ಹೊಡೆಯುವ ಕೆಲವೇ ಕ್ಷಣಗಳ ಮುಂಚೆ ಅವರು ಕೆಲ ಕೆಲಸಗಳಿಂದ ಹೊರಗೆ ಹೊರಟಿದ್ದರು ಎಂದು ಸೋರಿಕೆಯಾದ ಆಡಿಯೋ ತಿಳಿಸುತ್ತದೆ. ಹೀಗಾಗಿ ಅವರು ಕೆಲವೇ ಸೆಕೆಂಡುಗಳ ಅಂತರದಲ್ಲಿ ಪಾರಾಗಿದ್ದರು. ಆದರೆ ದಾಳಿಯಲ್ಲಿ ಅವರಿಗೆ ಗಂಭೀರ ಗಾಯಗಳಾಗಿದ್ದವು ಎಂದು ತಿಳಿದುಬಂದಿದೆ.

ನಿರ್ಧಾರಗಳಲ್ಲಿ ಭಾಗಿಯಾಗಿಲ್ಲ: ವರದಿ

ಯುದ್ಧದ ಆರಂಭದಲ್ಲೇ ಮೊಜ್ತಬಾ ಖಮೇನಿರನ್ನು ಇರಾನ್‌ನ ಹೊಸ ಸರ್ವೋಚ್ಚ ನಾಯಕರಾಗಿ ಘೋಷಿಸಲಾಗಿತ್ತು. ಆದರೆ ಅವರು ಇದುವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರ ಹೆಸರಿನಲ್ಲಿ ಬಂದ ಸಂದೇಶಗಳು ಕೂಡ ವಿರಳವಾಗಿವೆ. ಹೆಚ್ಚಿನ ಸಂದೇಶಗಳು ಇರಾನ್‌ನ ವಿಶೇಷ ಸೈನ್ಯ ಘಟಕ IRGC ಮೂಲಕ ಬರುತ್ತಿವೆ ಎನ್ನಲಾಗಿದೆ.

ಆಯತೊಲ್ಲ ಖಮೇನಿ ಅಂತ್ಯಕ್ರಿಯೆ

ಇನ್ನು ಅದೇ ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಹತ್ಯೆಗೀಡಾದ ಹಿರಿಯ ಖಮೇನಿಯವರ ದೇಹವನ್ನು ಶಿಯಾ ಪಾದ್ರಿಗಳ ಅಧಿಕಾರದ ಸ್ಥಾನವೆಂದು ಪರಿಗಣಿಸಲಾದ ಕೋಮ್‌ನಲ್ಲಿ ಸಮಾಧಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಅಂದಹಾಗೆ ಇರಾನ್‌ನ ಸರ್ವೋಚ್ಚ ನಾಯಕನ ಸ್ಥಳ ಬಹಿರಂಗಗೊಳ್ಳುತ್ತಿರುವುದು ಇದೇ ಮೊದಲು. ಕೋಮ್ ಕೇಂದ್ರ ನಗರವು ಟೆಹ್ರಾನ್‌ನ ದಕ್ಷಿಣಕ್ಕೆ 87 ಮೈಲುಗಳು (ಸುಮಾರು 140 ಕಿಲೋಮೀಟರ್) ದೂರದಲ್ಲಿದೆ. ಈ ನಗರವನ್ನು ಶಿಯಾ ಇಸ್ಲಾಂನಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇಸ್ಲಾಮಿಕ್ ಗಣರಾಜ್ಯದ ಧಾರ್ಮಿಕ ರಾಜಧಾನಿ ಎಂದು ಕರೆಯಲಾಗುತ್ತದೆ.

"ಒಂದಕ್ಕಿಂತ ಹೆಚ್ಚು ಸಮಾಧಿಗಳಿಗಾಗಿ" "ಕೋಮ್‌ನಲ್ಲಿ ದೊಡ್ಡ ಸಮಾಧಿಯನ್ನು ನಿರ್ಮಿಸಲು ಅಗತ್ಯವಾದ ಅಡಿಪಾಯ ಹಾಕುವ" ಸಿದ್ಧತೆಯ ಬಗ್ಗೆ ಯುಎಸ್ ಮತ್ತು ಇಸ್ರೇಲಿ ಬೇಹುಗಾರಿಕೆ ಸಂಸ್ಥೆಗಳು ಇಂಟೆಲ್ ಹೊಂದಿವೆ ಎಂದು ವರದಿಯಾಗಿದೆ, ಇದು ಇತರ ಕುಟುಂಬ ಸದಸ್ಯರನ್ನು ದಿವಂಗತ ಸರ್ವೋಚ್ಚ ನಾಯಕನ ಪಕ್ಕದಲ್ಲಿ ಸಮಾಧಿ ಮಾಡಬಹುದು ಎಂದು ಸೂಚಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹೇಳಿ ಇಲ್ಲದಿದ್ದರೆ ಜೈಲಿಗೆ ಹೋಗಿ': F-15 ಜೆಟ್‌ ಸೂಕ್ಷ್ಮ ಮಾಹಿತಿ 'ಸೋರಿಕೆದಾರನ' ಪತ್ತೆಗೆ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ, ಮಾಧ್ಯಮಗಳಿಗೆ ಬೆದರಿಕೆ!

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವಲ್ಲೇ ಅಮೆರಿಕಾ ಪ್ರವಾಸ ಹೊರಟ ವಿಕ್ರಮ್ ಮಿಸ್ರಿ: ವ್ಯಾಪಾರ-ರಕ್ಷಣಾ ಸಹಕಾರ ಕುರಿತು ಚರ್ಚೆ

ಆಂಧ್ರಪ್ರದೇಶ ರಾಜಧಾನಿಯಾಗಿ Amaravati ಅಧಿಕೃತ: ಕೊನೆಗೂ ಬಿತ್ತು ರಾಷ್ಟ್ರಪತಿಗಳ ಅಂಕಿತ, ಸಿಎಂ ನಾಯ್ಡು ಅಭಿನಂದನೆ!

ಕೈಗಾ ಪರಮಾಣು ವಿದ್ಯುತ್ ಸ್ಥಾವರ: 5, 6ನೇ ಘಟಕಗಳ ನಿರ್ಮಾಣ ಕಾರ್ಯಕ್ಕೆ ವಿರೋಧ, ಅರಣ್ಯ ಅನುಮತಿ ಇಲ್ಲದೇ ಯೋಜನೆ ಮುಂದುವರಿಸಿದ ಆರೋಪ..?

West-Asia war: 'ಬೇಜವಾಬ್ದಾರಿಯುತ ಬೆದರಿಕೆ'ಗಳಿಗೆ ತಲೆಬಾಗಲ್ಲ: ಟ್ರಂಪ್'ಗೆ ಇರಾನ್ ತಿರುಗೇಟು, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ

SCROLL FOR NEXT