ಚೀನಾದ ಸಾಂದರ್ಭಿಕ ಚಿತ್ರ 
ವಿದೇಶ

Iran War: ಅಮೆರಿಕ-ಇಸ್ರೇಲ್ ವಿರುದ್ಧ ಇರಾನ್‌ ಸೇನೆಗೆ ಬೆಂಬಲ; ಸ್ಪಷ್ಟನೆ ಕೊಟ್ಟ ಚೀನಾ, ಹೇಳಿದ್ದೇನು?

ಚೀನಾವನ್ನು ಗುರಿಯಾಗಿಟ್ಟುಕೊಂಡು ಊಹಾಪೋಹ ಮತ್ತು ಸುಳ್ಳು ಮಾಹಿತಿಯನ್ನು ಹಬ್ಬಿಸಲಾಗುತ್ತಿದೆ. ಇದನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ಝಾಂಗ್ ಕ್ಸಿಯೋಗಾಂಗ್ ಹೇಳಿದ್ದಾರೆ.

ಬೀಜಿಂಗ್: ಪ್ರಬಲ ಅಮೆರಿಕ- ಇಸ್ರೇಲ್ ವಿರುದ್ಧ ಸುಮಾರು 40 ದಿನಗಳ ಕಾಲ ಹೋರಾಡಿದ ಇರಾನ್ ಸೇನೆಗೆ ಚೀನಾ ಬೆಂಬಲ ನೀಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಚೀನಾದ ಸಂಸ್ಥೆಗಳು ಇರಾನ್ ಮಿಲಿಟರಿಗೆ ಉಪಗ್ರಹ ಚಿತ್ರಣ ಮತ್ತು ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಉಪಕರಣಗಳನ್ನು ಒದಗಿಸಿವೆ ಎಂದು ವರದಿಯಾಗಿದೆ.

ಈ ಬಗ್ಗೆ ಚೀನಾದ ರಕ್ಷಣಾ ಸಚಿವಾಲಯ ಗುರುವಾರ ಸ್ಪಷ್ಟನೆ ನೀಡಿದೆ. ಚೀನಾವನ್ನು ಗುರಿಯಾಗಿಟ್ಟುಕೊಂಡು ಊಹಾಪೋಹ ಮತ್ತು ಸುಳ್ಳು ಮಾಹಿತಿಯನ್ನು ಹಬ್ಬಿಸಲಾಗುತ್ತಿದೆ. ಇದನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ಝಾಂಗ್ ಕ್ಸಿಯೋಗಾಂಗ್ ಹೇಳಿದ್ದಾರೆ.

ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಇಂಟರ್ನ್ಯಾಷನಲ್ ಕಾರ್ಪೊರೇಷನ್ (SMIC) ಇರಾನ್ ಮಿಲಿಟರಿಗೆ ಚಿಪ್ ತಯಾರಿಕಾ ಉಪಕರಣ ಒದಗಿಸಿದೆ ಮತ್ತು ಚೀನಾದ ವಾಣಿಜ್ಯ ಉಪಗ್ರಹ ಕಂಪನಿಯು ಮಧ್ಯಪ್ರಾಚ್ಯದಲ್ಲಿ ಯುಎಸ್ ಮಿಲಿಟರಿ ನೆಲೆಗಳ ಪೋಟೋಗಳನ್ನು ಬಿಡುಗಡೆ ಮಾಡಿದೆ ಎಂಬ ವರದಿಗೆ ಈ ರೀತಿಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

ಇರಾನ್‌ಗೆ ನೆರವಾಗಲು ಚೀನಾ ಮತ್ತು ರಷ್ಯಾ ಕೈಗೊಂಡ ಕ್ರಮಗಳ ಬಗ್ಗೆ ನಮಗೆ ಗೊತ್ತಿದೆ. ಅಗತ್ಯವಿದ್ದರೆ ಪ್ರತಿಕ್ರಿಯಿಸುವುದಾಗಿ ಹೇಳಿರುವ ಯುಎಸ್ ಅಧಿಕಾರಿಗಳ ಹೇಳಿಕೆಗಳನ್ನು ಚೀನಾ ದೃಢವಾಗಿ ತಿರಸ್ಕರಿಸಿದೆ ಎಂದು ಜಾಂಗ್ ಹೇಳಿದರು.

ಇರಾನ್ ವಿಚಾರದಲ್ಲಿ ಚೀನಾದ ನಿಲುವು ನೇರವಾಗಿರುತ್ತದೆ. ನಾವು ಯಾವಾಗಲೂ ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ನಿಲುವನ್ನು ಎತ್ತಿ ಹಿಡಿದಿದ್ದೇವೆ. ಚೀನಾ ಶಾಂತಿ ಮಾತುಕತೆಗಳನ್ನು ಪ್ರೋತ್ಸಾಹಿಸಲು ನಿರಂತರವಾಗಿ ಕೆಲಸ ಮಾಡಿದೆ ಮತ್ತು 'ಬೆಂಕಿಗೆ ತುಪ್ಪ ಸುರಿಸುವ ಕೆಲಸವನ್ನು ಎಂದಿಗೂ ಮಾಡಲ್ಲ ಎಂದಿದ್ದಾರೆ.

ಯಾರು ಒಂದನ್ನು ಹೇಳಿ, ಇನ್ನೊಂದನ್ನು ಮಾಡುತ್ತಿರುವವರು, ಅವರೇ ಯುದ್ಧ ಸೃಷ್ಟಿಸಿ, ಜಗತ್ತಿನಾದ್ಯಂತ ಬಿಕ್ಕಟ್ಟು ಸೃಷ್ಟಿಸಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯ ಇದನ್ನು ಸ್ಪಷ್ಪವಾಗಿ ನೋಡಿದೆ ಎಂದು ಅವರು ಹೇಳಿರುವುದಾಗಿ ಸರ್ಕಾರಿ ಸ್ವಾಮ್ಯದ ಚೀನಾ ಡೈಲಿ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!