ಇರಾನ್‌ ಮೇಲೆ ವೈಮಾನಿಕ ದಾಳಿ 
ವಿದೇಶ

ಇರಾನ್‌ ಮೇಲೆ ಅಮೆರಿಕ-ಇಸ್ರೇಲ್ ದಾಳಿ; ಯುದ್ಧದ ವೇಳೆ 3,300ಕ್ಕೂ ಹೆಚ್ಚು ಜನರು ಸಾವು; ಪತ್ತೆಯಾಗದ ನಾಲ್ವರ ಗುರುತು!

ಮೃತರಲ್ಲಿ 383 ಮಂದಿ 18 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎಂದು ಮಸ್ಜೆದಿ ಹೇಳಿದ್ದಾರೆ.

ದುಬೈ: ಇಸ್ರೇಲ್ ಮತ್ತು ಅಮೆರಿಕದೊಂದಿಗಿನ ಸಂಘರ್ಷದಲ್ಲಿ ಇರಾನ್‌‌ನಲ್ಲಿ ಕನಿಷ್ಠ 3,375 ಜನರು ಸಾವಿಗೀಡಾಗಿದ್ದಾರೆ ಎಂದು ಟೆಹ್ರಾನ್‌ನ ಕಾನೂನು ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥ ಅಬ್ಬಾಸ್ ಮಸ್ಜೆದಿ ಹೇಳಿದ್ದಾರೆ.

ನ್ಯಾಯಾಂಗದ ಮಿಜಾನ್ ಸುದ್ದಿಸಂಸ್ಥೆ ಮತ್ತು ಇತರ ಮಾಧ್ಯಮಗಳು ಸೋಮವಾರ ಮಸ್ಜೇದಿ ಹೇಳಿಕೆಯನ್ನು ಉಲ್ಲೇಖಿಸಿದ್ದು, ಮೃತರ ಪೈಕಿ ಕೇವಲ ನಾಲ್ವರು ಗುರುತು ಪತ್ತೆಯಾಗಿಲ್ಲ. ಯುದ್ಧದಿಂದಾಗಿ 2,875 ಪುರುಷರು ಮತ್ತು 496 ಮಹಿಳೆಯರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿವೆ.

ಮೃತರಲ್ಲಿ 383 ಮಂದಿ 18 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎಂದು ಮಸ್ಜೆದಿ ಹೇಳಿದ್ದಾರೆ.

ದೇಶದಲ್ಲಿ ಮಿಲಿಟರಿ ನೆಲೆಗಳು ಮತ್ತು ಶಸ್ತ್ರಾಗಾರಗಳನ್ನು ಗುರಿಯಾಗಿಸಿಕೊಂಡು ನಡೆದ ತೀವ್ರವಾದ ಬಾಂಬ್ ದಾಳಿಯ ಮಟ್ಟವನ್ನು ಗಮನಿಸಿದರೆ, ಮಸ್ಜೆದಿ ಅವರ ಅಂಕಿಅಂಶಗಳು ಭದ್ರತಾ ಪಡೆ ಸದಸ್ಯರನ್ನು ಒಳಗೊಂಡಿವೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದ ಅಡುಗೆ ಅನಿಲ ಬೆಲೆ ಇನ್ನೂ ವಿಶ್ವದಲ್ಲೇ ಅಗ್ಗವಾಗಿದೆ: LPG ದರ ಏರಿಕೆ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

ಖಾತೆ ಹಂಚಿಕೆ ಕಿತ್ತಾಟ: ಆರಂಭದಲ್ಲೇ ಅಸಮಾಧಾನದ ಅಲೆ: ಡಿಕೆಶಿ ಸರ್ಕಾರಕ್ಕಿದು ಆರಂಭಿಕ ಆಘಾತವೋ, ದೊಡ್ಡ ಸಂಕಷ್ಟದ ಮುನ್ಸೂಚನೆಯೋ?

'ಅವರ ಕಾಲಿನ ಧೂಳಿಗೂ ನನ್ನ ಮಗ ಸಮನಲ್ಲ': ಸಚಿನ್, ಬ್ರಾಡ್ಮನ್ ಜೊತೆ ಹೋಲಿಕೆ ಕುರಿತು Vaibhav Sooryavanshi ತಂದೆ ಹೇಳಿಕೆ!

ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ: ಗೃಹಬಳಕೆ ಸಿಲಿಂಡರ್‌ ದರ ಮತ್ತೆ ಏರಿಕೆ, ಬರೋಬ್ಬರಿ 29 ರೂ. ಹೆಚ್ಚಳ..!

ಶ್ರೇಯಸ್ ಅಯ್ಯರ್‌ಗೆ ಟಿ20 ನಾಯಕತ್ವ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ Suryakumar Yadav ನಿವೃತ್ತಿ? ಎಕ್ಸ್ ಪೋಸ್ಟ್ ವೈರಲ್!

SCROLL FOR NEXT